Corona Virus

ಚೀನಾದಿಂದ ವಿಮುಖವಾದ ಜಗತ್ತು, ಭಾರತವೇ ಪರ್ಯಾಯ; ಇದು ನಮಗೆ ವರದಾನ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಪ್ರಸಕ್ತ ಬೆಳವಣಿಗೆಯಲ್ಲಿ ಜಗತ್ತು ಚೀನಾದೊಂದಿಗೆ ವ್ಯವಹಾರ ಮಾಡಲು ಬಯಸುತ್ತಿಲ್ಲ. ಜಗತ್ತಿಗೆ ಚೀನಾ ಬಳಿಕ ಭಾರತವೇ ಪರ್ಯಾಯ ಮಾರ್ಗವಾಗಿ ಕಾಣುತ್ತಿದ್ದು, ಇದು ನಮಗೆ ವರವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವಿಜಯಪುರ: ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಸೋಂಕಿತಳ ಫೋಟೋ ಹರಿಬಿಟ್ಟ ಆರೋಪಿ ಬಂಧನ!
ಕೊರೋನಾ ಪಾಸಿಟಿವ್ ಸೋಂಕಿತಳ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇರೆಗೆ ವಿಜಯಪುರದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಂಟೈನ್ ಮೆಂಟ್ ಝೋನ್ ಪಟ್ಟಿ ಮತ್ತೆ ಪರಿಷ್ಕರಿಸಿದ ಬಿಬಿಎಂಪಿ, 20 ರಿಂದ 23ಕ್ಕೆ ಏರಿಕೆ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡ ತನ್ನ ಕಂಟೈನ್ ಮೆಂಟ್ ಝೋನ್ ಪಟ್ಟಿಯನ್ನು ಮತ್ತೆ ಪರಿಷ್ಕರಿಸಿದೆ.

ಕೊರೋನಾ ವೈರಸ್: ಕರ್ನಾಟಕದಲ್ಲಿ 8 ಕೋವಿಡ್-19 ಸೋಂಕಿತರು ಗುಣಮುಖ, ಡಿಸ್ಚಾರ್ಜ್
ಮಾರಕ ಕೊರೋನಾ ವೈರಸ್ ಅಬ್ಬರ ಕರ್ನಾಟಕದಲ್ಲಿ ಮುಂದುವರೆದಿರುವಂತೆಯೇ ಇತ್ತ ವೈರಸ್ ವಿರುದ್ಧ ಸತತ ಹೋರಾಟ ಮಾಡುತ್ತಿರುವ ವೈದ್ಯರು ಶುಭ ಸುದ್ದಿ ನೀಡಿದ್ದು ಕರ್ನಾಟಕದಲ್ಲಿ 8 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೋನಾ ವೈರಸ್: 'ಮಹಾ' ದಾಖಲೆ, ಒಂದೇ ದಿನ 811 ಸೋಂಕು ಪ್ರಕರಣ, ಉದ್ಧವ್ ಠಾಕ್ರೆ ಸರ್ಕಾರ ಹೇಳಿದ್ದೇನು ಗೊತ್ತಾ?
ಮಾರಕ ಕೊರೋನಾ ವೈರಸ್ ಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ಇಂದು ಮತ್ತೆ ಬರೊಬ್ಬರಿ 811 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 6,817ಕ್ಕೆ ಏರಿಕೆಯಾಗಿದೆ.

ಕೊರೋನಾ ವಿರುದ್ಧ ಹೋರಾಟ; ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ ಅಮೆರಿಕನ್ನರಿಂದ 'ಡ್ರೈವ್ ಆಫ್ ಹಾನರ್' ಗೌರವ
ಮಾರಕ ಕೊರೋನಾ ವಿರುದ್ಧ ಅಮೆರಿಕದಲ್ಲಿ ಹೋರಾಡುತ್ತಿರುವ ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ ಅಮೆರಿಕನ್ನರು 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಿದ್ದಾರೆ.

ಕೋವಿಡ್-19: ಪರಿಸ್ಥಿತಿ ಅವಲೋಕನಕ್ಕೆ ಬಂದಿದ್ದ ಕೇಂದ್ರ ತಂಡದ ವಿರುದ್ಧ ಟಿಎಂಸಿ ಅಸಮಾಧಾನ
ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ಅವಲೋಕನಕ್ಕಾಗಿ ಆಗಮಿಸಿದ್ದ ಕೇಂದ್ರೀಯ ತಂಡದ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೊರೋನಾ ವೈರಸ್ ಲಾಕ್ ಡೌನ್ ಗೆ ದಿನಗೂಲಿ ಕಾರ್ಮಿಕರು ತತ್ತರ; ಸ್ವಂತ ಭೂಮಿಯನ್ನೇ ಮಾರಿ ನೆರವಿಗೆ ನಿಂತ ಕರ್ನಾಟಕದ ಸೋಹದರರು!
ಒಂದು ಯುದ್ಧ ಏರ್ಪಟ್ಟಾಗ ಎಲ್ಲರೂ ಒಗ್ಗೂಡಿ ಹೋರಾಡುವುದುಂಟು.. ಇದೀಗ ಭಾರತ ಕೂಡ ಅಂತಹುದೇ ಸ್ಥಿತಿಯಲ್ಲಿದ್ದು, ಕೊರೋನಾ ಎಂಬ ಕಾಣದ ಶತ್ರುವಿನ ವಿರುದ್ಧ ಹೋರಾಟ ಮಾಡಲು ಜಾತಿ, ಸಮುದಾಯ, ಧರ್ಮಗಳನ್ನು ಮರೆತು ಒಗ್ಗೂಡಿ ನಿಂತಿದೆ. ಇದಕ್ಕೆ ಕೋಲಾರದ ಸಹೋದರರು ಸ್ಪಷ್ಟ ಉದಾಹರಣೆಯಾಗಿ ನಿಂತಿದ್ದಾರೆ.

25 ಸಾವಿರ ಗಡಿಯತ್ತ ಕೊರೋನಾ ಸೋಂಕಿತರ ಸಂಖ್ಯೆ, ಒಂದೇ ದಿನ 1,490 ಹೊಸ ಪಾಸಿಟಿವ್ ಪ್ರಕರಣ!
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 25 ಸಾವಿರ ಗಡಿಯತ್ತ ಸಾಗಿದ್ದು, ಒಂದೇ ದಿನ 1,490 ಹೊಸ ಪಾಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಶನಿವಾರ ದೇಶದಲ್ಲಿ ಕೋವಿೃಡ್-19 ಸೋಂಕಿತರ ಸಂಖ್ಯೆ 24,942ಕ್ಕೆ ಏರಿಕೆಯಾಗಿದೆ.

