

ನವದೆಹಲಿ: ಖ್ಯಾತ ನೇತ್ರ ತಜ್ಞ ಫರ್ಡಿನ್ಯಾಂಡ್ ಮೊನೊಯರ್ ಅವರ ಜನ್ಮ ದಿನ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.
ಇಂದು ಅಂದರೆ ಮೇ 9ರಂದು ಫರ್ಡಿನ್ಯಾಂಡ್ ಮೊನೊಯರ್ ಅವರ 181ನೇ ಜನ್ಮ ದಿನವಾಗಿದ್ದು, ಅವರ ನೆನಪಿನಾರ್ಥವಾಗಿ ಗೂಗಲ್ ಡೂಡಲ್ ಬಿಡಿಸಿ ಗೌರವ ಸಲ್ಲಿಕೆ ಮಾಡಿದೆ. 1836 ಮೇ 9ರಂದು ಫ್ರಾನ್ಸ್ ನಲ್ಲಿ ಜನಿಸಿದ ಫರ್ಡಿನ್ಯಾಂಡ್ ಮೊನೊಯರ್ ಕಣ್ಣ ಪರೀಕ್ಷಾ ವ್ಯವಸ್ಥೆಯನ್ನು ಕಂಡು ಹಿಡಿದ ಮೊದಲ ನೇತ್ರ ತಜ್ಞರಾಗಿದ್ದಾರೆ.
ಸ್ಪಷ್ಟ ದೃಷ್ಟಿ ಅಳತೆ ಮಾಡುವ ಸಲುವಾಗಿ ಡಿಯೋಪ್ಟರ್ ಚಾರ್ಟ್ ಕಂಡುಹಿಡಿದ ಖ್ಯಾತಿ ಕೂಡ ಫರ್ಡಿನ್ಯಾಂಡ್ ಮೊನೊಯರ್ ಅವರಿಗೆ ಲಭಿಸಿದೆ. ಇವರು ಕಂಡು ಹಿಡಿದ ಈ ಡಿಯೋಪ್ಟರ್ ಚಾರ್ಟ್ ಅನ್ನು ಇಂದಿಗೂ ನೇತ್ರ ಪರೀಕ್ಷೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಮೊನೊಯರ್ ತಮ್ಮ 76ನೇ ವಯಸ್ಸಿನಲ್ಲಿ 1912 ರಲ್ಲಿ ತಮ್ಮ ಸ್ವಗ್ರಾಮ ಲಿಯಾನ್ ನಲ್ಲಿ ಕೊನೆಯುಸಿರೆಳೆದರು.
Advertisement