ಕ್ರಿಕೆಟ್ ನಾಲ್ಕನೇ ಟಿ20: ಮನೀಷ್ ಪಾಂಡೆ ಅರ್ಧಶತಕ, ನ್ಯೂಜಿಲೆಂಡ್ ಗೆ 166 ರನ್ ಗುರಿ ನೀಡಿದ ಭಾರತ
ಕೆ.ಎಲ್ ರಾಹುಲ್ (39 ರನ್) ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದ ಹೊರತಾಗಿಯೂ ಮನೀಷ್ ಪಾಂಡೆ (ಔಟಾಗದೆ 50 ರನ್) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ನಾಲ್ಕನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ 166 ರನ್ ಸ್ಪರ್ಧಾತ್ಮಕ ಗುರಿ ನೀಡಿದೆ.