• Tag results for Modi Government

ಮೋದಿ ಸರ್ಕಾರದೊಂದಿಗೆ ಮಾತುಕತೆ: 8 ಪಿಡಿಪಿ ಮುಖಂಡರ ಉಚ್ಚಾಟನೆ

ಕಾಶ್ಮೀರಿಗಳ ಇಚ್ಛೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಪಿಡಿಪಿಯ ಎಂಟು ನಾಯಕರನ್ನು ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿಯವರ ಗುರುವಾರ ಉಚ್ಚಾಟನೆಗೊಳಿಸಿದ್ದಾರೆ.

published on : 9th January 2020

ಬಿಎಚ್ ಇಎಲ್, ಮೆಕಾನ್, ಎನ್ ಎಂಡಿಸಿಯಲ್ಲಿ ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಸಾರ್ವಜನಿಕ ವಲಯದ ಆರು ಉದ್ದಿಮೆ(ಪಿಎಸ್ ಯು)ಗಳಲ್ಲಿ ಈಕ್ವಿಟ ಪಾಲುದಾರಿಯ ಕಾರ್ಯತಂತ್ರ ಬಂಡವಾಳ ಹಿಂತೆಗೆತಕ್ಕೆ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯ ಹಣಕಾಸು ವ್ಯವಹಾರಗಳ ಕುರಿತ ಸಚಿವ ಸಮತಿ ಇಂದು ಒಪ್ಪಿಗೆ ನೀಡಿದೆ. 

published on : 8th January 2020

ಸಂವಿಧಾನ ರಕ್ಷಣೆಗೆ ಮತ್ತೊಂದು ಸ್ವಾತಂತ್ರ್ಯ ಚಳವಳಿ ಅಗತ್ಯ; ರಮಾನಾಥ ರೈ

ದೇಶದ ಸಂವಿಧಾನ ವಿರೋಧಿಯಾದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಕೇಂದ್ರದ ಸರಕಾರದ ವಿರುದ್ಧ ದೇಶದ ಎಲ್ಲಾ ವರ್ಗಗಳ ಜನರು ಎರಡನೆ ಸ್ವಾತಂತ್ರ ಚಳವಳಿ ನಡೆಸುವುದು ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

published on : 2nd January 2020

ಪ್ರಧಾನಿ ತುಮಕೂರು ಭೇಟಿಗೆ ಸಿದ್ಧತೆ ಪೂರ್ಣ: ಪ್ರಹ್ಲಾದ್ ಜೋಷಿ

ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬುಧವಾರ ತಿಳಿಸಿದ್ದಾರೆ.

published on : 1st January 2020

ಹೊಸ ವರ್ಷದ 'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿದೆ: ಸಿದ್ದರಾಮಯ್ಯ

ಹೊಸ ವರ್ಷದ ಮೊದಲ ದಿನವೇ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಹೊಸ ವರ್ಷದ 'ಅಚ್ಚೇ ದಿನ್' ಇನ್ನಷ್ಟು ಭೀಕರವಾಗಲಿದೆ ಎಂದು ಹೇಳಿದ್ದಾರೆ.

published on : 1st January 2020

ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವಯೋಮಿತಿ 65 ವರ್ಷಕ್ಕೆ ಹೆಚ್ಚಳ; ಕೇಂದ್ರದ ಮಹತ್ವದ ನಿರ್ಣಯ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

published on : 29th December 2019

ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್‌ ಯೋಧರಿಗೆ ಅವಕಾಶ: ಅಮಿತ್ ಶಾ

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ಜವಾನರು ತಮ್ಮ ಕುಟುಂಬದೊಂದಿಗೆ ವರ್ಷಕ್ಕೆ 100 ದಿನಗಳ ಕಾಲ ಇರಲು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಕಾರ್ಡ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

published on : 29th December 2019

10 ವರ್ಷ ಕಳೆಯಿತು, ಮಹಾದಾಯಿ ಅಧಿಸೂಚನೆಗೆ ಇನ್ನೆಷ್ಟು ವರ್ಷ ಕಾಯಬೇಕು!

ಮಲಪ್ರಭಾ ನದಿಗೆ ಮಹಾದಾಯಿ ನದಿ ನೀರು ಜೋಡಣೆಗಾಗಿನ ಹೋರಾಟಕ್ಕೆ ಅರ್ಧ ಶತಮಾನ ಕಳೆದರೂ ನೀರಿಗಾಗಿನ ಕಾಯುವಿಕೆ ತಪ್ಪುತ್ತಿಲ್ಲ. ಇನ್ನೆನು ಎಲ್ಲವೂ ಮುಗಿದು ಮಹಾದಾಯಿ ನದಿ ನೀರು ಮಲಪ್ರಭೆಯನ್ನು ಸೇರುವ ಸಮಯ ಬಂದಿದೆ ಎನ್ನುತ್ತಿರುವಾಗಲೇ ಕೇಂದ್ರ ಸರ್ಕಾರ ಅಧಿಸೂಚನೆ ನೆಪ ಮುಂದೆ ಮಾಡಿದೆ.

published on : 26th December 2019

ಹೊಸಪೇಟೆ: ಪೌರತ್ವ ಮಸೂದೆ ಜಾರಿ ವಿರೋಧಿಸಿ ಬ್ರಹತ್ ಪ್ರತಿಭಟನಾ ಮೆರವಣಿಗೆ

ಎನ್.ಆರ್.ಸಿ. ಮತ್ತು ಸಿ.ಎ.ಬಿ. (ಪೌರತ್ವ ತಿದ್ದುಪಡಿ) ಮಸೂದೆ ಜಾರಿ ವಿರೋಧಿಸಿ ಹೊಸಪೇಟೆ ನಗರದಲ್ಲಿ ಬ್ರಹತ್ ಪ್ರತಿಭಟನ ಮೆರವಣಿಗೆ ನಡೆಯಿತು.

published on : 16th December 2019

ಮೋದಿ ಸರ್ಕಾರ ದೇಶದ ವಿದ್ಯಾರ್ಥಿಗಳು, ಯುವಜನತೆ, ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ: ಪ್ರಿಯಾಂಕಾ ಗಾಂಧಿ 

ದೇಶದ ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ಮೋದಿ ಸರ್ಕಾರ ಹೇಡಿತನ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ದಬ್ಬಾಳಿಕೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.

published on : 16th December 2019

ಭಾರತೀಯ ಸೇನೆಯ ಕೈ ಸೇರಿದ ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್!

ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್ ಸೈನಿಕರ ಕೈ ಸೇರಿದೆ.

published on : 15th December 2019

ಮೋದಿ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ: ಬಿಜೆಪಿ ವಿರುದ್ಧ ಸೋನಿಯಾ ವಾಗ್ದಾಳಿ

ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ನರೇಂದ್ರ ಮೋದಿ ಸರ್ಕಾರ ಭಾರತೀಯರನ್ನು...

published on : 14th December 2019

ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ: ಮೋದಿ ಸರ್ಕಾರದಿಂದ ಮತ್ತೊಂದು ಐತಿಹಾಸಿಕ ಕಾನೂನು 

ಭಾರತಕ್ಕೆ ವಲಸೆ ಬಂದಿರುವ ಅಫ್ಘಾನಿಸ್ತಾನ, ಬಾಂಗ್ಲಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಲ್ಲಿನ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಡಿ.11 ರಂದು ಅಂಗೀಕಾರ ದೊರೆತಿದೆ. 

published on : 11th December 2019

ಪೌರತ್ವ ತಿದ್ದುಪಡಿ ಮಸೂದೆ ಅಂದರೆ ಏನು, ಏಕೆ ವಿರೋಧ, ಏನಿದು ವಿವಾದ? 

ಈಗ ದೇಶಾದ್ಯಂತ ಸದ್ದು ಮಾಡುತ್ತಿರುವುದು ಪೌರತ್ವ(ತಿದ್ದುಪಡಿ) ಮಸೂದೆ 2019. ಇದಕ್ಕೆ ಪರ-ವಿರೋಧ ಸಾಕಷ್ಟು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಂಸತ್ತಿನಲ್ಲಿ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ.

published on : 11th December 2019

ಪೌರತ್ವ ಮಸೂದೆ ಧರ್ಮದ ಆಧಾರದಲ್ಲಿ ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾ- ಸಿದ್ದರಾಮಯ್ಯ ಟೀಕೆ 

ಹೆಚ್ಚುತ್ತಿರುವ ನಿರುದ್ಯೋಗ, ಮುಚ್ಚುತ್ತಿರುವ ಕೈಗಾರಿಕೆಗಳು, ಏರುತ್ತಿರುವ ಸಾಮಗ್ರಿಗಳ ಬೆಲೆ, ಕುಸಿಯುತ್ತಿರುವ ಜಿಡಿಪಿ, ದಿವಾಳಿಯಾಗುತ್ತಿರುವ ಬ್ಯಾಂಕುಗಳ ಸ್ಥಿತಿಯಿಂದ ಜನ‌ಮನ ಬೇರೆಡೆ ಸೆಳೆಯಲು ಬಿಜೆಪಿ ಪೌರತ್ವ ಮಸೂದೆಯ ಅಸ್ತ್ರ ಬಳಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

published on : 10th December 2019
1 2 3 4 5 6 >