ನೋಟು ಹಿಂಪಡೆತ ವಿರುದ್ಧ ದೇಶದಾದ್ಯಂತ ಕೇಜ್ರಿವಾಲ್ ರ್ಯಾಲಿ

ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯನ್ನು ಒಳಗೊಂಡಂತೆ, ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಡೆಯನ್ನು ವಿರೋಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯನ್ನು ಒಳಗೊಂಡಂತೆ, ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಡೆಯನ್ನು ವಿರೋಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೇಶದಾದ್ಯಂತ ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಎಎಪಿ ಗುರುವಾರ ಘೋಷಿಸಿದೆ. 
ಹಾಗೆಯೇ ನವೆಂಬರ್ ೨೮ ರಂದು ಜಿಲ್ಲಾ ಮುಖ್ಯಕಚೇರಿಗಳಲ್ಲಿ ಎಎಪಿ ಪಕ್ಷ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆ ನಡೆಸಲಿದೆ. 
"ಇದು ೮ ಲಕ್ಷ ಕೋಟಿ ರೂ ಹಗರಣ" ಎಂದಿರುವ ಎಎಪಿ ಮುಖಂಡ ಆಶೀಶ್ ಕೇತನ್, ನರೇಂದ್ರ ಮೋದಿ ಅವರ ಈ ನಿರ್ಧಾರದಿಂದ ನಗದು ಬಿಕ್ಕಟ್ಟು ಉಂಟಾಗಿ, ಅವ್ಯವಸ್ಥೆಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದ್ದಾರೆ. 
ಡಿಸೆಂಬರ್ ೧, ೭ ಹಾಗು ೧೮ ರಂದು ಕ್ರಮವಾಗಿ ಉತ್ತರಪ್ರದೇಶದ ಮೀರತ್, ವಾರಣಾಸಿ ಮತ್ತು ಲಖನೌ ನಲ್ಲಿಯೂ ಹಾಗು ಡಿಸೆಂಬರ್ ೨೦, ೨೨ ಮತ್ತು ೨೩ ರಂದು ಭೋಪಾಲ್, ರಾಂಚಿ ಮತ್ತು ಜೈಪುರದಲ್ಲಿ ಕೇಜ್ರಿವಾಲ್ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. 
"ಈ ರ್ಯಾಲಿಗಳಲ್ಲಿ ನೋಟು ಹಿಂಪಡೆತದ ಕ್ರಮದ ಬಗ್ಗೆ ಸಾರ್ವಜನಿಕರಿಗೆ ಏಳು ಪ್ರಶ್ನೆಗಳನ್ನು ಕೇಳಲಿದ್ದೇವೆ" ಎಂದು ಕೇತನ್ ಹೇಳಿದ್ದಾರೆ. 
ದೊಡ್ಡ ದೊಡ್ಡ ಉದ್ದಿಮೆದಾರರ ೧.೧೪ ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕ್ರಮವನ್ನು ಕೂಡ ಎಎಪಿ ಪಕ್ಷ ಪ್ರಶ್ನಿಸಲಿದೆ ಎಂದು ಕೇತನ್ ಹೇಳಿದ್ದಾರೆ. "ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ೬೪೮ ಜನರ ಪಟ್ಟಿ ಕೇಂದ್ರ ಸರ್ಕಾರದ ಬಳಿಯಿದೆ. ಇದನ್ನು ಸಾರ್ವಜನಿಕಗೊಳಿಸಬಾರದೇ?" ಎಂದು ಕೂಡ ಕೇತನ್ ಪ್ರಶ್ನಿಸಿದ್ದಾರೆ. 
ಕಪ್ಪು ಹಣ ತೊಲಗಿಸುವ ಹಾಗು ನಕಲಿ ನೋಟುಗಳಿಗೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ ನವೆಂಬರ್ ೮ ರಂದು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಈ ನಿರ್ಧಾರದಿಂದ ದೇಶದಾದ್ಯಂತ ಗೊಂದಲ ಮತ್ತು ಅವ್ಯವಸ್ಥೆ ದೃಷ್ಟಿಯಾಗಿದ್ದು, ಜನ ಹಣ ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳ ಎದುರು ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದ್ದರೆ, ಸಣ್ಣ ವ್ಯವಹಾರಗಳಿಗೆ ಭಾರಿ ಪೆಟ್ಟು ಬಿದ್ದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com