Corona Virus

ಕೊರೋನಾ ವೈರಸ್: ಸಿಲಿಕಾನ್ ಸಿಟಿ ಪತ್ರಕರ್ತರಿಗೆ ಬಿಗ್ ರಿಲೀಫ್, 400ಕ್ಕೂ ಅಧಿಕ ಮಂದಿಯ ವರದಿ ನೆಗೆಟಿವ್
ಮಾರಕ ಕೊರೋನಾ ವೈರಸ್ ಕಾರ್ಯ ನಿರತ ಪತ್ರಕರ್ತರನ್ನೂ ಕಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಡೆಸಿದ್ದ ಪತ್ರಕರ್ತರ ಬೃಹತ್ ಕೋವಿಡ್-19 ಪರೀಕ್ಷೆಯ ವರದಿ ಇದೀಗ ಲಭ್ಯವಾಗಿದ್ದು, ಪರೀಕ್ಷೆಗೆ ಒಳಗಾಗಿದ್ದ ಬೆಂಗಳೂರಿನ 400ಕ್ಕೂ ಅಧಿಕ ಪತ್ರಕರ್ತರಿಗೆ ಕೊರೋನಾ ವೈರಸ್ ನೆಗೆಟಿವ್ ಎಂದು ಬಂದಿದೆ.

ವಲಸೆ ಕಾರ್ಮಿಕರ ಸ್ಥಳಾಂತರ: ರಾಜ್ಯದ ವಲಸೆ ಕಾರ್ಮಿಕರು ಎಷ್ಟು, ಹೊರ ರಾಜ್ಯದ ವಲಸೆ ಕಾರ್ಮಿಕರೆಷ್ಟು?
ಈಗಾಗಲೇ ಸರ್ಕಾರ ರಾಜ್ಯದ ವಲಸೆ ಕಾರ್ಮಿಕರನ್ನು ತಮ್ಮ ಗ್ರಾಮಗಳಿಗೆ ಹೋಗಲು ಅನುವು ಮಾಡು ತ್ತಿದೆ.ತಮ್ಮ ಊರುಗಳಿಗೆ ಹೋಗಲು ಇಚ್ಚಿಸುವ ಕಾರ್ಮಿಕರನ್ನು ತಪಾಸಣೆ ಮಾಡಿ ಅವರ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ.ರಾಜ್ಯದ ಒಟ್ಟು ವಲಸೆ ಕಾರ್ಮಿಕರು ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರು ಎಲ್ಲಿ ಎಷ್ಟಿದ್ದಾರೆ ಎಂಬ ಸಮಗ್ರ ವರದಿ ಇಲ್ಲಿದೆ.

ಆರ್ಥಿಕ ಸಂಕಷ್ಟ, ವೇತನ ವಿಳಂಬದ ಆತಂಕದಲ್ಲಿ ರಾಜ್ಯ ಸರ್ಕಾರಿ ನೌಕರರು; ನಿಜಸ್ಥಿತಿ ಏನು?
ಈಗಾಗಲೇ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಖಾಜಾನೆ ಖಾಲಿಯಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಲ್ಲಿ ತಮ್ಮ ವೇತನ ಪಾವತಿ ವಿಳಂಬವಾಗುವ ಆತಂಕ ಎದುರಾಗಿದೆ.

ಕೇಂದ್ರ ಸರ್ಕಾರದಿಂದ ಮತ್ತೊಂದು ಲಾಕ್ಡೌನ್ ರಿಲೀಫ್: ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಪ್ರವಾಸಿಗರು ತವರಿಗೆ ತೆರಳಲು ಅನುಮತಿ!
ಮಹತ್ವದ ಬೆಳವಣಿಗೆಯಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಹೇರಿರುವ ಕೇಂದ್ರ ಸರ್ಕಾರ ಮತ್ತೊಂದು ವಿನಾಯಿತಿ ನೀಡಿದ್ದು, ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಪ್ರವಾಸಿಗರು ತವರಿಗೆ ತೆರಳಲು ಅನುಮತಿ ನೀಡಿದೆ.

ಮಹಾರಾಷ್ಟ್ರ: ಮತ್ತೆ 729 ಹೊಸ ಪಾಸಿಟಿವ್ ಪ್ರಕರಣ, 9 ಸಾವಿರ ಗಡಿ ದಾಟಿದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ
ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಮತ್ತೆ 729 ಹೊಸ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 9318ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಮಾಡಲು ರೋಗಿಗಳೇ ಇಲ್ಲ: ವೈದ್ಯಕೀಯ ಸಚಿವ ಕೆ ಸುಧಾಕರ್
ಕೊರೋನಾದಿಂದ ಗುಣಮುಖರಾದವರು ರಕ್ತದಾನ ಮಾಡಿದ್ದು ಪ್ಲಾಸ್ಮಾ ಸಿದ್ಧವಾಗಿದೆ. ಆದರೆ ಪ್ಲಾಸ್ಮಾ ಟ್ರಾನ್ಸ್ ಪ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ಕೊರೋನಾ ವೈರಸ್ ನಿರ್ವಹಣೆ: ಕಲಬುರ್ಗಿ ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಕೆಲವೇ ಗಂಟೆಗಳಲ್ಲಿ ರದ್ದು, ಪ್ರಿಯಾಂಕ್ ಖರ್ಗೆ ಆಕ್ರೋಶ
ಕಲಬುರ್ಗಿ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಕೆಲವೇ ಗಂಟೆಗಳ ಅಂತರದಲ್ಲಿ ಈ ಆದೇಶವನ್ನು ಹಿಂಪಡೆದಿದೆ.

ನೆಟ್ ಫ್ಲಿಕ್ಸ್-ಸೋಪ್ ತಯಾರಿಕಾ ಸಂಸ್ಥೆಗಳಿಗೆ ಬಂಪರ್; ಜಾಗತಿಕ ಉದ್ಯಮಕ್ಕೆ ಮರ್ಮಾಘಾತ ನೀಡಿದ ಕೊರೋನಾ ವೈರಸ್
ಸೋಪ್ ತಯಾರಿಕಾ ಸಂಸ್ಥೆಗಳು, ನೆಟ್ ಫ್ಲಿಕ್ಸ್ ಒಟಿಟಿ ಫ್ಲಾಟ್ ಫಾರ್ಮ್ ಗಳನ್ನು ಹೊರತು ಪಡಿಸಿ ಮಾರಕ ಕೊರೋನಾ ವೈರಸ್ ಜಾಗತಿಕ ಉದ್ಯಮ ವಲಯಕ್ಕೆ ಮರ್ಮಾಘಾತ ನೀಡಿದೆ.

ಟೋಲ್ ಗಳಲ್ಲಿ ಸರ್ಕಾರಿ ಸಾರಿಗೆಗೆ ವಿನಾಯಿತಿ ನೀಡಿ: ಡಿಸಿಎಂ ಲಕ್ಷ್ಮಣ ಸವದಿ ಕೇಂದ್ರಕ್ಕೆ ಮನವಿ
ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸರ್ಕಾರಿ ಸಾರಿಗೆ ಇಲಾಖೆಗೆ ಭಾರಿ ನಷ್ಠ ಸಂಭವಿಸಿದ್ದು, ಇದೇ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಸರ್ಕಾರಿ ಸಾರಿಗೆ ವಾಹನಗಳಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.

