ನೋಟು ಹಿಂಪಡೆತ ನಿರ್ಧಾರ ದೇಶದ ರಾಜಕೀಯದಲ್ಲಿ ಪಾವಿತ್ರ್ಯತೆ ತರಲಿದೆ: ರಾಜನಾಥ್

Published On :
ರೇವಾರಿ: ಹರ್ಯಾಣದ ನಗರ ರೇವಾರಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರಸರ್ಕಾರದ ನೋಟು ಹಿಂಪಡೆತ ನಿರ್ಧಾರ ದೇಶದ ರಾಜಕೀಯದಲ್ಲಿ ಪಾವಿತ್ರ್ಯತೆ ತರಲಿದೆ ಎಂದು ಬುಧವಾರ ಹೇಳಿದ್ದಾರೆ.
"ಈ ನಿರ್ಧಾರ ಜನರಿಗೆ ಸ್ವಲ್ಪ ಸಮಯದವರೆಗೆ ತೊಂದರೆ ನೀಡಲಿದೆ, ಬಹುಶಃ ಒಂದು ತಿಂಗಳವರೆಗೆ, ಆದರೆ ಇದು ರಾಜಕೀಯದಲ್ಲಿ ಪಾವಿತ್ರ್ಯತೆ ತರಲು ಸಹಕರಿಸಲಿದೆ" ಎಂದು ಶಾಹೀದ್ ಮ್ಮಾನ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಹೇಳಿದ್ದಾರೆ.
"ಆರ್ಥಿಕ ಅಸಮಾನತೆಯನ್ನು ಕುಗ್ಗಿಸಬೇಕಿದೆ, ಆದುದರಿಂದ ಸರ್ಕಾರ ೫೦೦ ರೂ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿದೆ. ಯಾವುದಾದರೂ ರಾಜಕೀಯ ಪಕ್ಷ ದೇಣಿಗೆ ಪಡೆದಿದ್ದರೆ ಈಗ ಅದನ್ನು ಸಮರ್ಥಿಸಿಕೊಳ್ಳಬೇಕಿದೆ" ಎಂದು ಅವರು ಹೇಳಿದ್ದಾರೆ.
"ಜನರಿಗೆ ಬೇಕಾದಂತಹ ಆಡಳಿತ ನೀಡಲು ನಾವಿಲ್ಲಿ ಇದ್ದೇವೆ. ಭ್ರಷ್ಟಾಚಾರಕ್ಕೆ ಯಾವುದೇ ಜಾಗವಿಲ್ಲ. ಸರ್ಕಾರ ಇದಕ್ಕಾಗಿ ಶ್ರಮಿಸುತ್ತಿದ್ದು, ಯಾವುದೇ ಭ್ರಷ್ಟಾಚಾರದ ಚಟುವಟಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
"ನೀವು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿದ್ದು ಕೇವಲ ಸರ್ಕಾರ ರಚಿಸುವುದಕ್ಕಲ್ಲ ಆದರೆ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ಸಚಿವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


