

ನವದೆಹಲಿ: ಕೇಂದ್ರ ಸರ್ಕಾರ ನಿಷೇಧಿಸಿರುವ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡಬಹುದಾಗಿದ್ದು, ಸರ್ಕಾರದ ಯಾವ ಯಾವ ಕೇಂದ್ರಗಳಲ್ಲಿ ಹಳೆಯ ನೋಟುಗಳನ್ನು ಚಲಾವಣೆ ಮಾಡಬಹುದು ಎಂಬುದರ ಸಣ್ಣ ಪಟ್ಟಿ ಇಲ್ಲಿದೆ.
1. ಪೆಟ್ರೋಲ್ ಬಂಕ್ ಗಳು
2. ರೈಲ್ವೇ ಟಿಕೆಟ್ ಬುಕ್ಕಿಂಗ್
3. ಸಾರಿಗೆ ಇಲಾಖೆ (ಬಸ್ ಮತ್ತು ಇತರೆ ಸರ್ಕಾರಿ ಸಾರಿಗೆ ಸೇವೆ-ಬಸ್ ಟಿಕೆಟ್ ಬುಕ್ಕಿಂಗ್)
4.ಸರ್ಕಾರಿ ಆಸ್ಪತ್ರೆಗಳು
5. ವಿಮಾನ ಟಿಕೆಟ್ ಬುಕ್ಕಿಂಗ್
6. ಶವಾಗಾರಗಳು, ಚಿತಾಗಾರ ಮತ್ತು ಸ್ಮಶಾನಗಳು
7. ಹಾಲಿನ ಕೇಂದ್ರಗಳು
8.ಮೆಟ್ರೋ ರೈಲು ನಿಲ್ದಾಣ
9. ಮೆಡಿಕಲ್ ಕೇಂದ್ರ (ವೈದ್ಯರು ಸೂಚಿಸಿದ ಔಷಧಿಕೊಳ್ಳಲು ಮಾತ್ರ)
10.ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಕೇಂದ್ರ
11. ರೈಲ್ವೇ ಕ್ಯಾಟರಿಂಗ್ (ರೈಲುಗಳಲ್ಲಿ ಆಹಾರಕೊಳ್ಳಲು)
12.ನೀರು ಮತ್ತು ವಿದ್ಯುತ್ ಬಿಲ್ ಪಾವತಿ ಕೇಂದ್ರಗಳು
13. ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗಾಗಿ ಟಿಕೆಟ್
14. ಸರ್ಕಾರಿ ಗ್ರಾಹಕ ಸಹಕಾರಿ ಕೇಂದ್ರಗಳು (ಹಾಪ್ ಕಾಮ್ಸ್, ಎಂಎಸ್ ಐಎಲ್, ಸರ್ಕಾರಿ ಖಾದಿ ಬಂಡಾರ ಇತ್ಯಾದಿ)
15.ಸರ್ಕಾರೀ ಆದಾಯ ತೆರಿಗೆ ಇಲಾಖೆ ಮತ್ತು ಕಂದಾಯ ಇಲಾಖೆ
16. ಬಿತ್ತನೆ ಬೀಜ ಮತ್ತು ಕೃಷಿಕ ವಸ್ತುಗಳ ಸರ್ಕಾರಿ ಕೇಂದ್ರ ಇತ್ಯಾದಿ