ಜನ ಭ್ರಷ್ಟಾಚಾರದ ವಿರುದ್ಧ ಇದ್ದಾರೆ, ಅಭಿವೃದ್ಧಿ ನಿರೀಕ್ಷಿಸುತ್ತಿದ್ದಾರೆ: ಮೋದಿ

ದೇಶದಾದ್ಯಂತ ಬಿಜೆಪಿ ಪಕ್ಷದ ಮೇಲೆ ನಂಬಿಕೆಯಿಟ್ಟು, ಇತ್ತೀಚಿಗೆ ನಡೆದ ಹಲವು ಚುನಾವಣೆಗಳಲ್ಲಿ ಗೆಲುವು ತಂದಿರುವುದಕ್ಕೆ ಮತದಾರರಿಗೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಫಲಿತಾಂಶ ಜನ
Updated on: 
ನವದೆಹಲಿ: ದೇಶದಾದ್ಯಂತ ಬಿಜೆಪಿ ಪಕ್ಷದ ಮೇಲೆ ನಂಬಿಕೆಯಿಟ್ಟು, ಇತ್ತೀಚಿಗೆ ನಡೆದ ಹಲವು ಚುನಾವಣೆಗಳಲ್ಲಿ ಗೆಲುವು ತಂದಿರುವುದಕ್ಕೆ ಮತದಾರರಿಗೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಫಲಿತಾಂಶ ಜನ ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಮತ್ತು ಅವರು ಅಭಿವೃದ್ಧಿ ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸುತ್ತದೆ ಎಂದಿದ್ದಾರೆ. 
"ಕಳೆದ ಕೆಲವು ದಿನಗಳಲ್ಲಿ ಹಲವು ಚುನಾವಣೆಗಳ ಫಲಿತಾಂಶ ಬಂದಿವೆ-- ಲೋಕಸಭಾ, ವಿಧಾನಸಭಾ ಮತ್ತು ನಗರಸಭಾ ಚುನಾವಣೆಗಳು - ದೇಶದಾದ್ಯಂತ" ಎಂದು ಮೋದಿ ಬರೆದಿರುವ ಸರಣಿ ಟ್ವೀಟ್ ನಲ್ಲಿ ಹೇಳಿದ್ದಾರೆ.
"ಈಶಾನ್ಯ ಆಗಲಿ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ, ಗುಜರಾತ್ ಆಗಲಿ ಬಿಜೆಪಿ ಒಳ್ಳೆಯ ಪ್ರದರ್ಶನ ನೀಡಿದೆ. ನಾನು ಜನರಿಗೆ ಧನ್ಯವಾದ ಹೇಳಬಯಸಿತ್ತೇನೆ" ಎಂದು ಮೋದಿ ಹೇಳಿದ್ದಾರೆ. 
"ದೇಶದಾದ್ಯಂತ ಬಂದಿರುವ ಈ ಫಲಿತಾಂಶ ಹೇಳುವುದೇನೆಂದರೆ, ಜನಕ್ಕೆ ಸರ್ವಾಂಗೀಣ ಅಭಿವೃದ್ಧಿ ಬೇಕಾಗಿದೆ ಮತ್ತು ಭ್ರಷ್ಟಾಚಾರ ಹಾಗು ಆಡಳಿತ ದುರುಪಯೋಗವನ್ನು ಅವರು ಸಹಿಸುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. 
ಮಹಾರಾಷ್ಟ್ರ ಮತ್ತು ಗುಜರಾತ್ ನಗರಸಭಾ ಚುನಾವಣೆಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದ ಹಿನ್ನಲೆಯಲ್ಲಿ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ. 
ನೋಟು ಹಿಂಪಡೆತ ನಿರ್ಧಾರದ ನಂತರ ನಡೆದ ಅಸ್ಸಾಮ್, ಅರುಣಾಚಲ ಪ್ರದೇಶ ಮತ್ತು ಮಧ್ಯಪ್ರದೇಶದ ಉಪಚುನಾವಣೆಗಳಲ್ಲಿ ಕೂಡ ಬಿಜೆಪಿ ಜಯಭೇರಿ ಬಾರಿಸಿದೆ. 
ನವೆಂಬರ್ ೧೯ ರಂದು ೧೦ ವಿಧಾನಸಭಾ, ನಾಲ್ಕು ಲೋಕಸಭಾ ಮತ್ತು ಪುದುಚೆರಿ ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣಾ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ನಡೆದ ಎಲ್ಲ ಉಪಚುನಾವಣೆಗಳಲ್ಲಿ ಟಿಎಂಸಿ ಪಕ್ಷ ಗೆದ್ದ ಹಿನ್ನಲೆಯಲ್ಲಿ, ಇದು ನೋಟು ಹಿಂಪಡೆತದ ವಿರುದ್ಧ ಜನರ ಆಕ್ರೋಶ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com