Corona Virus

ಗರಿಷ್ಠ ಕೊರೋನಾ ವೈರಸ್ ಸಾವು, ಅಗ್ರ ಸ್ಥಾನದಲ್ಲಿ ಮಹಾರಾಷ್ಟ್ರ, ಗುಜರಾತ್ ಗೆ 2ನೇ ಸ್ಥಾನ
ಮಾರಕ ಕೊರೋನಾ ವೈರಸ್ ಗೆ ಇಡೀ ಭಾರತವೇ ತತ್ತರಿಸಿ ಹೋಗುತ್ತಿದ್ದು, ಪ್ರಮುಖವಾಗಿ ಮಹಾರಾಷ್ಟ್ರ ರಾಜ್ಯ ವೈರಸ್ ಆರ್ಭಟಕ್ಕೆ ನೆಲಕಚ್ಚಿದೆ.

ಲಾಕ್ ಡೌನ್ 4.0: ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ
ಕೊರೋನಾ ವೈರಸ್ ಲಾಕ್ ಡೌನ್ 4.0 ನಡುವೆಯೇ ನಿಯಮಗಳಲ್ಲಿ ಸಡಿಲಿಕೆ ತಂದಿರುವ ಕೇಂದ್ರ ಸರ್ಕಾರ ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ ನೀಡಿದೆ.

ಕೊರೋನಾ ವೈರಸ್ ನಡುವೆಯೇ ಗಗನಕ್ಕೇರಿದ ಪ್ರಧಾನಿ ಮೋದಿ ಜನಪ್ರಿಯತೆ: ನ್ಯೂಯಾರ್ಕ್ ಟೈಮ್ಸ್
ಮಾರಕ ಕೊರೋನಾ ವೈರಸ್ ಅಬ್ಬರದ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೂಡ ಗಗನಕ್ಕೇರುತ್ತಿದೆ ಎಂದು ಅಮೆರಿಕದ ಖ್ಯಾತ ಆಂಗ್ಲ ದೈನಿಕ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಕೊರೋನಾ ವೈರಸ್ ಲಾಕ್ ಡೌನ್: ಜೊಮ್ಯಾಟೋ ಬೆನ್ನಲ್ಲೇ 1,100 ಉದ್ಯೋಗಿಗಳಿಗೆ ಕತ್ತರಿ ಹಾಕಿದ ಸ್ವಿಗ್ಗಿ
ಕೊರೋನಾ ವೈರಸ್ ಲಾಕ್ ಡೌನ್ ಮುಂದುವರೆದಿರುವಂತೆಯೇ ಇತ್ತ ಭಾರತದಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಪ್ರಮಾಣಕ್ಕೆ ಕತ್ತರಿ ಹಾಕುತ್ತಿದ್ದು. ಖ್ಯಾತ ಆಹಾರ ಸರಬರಾಜು ಸಂಸ್ಥೆ ಸ್ವಿಗ್ಗಿ 1100 ಉದ್ಯೋಗಿಗಳನ್ನು ಕಡಿತಗೊಳಿಸಿದೆ.

ಕೊರೋನಾ ವೈರಸ್: ಭಾರತ ಮೂಲದ 10 ವರ್ಷದ ಬಾಲಕಿಗೆ ಅಮೆರಿಕ ಅಧ್ಯಕ್ಷರಿಂದ ಗೌರವ!
ಕೊರೋನಾ ವೈರಸ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಅದ್ಭುತ ಸೇವೆ ಮಾಡಿದ್ದಕ್ಕಾಗಿ ಭಾರತ ಮೂಲದ 10 ವರ್ಷದ ಬಾಲಕಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಿಸಿದ್ದಾರೆ.

ಲಾಕ್ ಡೌನ್ 4.0 ಘೋಷಣೆ ಬೆನ್ನಲ್ಲೇ ಬೆಂಗಳೂರು ಕಂಟೈನ್ ಮೆಂಟ್ ಝೋನ್ ಪಟ್ಟಿ ಪರಿಷ್ಕರಿಸಿದ ಬಿಬಿಎಂಪಿ
ಮಾರಕ ಕೊರೋನಾ ವೈರಸ್ ಪ್ರಸರಣ ನಿರ್ಬಂಧಕ್ಕಾಗಿ ಕೇಂದ್ರ ಸರ್ಕಾರ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡಿತ್ತು, ಲಾಕ್ ಡೌನ್ 4.0 ವಿಸ್ತರಣೆ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿನ ಕಂಟೈನ್ ಮೆಂಟ್ ಝೋನ್ ಗಳನ್ನು ಪುನರ್ ಪರಿಷ್ಕರಿಸಿದೆ.

ಕೊರೋನಾ ವೈರಸ್ ಗೆ ಚೀನಾ ಕಾರಣ: ಡ್ರ್ಯಾಗನ್ ಸರ್ಕಾರದ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದ ಅಮೆರಿಕ
ಅಮೆರಿಕವೂ ಸೇರಿದಂತೆ ವಿಶ್ವದ 213 ರಾಷ್ಟ್ರಗಳಲ್ಲಿ ಆರ್ಭಟಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಚೀನಾ ದೇಶವನ್ನೇ ಹೊಣೆಗಾರಿಕೆ ಮಾಡಿರುವ ಅಮೆರಿಕ ಸರ್ಕಾರ, ಇದೀಗ ಚೀನಾ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದೆ.

ಕೊರೋನಾ ವೈರಸ್: ವಿಶ್ವದಾದ್ಯಂತ 3.16 ಲಕ್ಷ ದಾಟಿದ ಸಾವಿನ ಸಂಖ್ಯೆ
ಜಗತ್ತಿನ 213ಕ್ಕೂ ಹೆಚ್ಚು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಈ ವರೆಗೂ 3,16,658 ಎಂದು ತಿಳಿದುಬಂದಿದೆ.

ಮಂಡ್ಯಗೆ ಕುತ್ತು ತಂದ ವಲಸೆ ಕಾರ್ಮಿಕರು; ಒಂದೇ ದಿನ 22 ಮಂದಿಗೆ ಸೋಂಕು
ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ದಿನ 22 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 22 ಮಂದಿಯ ಪೈಕಿ 19 ಮಂದಿ ವಲಸೆ ಕಾರ್ಮಿಕರಾಗಿದ್ದು, ಅಂತರ್ ರಾಜ್ಯ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ.

