coronavirus

ಕಚೇರಿಗೆ ಹಾಜರಾಗುವಂತೆ ಸಿಬ್ಬಂದಿಗೆ ಕೆಎಸ್ಆರ್ಟಿಸಿ ಸೂಚನೆ: ಹಾಟ್ ಸ್ಪಾಟ್ ಹೊರತುಪಡಿಸಿ ಇತರೆಡೆ ಆರಂಭಗೊಳ್ಳುತ್ತಾ ಬಸ್ ಸಂಚಾರ?
ಎರಡನೇ ಹಂತದ ಲಾಕ್ ಡೌನ್ ಏಪ್ರಿಲ್ 20 ರಂದು ಅವಲೋಕನೆಗೊಳ ಪಡಲಿದ್ದು ನಂತರದಲ್ಲಿ ಹಂತ ಹಂತವಾಗಿ ಸಾರಿಗೆ ಬಸ್ ಗಳನ್ನು ರೆಡ್ ಝೋನ್ ಹೊರತುಪಡಿಸಿ ಇತರೆ ಝೋನ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸ್ತೆಗಿಳಿಸುವ ಸಾಧ್ಯತೆ ಇದೆ.

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ: ರಾಜ್ಯದಲ್ಲಿ ತಪಾಸಣೆ ಹೆಚ್ಚಳಕ್ಕೆ ಮೊಬೈಲ್ ಬೂತ್'ಗೆ ಸಿಎಂ ಚಾಲನೆ
ರಾಜ್ಯದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ತಪಾಸಣೆ ಕೈಗೊಳ್ಳಲು ಸ್ಥಾಪನೆ ಮಾಡಲಾಗಿರುವ ಮೊಬೈಲ್ ಬೂತ್'ಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಚಾಲನೆ ನೀಡಿದ್ದಾರೆ.

ಮನಕಲುಕುವ ದೃಶ್ಯ: ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್, ತಂದೆಯನ್ನು ಹೊತ್ತು ಸಾಗಿದ ಮಗ, ವಿಡಿಯೋ!
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ವಿಸ್ತರಿಸಲಾಗಿದ್ದು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸಿಗದೆ ಮಗ ತಂದೆಯನ್ನು ಹೊತ್ತು ಸಾಗುತ್ತಿರುವ ದೃಶ್ಯ ಮನಕಲುಕುವಂತಿದೆ.

ಶಿಕ್ಷಣ ಇಲಾಖೆ ಹೊಸ ಪ್ರಯತ್ನ, ಮಕ್ಕಳ ಯುಟ್ಯೂಬ್ ಚಾನಲ್ ಪ್ರಾರಂಭಕ್ಕೆ ನಿರ್ಧಾರ: ಸುರೇಶ್ ಕುಮಾರ್
ಬೇಸಿಗೆ ರಜೆ, ಲಾಕ್ ಡೌನ್ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಕಾರಿಯಾಗಲೆಂದೇ ಶಿಕ್ಷಣ ಇಲಾಖೆ ಹೊಸ ಪ್ರಯತ್ನಕ್ಕೆ ಮುಂದಾಗಿ ಪ್ರಪ್ರಥಮ ಪ್ರಯೋಗವಾಗಿ ಮಕ್ಕಳ ಯುಟ್ಯೂಬ್ ಚಾನಲ್ ಪ್ರಾರಂಭಿಸಲು ನಿರ್ಧರಿಸಿದೆ.

ಕೊರೋನಾ ಲಾಕ್ ಡೌನ್: ಏಪ್ರಿಲ್ 20ರ ನಂತರವೇ ರಾಜ್ಯದಲ್ಲಿ ನಿರ್ಬಂಧ ಸಡಿಲ
ಕೊರೋನಾ ವೈರಸ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಮ ಕ್ರಮಗಳನ್ನು ಕೈಗೊಂಡಿದ್ದು, ಏಪ್ರಿಲ್ 20ರ ಬಳಿಕವಷ್ಟೇ ರಾಜ್ಯದಲ್ಲಿ ನಿರ್ಬಂಧಗಳು ಸಡಿಲಗೊಳ್ಳಲು ಸಾಧ್ಯ ಎಂದು ಹೇಳಲಾಗುತ್ತಿದೆ.

ಕೊರೋನಾಗೆ ಸೋಂಕಿತ ವ್ಯಕ್ತಿ ಸಾವು: ಸರ್ಕಾರದ ಆದೇಶ ಗಾಳಿಗೆ ತೂರುತ್ತಿದ್ದ ಜನರಿಂದಲೇ ಇದೀಗ ಟಿಪ್ಪುನಗರ ಸೀಲ್!
ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಳಿಕ ಲಾಕ್ಡೌನ್ ನಿಯಮ ಉಲ್ಲಂಘಿನೆ ಮಾಡಿ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ ಜನರೇ ಇದೀಗ ಭೀತಿಗೊಳಗಾಗಿ ಟಿಪ್ಪುನಗರವನ್ನು ಸೀಲ್ ಡೌನ್ ಮಾಡಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ 14 ದಿನ ಮನೆಯಲ್ಲಿಯೇ ಕ್ವಾರಂಟೈನ್: ಆರೋಗ್ಯ ಇಲಾಖೆ
ಕೊರೋನಾ ಸೋಂಕು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರಿಗೂ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಮಹಾರಾಷ್ಟ್ರ: ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೇ ಕೊರೋನಾ; ಕ್ವಾರಂಟೈನ್'ನಲ್ಲಿರುವಂತೆ 69 ಗರ್ಭಿಣಿಯರಿಗೆ ಸೂಚನೆ
ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರೊಬ್ಬರಲ್ಲಿ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದ 69 ಗರ್ಭಿಣಿಯರನ್ನು ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ: ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಲ್ಲೂ ವೈರಸ್ ಪಾಸಿಟಿವ್
ದೆಹಲಿಯ ವೈದ್ಯಕೀಯ ಆಸ್ಪತ್ರೆಯೊಂದರಲ್ಲಿ ತುರ್ತುನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಗುರುವಾರ ತಿಳಿದುಬಂದಿದೆ.

