coronavirus

ನಾಲ್ಕು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದ ವಿವಾಹದಲ್ಲಿ ಯಡಿಯೂರಪ್ಪ ಭಾಗಿ: ತಮ್ಮದೇ ಆದೇಶ ಉಲ್ಲಂಘಿಸಿದ ಸಿಎಂ
ಮಾರಣಾಂತಿಕ ಕೊರೋನಾ ವೈರಸ್ ಕುರಿತ ಸರ್ಕಾರದ ನಿರ್ದೇಶನ ಉಲ್ಲಂಘಿಸಿ ಮೇಲ್ಮನೆಯ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ನೆರವೇರಿದ್ದು, ಮದುವೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡು ವದು ವರರನ್ನು ಆಶಿರ್ವದಿಸಿದ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.

ಚೀನಾದಿಂದ ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ, ಸತ್ತರೇ ಇಲ್ಲೇ ಸಾಯುತ್ತೇನೆ ಎಂದ ಕನ್ನಡಿಗ, ವಿಡಿಯೋ ವೈರಲ್!
ತುಮಕೂರು ಮೂಲದ ವಿದ್ಯಾರ್ಥಿಯೋರ್ವ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು ಕೊರೋನಾ ವೈರಸ್ ಭೂತದಿಂದ ಕಂಗೆಟ್ಟಿರುವ ಚೀನಾದಿಂದ ಭಾರತಕ್ಕೆ ಬಂದು ಆತಂಕ ಸೃಷ್ಟಿಸಲ್ಲ, ಆಗೂ ನನಗೂ ವೈರಸ್ ಸೋಂಕಿದರೆ ಇಲ್ಲೇ ಸಾಯುತ್ತೇನೆ ಎಂದು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊವಿಡ್-19 ಭೀತಿಗೆ ಚುನಾವಣೆ ಮುಂದೂಡಿಕೆ!
ಕೊವಿಡ್-19 ಸೋಂಕು ಭೀತಿಯ ಹಿನ್ನಲೆಯಲ್ಲಿ ಆಂಧ್ರಪ್ರದೇಶದಲ್ಲಿ ನಿಗದಿಯಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆರು ವಾರಗಳ ಕಾಲ ಮುಂದೂಡಲಾಗಿದೆ.

ದಾವಣಗೆರೆ: ಕೊರೋನಾ ಲಸಿಕೆ ಕಾರ್ಯಕ್ರಮ ನಿಲ್ಲಿಸಿದ ಪೋಲೀಸರು!
ನಗರದ ಈಶ್ವರಮ್ಮ ಸ್ಕೂಲ್ ಆಫ್ ಪಿಜೆ ಎಕ್ಸ್ಟೆನ್ಷನ್ ನಲ್ಲಿ ಮಾರಕ ಕೊರೋನಾವೈರಸ್ ಗಾಗಿ ಲಸಿಕೆ ಕಾರ್ಯಕ್ರಮದ ಹೆಸರಲ್ಲಿ ಸಾರ್ವಜನಿಕರರಿಗೆ ಲಸಿಕೆ ವಿತರಣೆ ನಡೆಸುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ತಡೆಹಿಡಿದ್ದಾರೆ.

ಕೋರೋನಾ ವೈರಸ್: ಕಲಬುರಗಿ ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ, ಪರಿಶೀಲನೆ
ದೇಶದ ಮೊದಲ ಕೋರೋನಾ ಸಾವು ರಾಜ್ಯದ ಕಲಬುರಗಿಯಲ್ಲಿ ಸಂಭವಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು ಜಿಲ್ಲೆಯ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬ್ಯಾಟ್ ಮ್ಯಾನ್ ಗೂ ತಟ್ಟಿತು ಕೊರೋನಾ ವೈರಸ್ ಬಿಸಿ!
ಕೊರೋನಾ ವೈರಸ್ ವಿದೇಶಿ ರಾಜಕಾರಣಿಗಳು, ಪ್ರಧಾನಿಗಳು ಅವರ ಕುಟುಂಬ ಸದಸ್ಯರನ್ನೂ ವ್ಯಾಪಿಸಿದ್ದು, ಈಗ ಬ್ಯಾಟ್ ಮ್ಯಾನ್ ಗೂ ವೈರಾಣುವಿನ ಬಿಸಿ ತಟ್ಟಿದೆ.

ಕೊರೋನಾ ವೈರಸ್ ಭೀತಿ: ಮಾಸ್ಕ್ ಹಾಕಿಕೊಂಡು ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ ಜೋಡಿ
ಒಂದೆಡೆ ಕೋರೋನಾ ಭೀತಿಯಿಂದ ಸಾರ್ವಜನಿಕರು ಹೊರಬರಲು ಹೆದರುತ್ತಿದ್ದರೆ, ಮತ್ತೊಂದೆಡೆ ನೂತನ ಜೋಡಿಯೊಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ಮಾಸ್ಕ್ ಧರಿಸಿಕೊಂಡು ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ.

ಪ್ರಚಾರ ಪಡೆಯುವ ಪ್ರಹಸನ ಬೇಡ: ಮಾರಕ ಕೊರೋನಾ ತಡೆಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ
ಮಾರಕ ಕೊರೋನಾ ದೇಶಾದ್ಯಂತ ವ್ಯಾಪಿಸಿದ್ದು ಜನರು ಭಯಭೀತರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಆರು ಮಂದಿಯಲ್ಲಿ ಕೊರೋನಾವೈರಸ್ ದೃಢಪಟ್ಟಿದ್ದು ಕಲಬುರಗಿಯಲ್ಲಿ ಓರ್ವ ಮೃತಪಟ್ಟಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೊರೋನಾ ನಿಯತ್ರಣಕ್ಕಾಗಿ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಕೊರೋನಾವನ್ನು ಪ್ರಚಾರಕ್ಕಾಗಿ ಬಳಸಿಕೊಂಡು ಪ್ರಹ

ಅಮೆರಿಕಾ ಅಧ್ಯಕ್ಷ ಟ್ರಂಪ್'ಗೂ ಕೊರೋನಾ ಭೀತಿ: ವೈದ್ಯಕೀಯ ವರದಿಯಲ್ಲಿ ಸತ್ಯ ಬಯಲು
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಕೊರೋನಾ ವೈರಸ್ ಭೀತಿ ಕಾಡಲು ಆರಂಭಿಸಿದ್ದು, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

