corona

ವಾರಣಾಸಿ: ನವಜಾತ ಶಿಶುವಿಗೆ ಕೊರೋನಾ ಪಾಸಿಟಿವ್, ಆದರೆ ತಾಯಿಗೆ ನೆಗೆಟಿವ್!
ಹೆರಿಗೆಗೆ ಮುಂಚಿತವಾಗಿ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ತಾಯಿಗೆ ನೆಗೆಟಿವ್ ವರದಿ ಬಂದಿದ್ದು, ಹೆರಿಗೆಯ ಬಳಿಕ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆಯೊಂದು ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಭಾರತದಲ್ಲಿ ಕೊರೋನಾ ಇಳಿಮುಖ: ದೇಶದಲ್ಲಿಂದು 1.73 ಲಕ್ಷ ಕೇಸ್ ಪತ್ತೆ, 3,617 ಮಂದಿ ಸಾವು
ಭಾರತದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,73,790 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 45 ದಿನಗಳಲ್ಲೇ ಕನಿಷ್ಠವಾಗಿದೆ. ಇದೇ ವೇಳೆ ಶನಿವಾರ 3,617 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು: ಶುಲ್ಕ ಪಾವತಿಸದ್ದಕ್ಕೆ ಸೋಂಕಿತನ ಮೃತದೇಹ ನೀಡದ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲು
ಚಿಕಿತ್ಸಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಕೊರೋನಾ ಸೋಂಕಿನಿಂದ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನು ಒತ್ತೆಯಾಗಿರಿಸಿಕೊಂಡ ಆರೋಪದ ಮೇಲೆ ನಗರದ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಲಸಿಕೆ ಮಿಶ್ರಣದ ಯಾವುದೇ ಪ್ರಕರಣ ವರದಿಯಾಗಿಲ್ಲ: ಡಿಸಿಎಂ ಅಶ್ವತ್ಥ್ ನಾರಾಯಣ್
ರಾಜ್ಯದಲ್ಲಿ ಕೊರೋನಾವೈರಸ್ ಲಸಿಕೆಯ ವಿತರಣೆ ವೇಳೆ ಎರಡು ಕಂಪನಿಯ ಲಸಿಕೆಗಳು ಮಿಶ್ರಣ ಆಗಿರುವ ಕುರಿತು ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಬಾಕಿ ಮೊತ್ತ ನೀಡದ ಸರ್ಕಾರ: ಸೇವೆ ಸ್ಥಗಿತಗೊಳಿಸಲು ವೈದ್ಯಕೀಯ ತ್ಯಾಜ್ಯ ಘಟಕಗಳ ನಿರ್ಧಾರ
ವರ್ಷದಿಂದಲೂ ರಾಜ್ಯ ಸರ್ಕಾರ ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿರುವ ರಾಜ್ಯದ 26 ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಘಟಕಗಳು ಸೇವೆ ಸ್ಥಗಿತಗೊಳಿಸಲುವ ಬೆದರಿಕೆ ಹಾಕಿವೆ.

ರೆಮ್ಡೆಸಿವಿರ್ ಅಕ್ರಮ ಮಾರಾಟಕ್ಕೆ ಆಸ್ಪತ್ರೆ ಸಿಬ್ಬಂದಿ-ವಿತರಕರ ನಡುವಿನ 'ಅಕ್ರಮ ಸಂಪರ್ಕ'ಗಳೇ ಕಾರಣ!
ಕೊರೋನಾ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುವ ರೆಮ್ಡೆಸಿವಿರ್ ಔಷಧದ ಅಕ್ರಮ ಮಾರಾಟ ನಿಯಂತ್ರಿಸಲು ಸರ್ಕಾರ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವ ಹೊರತಾಗಿಯೂ ರಾಜ್ಯದಲ್ಲಿ ರೆಮ್ಡೆಸಿವಿರ್ ಅಕ್ರಮ ಮಾರಾಟ ಇನ್ನೂ ನಿಂತಿಲ್ಲ.

ಬೀದಿಬದಿ ವ್ಯಾಪಾರಿಗಳು, ಮೆಟ್ರೋ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
ಬೀದಿಬದಿ ವ್ಯಾಪಾರಿಗಳು, ಮೆಟ್ರೋ ನಿರ್ಮಾಣ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ 18ರಿಂದ 44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದರು.

ಜೀವ ರಕ್ಷಕ ಔಷಧಿ, ವೈದ್ಯಕೀಯ ಸಲಕರಣೆಗಳ ಮೇಲಿನ ಜಿಎಸ್'ಟಿ ರದ್ದುಪಡಿಸಿ: ಕೇಂದ್ರಕ್ಕೆ ಪ್ರಿಯಾಂಕಾ ಗಾಂಧಿ ಆಗ್ರಹ
ಕೊರೋನಾ ಸಾಂಕ್ರಾಮಿಕ ರೋಗ ವಿರುದ್ಧ ಹೋರಾಡಲು ಬಳಕೆ ಮಾಡುತ್ತಿರುವ ಔಷಧಿಗಳು, ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ರದ್ದುಪಡಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಆಗ್ರಹಿಸಿದ್ದಾರೆ.

ಕೋವಿಡ್-19: ಭಾರತದಲ್ಲಿ ಇಂದು 1.86 ಲಕ್ಷ ಹೊಸ ಕೇಸ್ ಪತ್ತೆ; 3,847 ಮಂದಿ ಸೋಂಕಿನಿಂದ ಸಾವು
ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. ದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳಲ್ಲಿ 1,86,364 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 44 ದಿನಗಳ ಬಳಿಕ ದೈನಂದಿನ ಕೊರೋನಾ ಪ್ರಕರಣ ಭಾರೀ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

