corona

ನೆರೆಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ: ಮಂಡ್ಯದಲ್ಲಿ ಮೊಟ್ಟ ಮೊದಲ ಪ್ಲಾಸ್ಮಾ ಬ್ಯಾಂಕ್
ಹಳೇ ಮೈಸೂರು ಭಾಗದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಮಂಡ್ಯಗೆ ಮೊದಲ ಪ್ಲಾಸ್ಮಾ ಬ್ಯಾಂಕ್ ಸಿಕ್ಕಿದೆ, ಹಾಗಾಗಿ ಹಾಸನ, ಮೈಸೂರು ಮತ್ತು ಚಾಮರಾಜನಗರಗಳಿಗೆ ಇದರಿಂದ ಸಹಾಯವಾಗಲಿದೆ. ಈ ಪ್ಲಾಸ್ಮಾ ಮಂಡ್ಯ ಮೆಡಿಕಲ್ ಸೈನ್ಸ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಆರಂಭವಾಗಲಿದೆ.

ಕೊರೋನಾ: 120 ಅಂತ್ಯಕ್ರಿಯೆಗಳಿಗೆ ಸಹಾಯ ಮಾಡಿ ಇತರರಿಗೆ ಪ್ರೇರಣೆಯಾದ ಮೈಸೂರು ವ್ಯಕ್ತಿ!
ಕೊರೋನಾ ವೈರಸ್ ಎಂಬ ಹೆಸರು ಕೇಳಿದರೆ ಜನರು ಬೆಚ್ಚಿ ಬೀಳುತ್ತಿರುವ ಈ ದಿನಗಳಲ್ಲಿ ಮೈಸೂರು ಮೂಲದ ವ್ಯಕ್ತಿಯೊಬ್ಬರು 120 ಮಂದಿ ಸೋಂಕಿತ ವ್ಯಕ್ತಿಗಳ ಅಂತ್ಯಕ್ರಿಯೆ ನಡೆಸಲು ಸಹಾಯ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.

ಸ್ವಾಬ್ ಪಡೆದ 2 ಗಂಟೆಗಳಲ್ಲಿ ವರದಿ ನೀಡಲು ಆರೋಗ್ಯ ಇಲಾಖೆ ಚಿಂತನೆ
ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಮೂಗು ಮತ್ತು ಗಂಟಲ ದ್ವರದ ಮಾದರಿ ಸಂಗ್ರಹಿಸಿದ ಪರೀಕ್ಷೆಗಳನ್ನು ಶೀಘ್ರಗತಿಯಲ್ಲಿ ನಡೆಸಿ 2 ಗಂಟೆಗೊಳಗಾಗಿ ವೈದ್ಯಕೀಯ ಫಲಿತಾಂಶ ನೀಡುವುದರ ಕುರಿತು ಆರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮೈಸೂರು: ಜಿಲ್ಲೆಯಲ್ಲಿ ಒಂದೇ ದಿನ 635 ಮಂದಿಗೆ ಕೊರೋನಾ
ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 635 ಮಂದಿಗೆ ಕೋವಿಡ್ ಇರುವುದು ದೃಢವಾಗಿದೆ. ಕೋವಿಡ್ ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸೋಂಕಿತರ ಪೈಕಿ 259 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಷ್ಟ ಪರಿಹಾರಗೊಳ್ಳಲು ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಸರ್ಕಾರ ಗಂಭೀರ ಚಿಂತನೆಯಲ್ಲಿದೆ: ಗೃಹ ಸಚಿವ
ರಾಜ್ಯದಲ್ಲಿ ಕೊರೋನಾ, ಪ್ರವಾಹ ಹಾಗೂ ಗಲಭೆ ಪ್ರಕರಣಗಳಂತಹ ಸಮಸ್ಯೆಗಳು ತಲೆದೋರಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಕೋವಿಡ್-19: ದೇಶದಲ್ಲಿ ಒಂದೇ ದಿನ 63,489 ಕೇಸ್ ಪತ್ತೆ, 25.8 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 49,980 ಮಂದಿ ಬಲಿ
ದೇಶದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 63,489 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,89,682ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತದಲ್ಲಿ ಕೊರೋನಾ ಆರ್ಭಟ: 25 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 49,306 ಮಂದಿ ಬಲಿಪಡೆದ ಮಹಾಮಾರಿ ವೈರಸ್
ದೇಶದಲ್ಲಿ ಕೊರೋನಾ ರೌದ್ರನರ್ತನ ಮುಂದುವರೆದಿದ್ದು, ಒಂದೇ ದಿನ 65,002 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 25 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

ಕೊರೋನಾ ಪರೀಕ್ಷಾ ದರ ರೂ.500ಕ್ಕೆ ಇಳಿಸಿದ ರಾಜ್ಯ ಸರ್ಕಾರ
ಕೊರೋನಾ ಪರೀಕ್ಷಾ ದರವನ್ನು ಮತ್ತಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಕೊರೋನಾ: ಮನೆಯವರ ವಿರೋಧ, ಮತ್ತೆ ಸೋಂಕು ತಗುಲುವ ಭೀತಿ: ಪ್ಲಾಸ್ಮಾ ದಾನ ಮಾಡಲು ಹಿಂಜರಿಯುತ್ತಿರುವ ಗುಣಮುಖರು!
ಮನೆಯವರ ವಿರೋಧ ಹಾಗೂ ಮತ್ತೆ ಸೋಂಕು ತಗುಲುವ ಭೀತಿಯಿಂದಾಗಿ ಪ್ಲಾಸ್ಮಾ ದಾನ ಮಾಡಲು ಗುಣಮುಖರಾದ ಸೋಂಕಿತರು ಹಿಂಜರಿಯುತ್ತಿರುವ ಬೆಳವಣಿಗೆಗಳು ರಾಜ್ಯದಲ್ಲಿ ಹೆಚ್ಚಾಗತೊಡಗಿವೆ.

