ಇಂದು ನೋಟ್ ನಿಷೇಧದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಶಾಂತನಗೌಡ ಅವರು, ನೋಟ್ ನಿಷೇಧ ಮಾಡಿದ್ದು ಒಳ್ಳೆಯದೇ ಆಯ್ತು. ಆದರೆ ಜನಾರ್ದನ ರೆಡ್ಡಿ ರೀತಿ ಅದ್ದೂರಿ ಮದುವೆ ಮಾಡುವಂತಿಲ್ಲ, ಐಶಾರಾಮಿ ಕಾರು ಕೊಳ್ಳುವಂತಿಲ್ಲ, 5 ತೊಲ ಬಂಗಾರಕ್ಕಿಂತ ಹೆಚ್ಚು ಬಂಗಾರ ಹೊಂದುವಂತಿಲ್ಲ ಹಾಗೂ 5 ಎಕರೆಗಿಂತ ಹೆಚ್ಚು ಜಮೀನು ಹೊಂದುವಂತಿಲ್ಲ ಎಂಬ ಕಾನೂನು ತರಲಿ ಎಂದರು. ಅಲ್ಲದೆ ಇವೆಲ್ಲವನ್ನೂ ಮಾಡಿದರೆ ನಾನು ಮೋದಿ ಅವರ ಪಾದ ಪೂಜೆ ಮಾಡುತ್ತೇನೆ. ಅವರ ಪ್ರತಿಮೆ ನಮ್ಮ ಮನೆಯಲ್ಲಿಟ್ಟುಕೊಂಡು ಪೂಜೆ ಮಾಡುತ್ತೇನೆ ಎಂದಿದ್ದಾರೆ.