ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದಿಂದ "ಸ್ವಚ್ಛ ದೆಹಲಿ" ಆಪ್

ವಾಯು ಮಾಲಿನ್ಯ ನಿಯಂತ್ರಣಕ್ಕೆ ನೆರವಾಗಲು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಬುಧವಾರ "ಸ್ವಚ್ಛ ದೆಹಲಿ" ಆಪ್ ಬಿಡುಗಡೆ ಮಾಡಿದ್ದಾರೆ. ಈ ಆಪ್ ಮೂಲಕ ಕಸದ ಬಗ್ಗೆ, ಬಯಲಲ್ಲಿ ಒಣ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ನೆರವಾಗಲು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಬುಧವಾರ "ಸ್ವಚ್ಛ ದೆಹಲಿ" ಆಪ್ ಬಿಡುಗಡೆ ಮಾಡಿದ್ದಾರೆ. ಈ ಆಪ್ ಮೂಲಕ ಕಸದ ಬಗ್ಗೆ, ಬಯಲಲ್ಲಿ ಒಣ ಎಲೆಗಳನ್ನು ಸುಡುವ ಮತ್ತು ವಾಹನಗಳ ಮಾಲಿನ್ಯವನ್ನು ಅಧಿಕಾರಿಗಳಿಗೆ ಸೂಚಿಸಬಹುದಾಗಿದೆ. 
ಈ ಆಪ್ ಮೂಲಕ ವಾಯು ಮಾಲಿನ್ಯ ತರಬಲ್ಲ ಚಟುವಟಿಕೆಗಳ ಫೋಟೋಗಳನ್ನು ನಾಗರಿಕರು ಕಳುಹಿಸಬಹುದಾಗಿದೆ. 
ಆಪ್ ಬಿಡುಗಡೆ ಮಾಡಿರುವ ಸಿಸೋಧಿಯಾ, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಕೇಂದ್ರ ಸರ್ಕಾರ ಮತ್ತು ಇತರ ಸಂಬಂಧಿತ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ನಗರದಲ್ಲಿ ಮಾಲಿನ್ಯ ನಿಯಂತ್ರಣ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 
"ಈಗ ದೆಹಲಿ ನಿವಾಸಿಗಳು ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳು, ಬಯಲಿನಲ್ಲಿ ಒಣ ಎಲೆಗಳನ್ನು, ಪ್ಲಾಸ್ಟಿಕ್ ಮತ್ತು ಹಳೆ ಟೈರ್ ಗಳನ್ನೂ ಸುಡುವ, ಕಸ ಎತ್ತದ ತಿಪ್ಪೆಗಳು, ಕಟ್ಟಡ ನಿರ್ಮಾಣದ ಸಮಯದಲ್ಲಿ ಉಳಿದ ಕಸ ಇವುಗಳ ಫೋಟೋ ತೆಗೆದು ಕಳುಹಿಸಬಹುದಾಗಿದೆ" ಎಂದು ಅವರು ಹೇಳಿದ್ದಾರೆ. 
"ಈ ಫೋಟೋವನ್ನು ಸಂಬಂಧಿತ ಇಲಾಖೆಗೆ ಕಳುಹಿಸಿ, ತೊಂದರೆಯನ್ನು ನಿವಾರಿಸಲು ಪ್ರಯತ್ನಿಸಲಾಗುವುದು"ಎಂದು ಕೂಡ ಉಪಮುಖ್ಯಮಂತ್ರಿ ಹೇಳಿದ್ದಾರೆ.
ಈ ತೊಂದರೆಯನ್ನು ನಿವಾರಿಸಲು ತಳಮಟ್ಟದಲ್ಲಿ ಸಾರ್ವಜನಿಕರ ಬೆಂಬಲ ಬೇಕು ಎಂದಿದ್ದಾರೆ. 
ಸ್ವಚ್ಛ ಭಾರತ ಆಪ್ ಈಗ ಗೂಗಲ್ ಪ್ಲೆ ಸ್ಟೋರ್ ನಲ್ಲಿ ಲಭ್ಯವಿದ್ದು ಯಾವುದೇ ಸ್ಮಾರ್ಟ್ ಫೋನ್ ನಲ್ಲಿ ಇಳಿಸಿಕೊಂಡು ಬಳಸಬಹುದಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com