ಪ್ರಧಾನ ಸುದ್ದಿ

ಸೆಲ್ಫಿ ಕ್ಲಿಕ್ಕಿಸಿ ಕೆಲವೇ ನಿಮಿಷಗಳಲ್ಲಿ ನೇಣಿಗೆ ಶರಣಾದ ಹೈದರಾಬಾದ ಕ್ಯಾಬ್ ಚಾಲಕ

ಹೈದರಾಬಾದ್ ನ ನಲಗೊಂಡ ಜಿಲ್ಲೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ನಂತರ ಕೆಲವೇ ನಿಮಿಷಗಳಲ್ಲಿ ೨೮ ವರ್ಷದ ಕ್ಯಾಬ್ ಚಾಲಕ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ.

ಸೆಲ್ಫಿ ಕ್ಲಿಕ್ಕಿಸಿ ಕೆಲವೇ ನಿಮಿಷಗಳಲ್ಲಿ ನೇಣಿಗೆ ಶರಣಾದ ಹೈದರಾಬಾದ ಕ್ಯಾಬ್ ಚಾಲಕ
ಸಾಂದರ್ಭಿಕ ಚಿತ್ರ
Published On :
ಹೈದರಾಬಾದ್: ಹೈದರಾಬಾದ್ ನ ನಲಗೊಂಡ ಜಿಲ್ಲೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ನಂತರ ಕೆಲವೇ ನಿಮಿಷಗಳಲ್ಲಿ ೨೮ ವರ್ಷದ ಕ್ಯಾಬ್ ಚಾಲಕ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ. 
ನಲಗೊಂಡ ಜಿಲ್ಲೆಯ ಚಿತ್ಯಾಲ ಗ್ರಾಮದ ಕೆ ಕೃಷ್ಣಕುಮಾರ್ (೨೮) ಬದುಕು ಅರಸಿ ಪತ್ನಿ ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಹೈದಾರಾಬಾದ್ ಗೆ ಬಂದವರು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇವರು ರಾಮನಾಥಪುರದ ಶ್ರೀನಿವಾಸಪುರಮ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 
ಕೆಲವು ದಿನಗಳಿಂದ ಈ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಮೂರೂ ದಿನಗಳ ಹಿಂದೆಯಷ್ಟೇ ಅವರ ಪತ್ನಿ ಅರುಣಾ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು. 
ಬುಧವಾರ ರಾತ್ರಿ ಟವೆಲ್ ಒಂದನ್ನು ಹಗ್ಗದ ರೀತಿ ಬಳಸಿ ಕುತ್ತಿಗೆಗೆ ಸುತ್ತಿಕೊಂಡು ಸೆಲ್ಫಿ ತೆಗೆದುಕೊಂಡು ತನ್ನ ಕುಟುಂಬಕ್ಕೆ ವಿದಾಯ ಹೇಳಿದ್ದಾರೆ. ನಂತರ ಅವರ ಫೋನ್ ಅನ್ನು ಜೇಬಿನಲ್ಲಿಟ್ಟು ನೇಣಿಗೆ ಶರಣಾಗಿದ್ದಾರೆ.
ಕೃಷ್ಣಕುಮಾರ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದೆ. ಕೌಟುಂಬಿಕ ತೊಂದರೆಗಳು ಮತ್ತು ಆರ್ಥಿಕ ಸಂಕಷ್ಟಗಳು ತನ್ನ ಆತ್ಮಹತ್ಯೆಗೆ ಕಾರಣ ಎಂದು ಅವರು ಅದರಲ್ಲಿ ಬರೆದಿದ್ದಾರೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. 
ಪತ್ನಿ ಅರುಣಾ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.