Australia

ಸಾರ್ವಜನಿಕವಾಗಿ ಅತ್ತು ಕೈಲಾಗದವರೆನಿಸಿಕೊಳ್ಳಬೇಡಿ: ಟೀಂ ಇಂಡಿಯಾ ಆಟಗಾರ್ತಿಯರಿಗೆ ನೆಟಿಗರು ತರಾಟೆ!
ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಅನುಭವಿಸಿದ್ದು ಮೈದಾನದಲ್ಲಿ ಆಟಗಾರ್ತಿಯರು ಕಣ್ಣೀರು ಹಾಕಿದ್ದರು. ಇದಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಎಡವಿದ್ದೇಲ್ಲಿ? ನಾಯಕಿ ಹರ್ಮನ್ ಪ್ರೀತ್ ಹೇಳಿದ್ದಿಷ್ಟು!
ಮೆಲ್ಬೋರ್ನ್ ನಲ್ಲಿ ಭಾನುವಾರ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೆ ಹೈವೋಲ್ಟೇಜ್ ಹಣೆಪಟ್ಟಿ ಕಟ್ಟಲಾಗಿತ್ತು. ಆದರೆ ಭಾರತದ ನೀರಸ ಪ್ರದರ್ಶನದಿಂದಾಗಿ ನಿರೀಕ್ಷೆಗಳೆಲ್ಲವೂ ಸುಳ್ಳಾದವು.

ಆಸ್ಟ್ರೇಲಿಯಾ ಮುಡಿಗೆ ಮಹಿಳಾ ಟಿ-20 ವಿಶ್ವಕಪ್, ಭಾರತಕ್ಕೆ ಫೈನಲ್ ನಲ್ಲಿ ನಿರಾಸೆ
ಚೊಚ್ಚಲ ಬಾರಿಗೆ ಮಹಿಳಾ ಟಿ-20 ವಿಶ್ವಕಪ್ ಗೆಲ್ಲುವ ಭಾರತದ ಕನಸಿಗೆ ಪೆಟ್ಟು ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದ ಹರ್ಮನ್ ಪ್ರೀತ್ ಪಡೆ ಸೋಲು ಕಂಡಿದೆ.

17 ವರ್ಷಗಳ ಬಳಿಕ ವಿಶ್ವಕಪ್ ಫೈನಲ್ ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ, ಭಾರತಕ್ಕೆ ಸೇಡು ತೀರಿಸುವ ತವಕ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಬರೊಬ್ಬರಿ 17 ವರ್ಷಗಳ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಜನುಮದಿನ ಸಂಭ್ರಮ!
ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದ್ದು, ಇದರ ನಡುವೆಯೇ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ ಕೂಡ ಹೌದು..

ಮಹಿಳಾ ಟಿ20 ವಿಶ್ವಕಪ್ ವಿಶ್ವಕಪ್ ಫೈನಲ್: ಇಂಡೋ-ಆಸಿಸ್ ಆಟಗಾರ್ತಿಯರಿಗೆ ಪ್ರಧಾನಿ ಮೋದಿ, ಆಸಿಸ್ ಪ್ರಧಾನಿ ಸ್ಕಾಟ್ ಮೊರಿಸನ್ ಶುಭ ಹಾರೈಕೆ
ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಚ್ರೇಲಿಯಾ ಮಹಿಳಾ ತಂಡಗಳು ಟಿ20 ವಿಶ್ವಕಪ್ ವಿಶ್ವಕಪ್ ಫೈನಲ್ ಪಂದ್ಯ ಆಡುತ್ತಿದ್ದು, ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸಿಸ್ ಪ್ರಧಾನಿ ಸ್ಟಾಟ್ ಮೊರಿಸನ್ ಉಭಯ ತಂಡಗಳಿಗೆ ಶುಭಕೋರಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತ-ಆಸಿಸ್ ಕದನ, 75000 ಟಿಕೆಟ್‌ಗಳು ಸೋಲ್ಡ್ ಔಟ್
ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಈಗಾಗಲೇ ಸುಮಾರು 75 ಸಾವಿರ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.

ಮಹಿಳಾ ಟಿ20 ವಿಶ್ವಕಪ್ ಫೈನಲ್: ಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯಾ ಕಾದಾಟ
ಭಾನುವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿರುವ ಮಹಿಳಾ ದಿನದ ನಡುವೆಯೇ ಅತ್ತ ಎಂಸಿಜಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ಪೇಲಿಯಾದ ವನಿತೆಯರ ತಂಡಗಳು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಟಿ20 ವಿಶ್ವಕಪ್: ಮಹಿಳಾ ದಿನದಂದೆ 'ಭಾರತದ ತಾಕತ್ತು ತೋರಿಸಿ' ಸೀರೆಯುಟ್ಟು ತಂಡಕ್ಕೆ ಜೋಶ್ ತುಂಬಿದ ಮಿಥಾಲಿ ರಾಜ್, ವಿಡಿಯೋ!
ಟೀಂ ಇಂಡಿಯಾ ಯಶಸ್ವಿ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಅವರು ಸೀರೆಯುಟ್ಟು ಬ್ಯಾಟ್ ಬೀಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

