ಚೀನಾ ಮೊದಲು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲಿ; ಬೀಜಿಂಗ್ ಸಮಾವೇಶಕ್ಕೆ ಭಾರತ ಗೈರು

ಚೀನಾದಲ್ಲಿ ಭಾನುವಾರದಿಂದ ಆರಂಭವಾಗಲಿರುವ ‘ಒನ್‌ ಬೆಲ್ಟ್‌ ಒನ್‌ ರೋಡ್‌ (ಒಂದು ವಲಯ, ಒಂದು ರಸ್ತೆ)' ಸಮಾವೇಶದಲ್ಲಿ ಭಾರತ ಭಾಗವಹಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಚೀನಾದಲ್ಲಿ ಭಾನುವಾರದಿಂದ ಆರಂಭವಾಗಲಿರುವ ‘ಒನ್‌ ಬೆಲ್ಟ್‌ ಒನ್‌ ರೋಡ್‌ (ಒಂದು ವಲಯ, ಒಂದು ರಸ್ತೆ)' ಸಮಾವೇಶದಲ್ಲಿ ಭಾರತ ಭಾಗವಹಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.

ಆ ಮೂಲಕ ಪಾಕಿಸ್ತಾನ-ಚೀನಾ ಕಾರಿಡಾರ್ ಯೋಜನೆಗೆ ಭಾರತ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಶೃಂಗಸಭೆಗೆ ಗೈರಾಗುವ ಮೂಲಕ ಚೀನಾ ಸರ್ಕಾರಕ್ಕೆ ಕಠಿಣ ಸಂದೇಶ ರವಾನೆ ಮಾಡಿದೆ. "ಯಾವುದೇ ಸಂಪರ್ಕ ಯೋಜನೆ  ಗಳು ಒಂದು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವಂತಿರಬೇಕು ಎಂದು ಚೀನಾದ ಆಹ್ವಾನಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಬಂದರು, ರಸ್ತೆ, ರೈಲ್ವೆ ಮೂಲಕ ಗಡಿಯಾಚೆಗಿನ ಸಂಪರ್ಕ  ಸಾಧಿಸಲು ಬಯಸಿರುವ ಚೀನಾದ ಮಹತ್ವಾಕಾಂಕ್ಷಿ ಯೋಜನೆಯನ್ನು ಬಹಿಷ್ಕರಿಸುವ ಉದ್ದೇಶದಿಂದ ಈ ಸಮಾವೇಶಕ್ಕೆ ಪ್ರತಿನಿಧಿಯನ್ನು ಕಳುಹಿಸದಿರಲು ಭಾರತ ನಿರ್ಧರಿಸಿದೆ ಎಂದು ತಿಳಿದುಬಂದಿದೆ

ಯೋಜನೆಯ ಒಂದು ಭಾಗವಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುತ್ತದೆ. ಪಿಒಕೆ ಭಾರತದ ಭಾಗವಾಗಿದ್ದು, ಇದೇ ಕಾರಣಕ್ಕೆ ಚೀನಾ ಯೋಜನೆಗೆ ಭಾರತ ಬಲವಾಗಿ  ವಿರೋಧ ವ್ಯಕ್ತಪಡಿಸಿದೆ. 2 ದಿನಗಳ ಸಭೆಯಲ್ಲಿ ಭಾಗವಹಿಸದಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಎನ್‌ಎಸ್‌ಜಿ ಸದಸ್ಯತ್ವ, ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ  ಮುಖ್ಯಸ್ಥ ಮಸೂದ್‌ ಅಜರ್‌ಗೆ ವಿಶ್ವಸಂಸ್ಥೆಯಿಂದ ನಿಷೇಧ ಹೇರುವ ಭಾರತದ ಪ್ರಯತ್ನಗಳಿಗೆ ಚೀನಾ ಅಡ್ಡಿಯಾಗಿರುವುದರಿಂದ, ಈ ಸಭೆಯಲ್ಲಿ ಭಾಗವಹಿಸದೆ ಬೀಜಿಂಗ್‌ಗೆ ಕಠಿಣ ಸಂದೇಶ ರವಾನಿಸಲು ಭಾರತ ಈ ಕ್ರಮಕ್ಕೆ  ಮುಂದಾಗಿದೆ.

ಇನ್ನು ಸುಮಾರು 29 ರಾಷ್ಟ್ರಗಳ ನಾಯಕರು, ಹಿರಿಯ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com