• Tag results for Bengaluru

ಥಾಮಸ್ ಕಪ್  ಗೆದ್ದ ಕನ್ನಡಿಗ ಲಕ್ಷ್ಯ ಸೇನ್ ಗೆ 5 ಲಕ್ಷ ರೂ. ಬಹುಮಾನ: ಸಿಎಂ ಬೊಮ್ಮಾಯಿ

ಥಾಮಸ್ ಕಪ್  ಗೆದ್ದ ಕನ್ನಡಿಗ ಲಕ್ಷ್ಯ ಸೇನ್ ಗೆ ರಾಜ್ಯ ಸರ್ಕಾರ 5 ಲಕ್ಷ ರೂ. ನಗದು ಬಹುಮಾನ ನೀಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 16th May 2022

ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್

ಬಿಡಿಎ ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

published on : 16th May 2022

ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 331 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಅಧಿಕಾರಿಗಳಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸೂಚನೆ ನೀಡಿದರು.

published on : 16th May 2022

ರಾಷ್ಟ್ರಗೀತೆ ಹಾಡೋದನ್ನ ಮುತಾಲಿಕ್ ಹೇಳಿಕೊಡಬೇಕಾ?: ಜಮೀರ್ ಅಹ್ಮದ್ ಖಾನ್

ಮದರಸಾಗಳಲ್ಲಿ ರಾಷ್ಟ್ರಗೀತೆ  ಕಡ್ಡಾಯಪಡಿಸಬೇಕೆಂಬ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ರಾಷ್ಟ್ರಗೀತೆ ಹಾಡೋದನ್ನು ಅವರಿಂದ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

published on : 16th May 2022

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎತ್ತಂಗಡಿ, ನೂತನ ಆಯುಕ್ತರಾಗಿ ಪ್ರತಾಪ್ ರೆಡ್ಡಿ ನೇಮಕ

ರಾಜ್ಯ ಸರ್ಕಾರ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ನೂತನ ನಗರ ಪೊಲೀಸ್ ಆಯುಕ್ತರಾಗಿ ಆಗಿ ಪ್ರತಾಪ್ ರೆಡ್ಡಿ ಅವರನ್ನು...

published on : 16th May 2022

ಲಾಕ್‌ಡೌನ್‌ನಲ್ಲಿ 'ಇ-ಕೋರ್ಟ್ಸ್' ಬಳಕೆ: ಕರ್ನಾಟಕ ಹೈಕೋರ್ಟ್ ಗೆ 2ನೇ ಸ್ಥಾನ

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅವಧಿ ಆರಂಭವಾದಾಗಿನಿಂದ ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ 28 ಹೈಕೋರ್ಟ್‌ಗಳ ಪೈಕಿ ಮದ್ರಾಸ್ ಹೈಕೋರ್ಟ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

published on : 16th May 2022

ಬೆಂಗಳೂರು: ಕತ್ತಿ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ನಟೋರಿಯಸ್ ರೌಡಿ ಬಂಧನ

ಜೆ.ಸಿ.ನಗರದ ಆಭರಣ ಮಳಿಗೆಗೆ ನುಗ್ಗಿ ಅಂಗಡಿ ಮಾಲೀಕರಿಗೆ ಕತ್ತಿ ತೋರಿಸಿ ಬೆದರಿಸಿ 73 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಕುಖ್ಯಾತ ರೌಡಿಯನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

published on : 16th May 2022

ಬೆಂಗಳೂರು: ಹಣಕಾಸು ವಿಚಾರಕ್ಕೆ ಮಂಗಳಮುಖಿ ಹತ್ಯೆ, ಆರೋಪಿಗೆ ಗಾಯ

ಶುಕ್ರವಾರ ರಾತ್ರಿ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ  ನಡೆದ ಜಗಳದಲ್ಲಿ 30 ವರ್ಷದ ಮಂಗಳಮುಖಿಯನ್ನು ಲಾಡ್ಜ್‌ನಲ್ಲಿ ಆಕೆಯ ಪುರುಷ ಸ್ನೇಹಿತನೇ ಚಾಕುವಿನಿಂದ ಇರಿದು ಕೊಂದಿದ್ದಾನೆ.

published on : 16th May 2022

ಟೊಮೆಟೋ ದರ ಗಗನಕ್ಕೆ, ಕೆಜಿ ಬೆಲೆ 90 ರೂ.!

ಅಡುಗೆ ಮನೆಯಲ್ಲಿನ ಅತ್ಯಗತ್ಯ ವಸ್ತುಗಳಲ್ಲೊಂದಾಗಿರುವ ಟೊಮೆಟೋ ದರ ಗಗನಕ್ಕೇರಿದ್ದು, ಪ್ರತೀ ಕಿಲೋ ಟೊಮೆಟೋ ಬೆಲೆ ರೂ.90ಕ್ಕೆ ಏರಿಕೆಯಾಗಿದೆ.

published on : 16th May 2022

ಕಾಳೇನ ಅಗ್ರಹಾರ ಕೆರೆ ಅಭಿವೃದ್ಧಿ ಪರಿಶೀಲಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಕಾಳೇನ ಅಗ್ರಹಾರ ಕೆರೆಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

published on : 16th May 2022

ಜಿಲ್ಲಾ ಪಂಚಾಯತ್ ಚುನಾವಣೆ ಕುರಿತು ಚುನಾವಣಾ ಆಯೋಗದ ಅರ್ಜಿ ವಿಚಾರಣೆ ಮೇ 17ಕ್ಕೆ: ಕರ್ನಾಟಕ ಹೈಕೋರ್ಟ್ 

ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸುವ ಕುರಿತು ಸಲ್ಲಿಸಿರುವ ಮನವಿಯನ್ನು ಕರ್ನಾಟಕ ಹೈಕೋರ್ಟ್ ಮೇ 17 ರಂದು ವಿಚಾರಣೆ ನಡೆಸಲಿದೆ. 

published on : 16th May 2022

ರಾಜ್ಯಸಭೆ, ಎಂಎಲ್‌ಸಿ ಚುನಾವಣೆಯತ್ತ ಬಿಜೆಪಿ ಗಮನ: ಸಿಎಂ ಬಸವರಾಜ ಬೊಮ್ಮಾಯಿ

ಬಿಜೆಪಿ ರಾಜ್ಯಘಟಕ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯತ್ತ ಗಮನಹರಿಸಿದ್ದು, ಈ ಸಂಬಂಧ ಕೋರ್ ಕಮಿಟಿ ಸಭೆ ನಡೆಸಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.

published on : 15th May 2022

ರಾಜ್ಯದಲ್ಲಿ ಮುಂದುವರೆದ ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 118 ಸೇರಿ 126 ಮಂದಿಗೆ ಪಾಸಿಟಿವ್; ಸಾವು ಶೂನ್ಯ!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 126 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,49,675ಕ್ಕೆ ಏರಿಕೆಯಾಗಿದೆ.

published on : 15th May 2022

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆನೇಕಲ್ ಬಾಲರಾಜ್‌ ಅಪಘಾತದಲ್ಲಿ ನಿಧನ

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಖ್ಯಾತಿಗಳಿಸಿದ್ದ ಆನೇಕಲ್​ ಬಾಲರಾಜ್​ ಅವರು ಭಾನುವಾರ ನಿಧನರಾಗಿದ್ದಾರೆ.

published on : 15th May 2022

ಬುದ್ಧ ಪೂರ್ಣಿಮೆ: ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ

ಬುದ್ಧ ಪೂರ್ಣಿಮೆಯ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೋಮವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಹತ್ಯೆಯನ್ನು ನಿಷೇಧಿಸಿದೆ.

published on : 15th May 2022
1 2 3 4 5 6 > 

ರಾಶಿ ಭವಿಷ್ಯ