coronavirus

ಬೆಂಗಳೂರಲ್ಲಿ ಒಂದೇ ದಿನ 18 ಪ್ರಕರಣ ಪತ್ತೆ: ಒಬ್ಬ ವ್ಯಕ್ತಿಯಿಂದ 9 ಮಂದಿಗೆ ಸೋಂಕು, ಕ್ವಾರಂಟೈನ್ ನಲ್ಲಿ 144 ಮಂದಿ, ಹೊಂಗಸಂದ್ರ ವಾರ್ಡ್ ಸೀಲ್!
ರಾಜ್ಯದಲ್ಲಿ ಕೊರೋನಾ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಗುರುವಾರ ಒಂದೇ ದಿನ ಬೆಂಗಳೂರು ನಗರದಲ್ಲಿ 18 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬಿಹಾರ ಪ್ರಯಾಣ ಹಿನ್ನೆಲೆ ಹೊಂದಿದ್ದ ವ್ಯಕ್ತಿ 9 ಮಂದಿಗೆ ಸೋಂಕು ಹರಡಿಸಿದ್ದು, ಪರಿಣಾಮ ಹೊಂಗಸಂದ್ರ ವಾರ್ಡ್ ಸೀಲ್ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ: ಕೇವಲ 24 ಗಂಟೆಗಳಲ್ಲಿ 3,176 ಮಂದಿ ಬಲಿ, ಸಾವಿನ ಸಂಖ್ಯೆ 50 ಸಾವಿರಕ್ಕೆ ಏರಿಕೆ
ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 3,176 ಮಂದಿ ಬಲಿಯಾಗಿದ್ದಾರೆ.

ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಕಾರ್ಯನಿರತ ಪೊಲೀಸ್ ಮೇಲೆ ಯೋಧನಿಂದ ಹಲ್ಲೆ.!
ಮಾಸ್ಕ್ ಹಾಕಿಕೊಳ್ಳಿ, ಅನವಶ್ಯಕವಾಗಿ ತಿರುಗಾಡಬೇಡಿ ಎಂದು ಬುದ್ದಿವಾದ ಹೇಳಿದ ಕರ್ತವ್ಯ ನಿರತ ಪೊಲೀಸನಿಗೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

ಸುಗ್ರೀವಾಜ್ಞೆಗೂ ಹೆದರದ ದುಷ್ಟರು: ಮಂಡ್ಯದಲ್ಲೂ ಆಶಾ ಕಾರ್ಯಕರ್ತೆಯ ಮೇಲೆ ದಾಳಿ, ಆತ್ಮಹತ್ಯೆಗೆ ಯತ್ನ!
ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಆದೇಶಿ ಸುಗ್ರೀವಾಜ್ಞೆ ಹೊರಡಿಸಿದ್ದರು ಇದಕ್ಕೆ ಹೆದರದ ಕೊರೋನಾ ಶಂಕಿತನೋರ್ವ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯವೆಸಗಿದ್ದು ಇದರಿಂದ ನೊಂದ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪ ಕೀಳುಮಟ್ಟದ್ದು ಬಿಜೆಪಿ ತಿರುಗೇಟು
ದೇಶದಲ್ಲಿ ಕೊರೋನಾ ಸೋಂಕು ಹರಡುತ್ತಿರುವ ನಡುವೆ ಬಿಜೆಪಿ ದೇಶದಲ್ಲಿ ಕೋಮು ವೈರಸ್ ಹರಡುತ್ತಿದೆ ಎಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಆರೋಪ ಅತ್ಯಂತ ಕೀಳು, ಕೊಳಕು, ಬಾಲಿಷ ಎಂದು ಬಿಜೆಪಿ ತಿರುಗೇಟು ನೀಡಿದೆ.

ಇರುಳ ಕಂಡ ಬಾವಿಗೆ ಹಗಲು ಬಿದ್ದ ಇಮ್ರಾನ್, ಚೀನಾದ ವ್ಯೂಹದಲ್ಲಿ ಸಿಲುಕಿ 'ಡೆಡ್ಲಿ ಲ್ಯಾಬ್' ಆದ ಪಾಕ್!
ಪರಮಿತ್ರ ಪಾಕಿಸ್ತಾನವನ್ನೇ ಚೀನಾ ತನ್ನ ಚಕ್ರವ್ಯೂಹಕ್ಕೆ ಸಿಲುಕಿಸಿದೆ. ಹೌದು ಚೀನಾ ಪಾಕಿಸ್ತಾನವನ್ನು ಪ್ರಯೋಗ ಪಶು ಆಗಿ ಬಳಸಿಕೊಳ್ಳುತ್ತಿದೆ.

ದೇಶದಲ್ಲಿ ಹೊಸದಾಗಿ 1,229 ಪ್ರಕರಣ ಪತ್ತೆ; 34 ಬಲಿ, ಸಾವಿನ ಸಂಖ್ಯೆ 686ಕ್ಕೆ ಏರಿಕೆ, 5 ಲಕ್ಷ ಪರೀಕ್ಷೆ!
ಮಹಾಮಾರಿ ಕೊರೋನಾ ವೈರಸ್ ದೇಶದಲ್ಲಿ ಮತ್ತೆ ಹೆಚ್ಚಾಗಿದ್ದು ಕಳೆದ 24 ಗಂಟೆಗಳಲ್ಲಿ 1,229 ಹೊಸ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 21,700ಕ್ಕೆ ಏರಿಕೆಯಾಗಿದೆ. ಇನ್ನು ಇಂದು 34 ಮಂದಿ ಮೃತಪಟ್ಟಿದ್ದು ಸಾವಿನ ಸಖ್ಯೆ 686ಕ್ಕೆ ಏರಿಕೆಯಾಗಿದೆ.

ಕೊರೋನಾ: ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶ 'ಕಂಟೈನ್‌ಮೆಂಟ್ ಜೋನ್' ಎಂದು ಘೋಷಣೆ
ಮಂಗಳುೂರು ನಗರದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಣ್ಣೂರು ಗ್ರಾಮ ವ್ಯಾಪ್ತಿಯ ಪಡೀಲ್ ನಲ್ಲಿರುವ ಖಾಸಗಿ ಆರೋಗ್ಯ ಕೇಂದ್ರವಾದ ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮೇಲ್ವಿಚಾರಣೆಯ ಐಸೋಲೇಷನ್ ಕೇಂದ್ರವಾಗಿ ಘೋಷಿಸಲಾಗಿದೆ.

ಕೋವಿಡ್ ಬಿಕ್ಕಟ್ಟು: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ತಡೆ
ಕೊರೋನಾವೈರಸ್ ಲಾಕ್‌ಡೌನ್ ಸಮಯದಲ್ಲಿ ತೆರಿಗೆ ಸಂಗ್ರಹಕ್ಕೆ ಸಮಸ್ಯೆಯಾಗಿರುವ ಹಿನ್ನೆಲೆ ಕೇಂದ್ರ ನೌಕರರ ಹೆಚ್ಚುವರಿ ತುಟ್ಟಿಭತ್ಯೆ (ಡಿಎ ಮತ್ತು ಡಿಆರ್) ಹೆಚ್ಚಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

