ಹೈದರಾಬಾದ್: ತೆಲಂಗಾಣ ಪೊಲೀಸರು ಮುಸ್ಲಿಂ ಯುವಕರನ್ನು ಉಗ್ರಗಾಮಿಗಳಾಗಲು ಪ್ರೇರೇಪಿಸುತ್ತಿದ್ದು, ಇದಕ್ಕಾಗಿಯೇ ನಕಲಿ ವೆಬ್ ಸೈಟ್ ವೊಂದನ್ನು ತೆರೆದಿದ್ದಾರೆ ಎಂದು ಆರೋಪಿಸಿದ್ದ ನೀಡಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಗುರುವಾರ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 1ರಂದು ತೆಲಂಗಾಣ ರಾಷ್ಟ್ರ ಸಮಿತಿ ಶಾಸಕ ಎಂ ಗೋಪಿನಾಥ್ ಹಾಗೂ ಮತ್ತೊಬ್ಬ ವ್ಯಕ್ತಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ನಗರದ ಜುಬಿಲೀ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ತೆಲಂಗಾಣ ಪೊಲೀಸರು ಕಾನೂನು ಸಲಹೆ ಪಡೆದು ಇಂದು ಕೇಸ್ ದಾಖಲಿಸಿದ್ದಾರೆ.
ಟಿಆರ್ ಎಸ್ ನಾಯಕರ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷೆನ್ 505(1), 505(1)ಬಿ 505(2)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮುಸ್ಲಿಂ ಯುವಕರು ಉಗ್ರರಾಗಲು ತೆಲಂಗಾಣ ಪೊಲೀಸರು ಪ್ರೆರೇಪಿಸುತ್ತಿದ್ದು, ಇದಕ್ಕಾಗಿಯೇ ನಕಲಿ ಐಎಸ್ಐಎಸ್ ವೆಬ್ ಸೈಟ್ ವೊಂದನ್ನು ತೆರೆದಿದ್ದಾರೆ ಎಂದು ಇತ್ತೀಚಿಗೆ ದಿಗ್ವಿಜಯ್ ಸಿಂಗ್ ಅವರು ಟ್ವೀಟ್ ಮಾಡಿದ್ದರು.