coronavirus

ಭಾರತದಲ್ಲಿ ಕೊರೋನಾ ರಣಕೇಕೆ: ಒಂದೇ ದಿನ ದಾಖಲೆಯ 19,906 ಮಂದಿಯಲ್ಲಿ ವೈರಸ್ ಪತ್ತೆ, 5.28 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 19,906 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,28,859ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ಪೊಲೀಸರಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು: ಹಲವು ಪೊಲೀಸ್ ಠಾಣೆಗಳ ಸ್ಥಳಾಂತರ
ಸಿಲಿಕಾನ್ ಸಿಟಿಯಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭದ್ರತೆ ನೀಡುವ ಕಾರ್ಯವನ್ನು ಮಾಡುತ್ತಿರುವ ಪೊಲೀಸರನ್ನು ಮಹಾಮಾರಿ ವೈರಸ್ ಎಡೆಬಿಡದೆ ಕಾಡುತ್ತಿದೆ. ನಗರದಲ್ಲಿ ಈ ವರೆಗೂ 123 ಮಂದಿ ಪೊಲೀಸರಲ್ಲಿ ವೈರಸ್ ಪತ್ತೆಯಾಗಿದ್ದು, ನಾಲ್ವರು ಪೊಲೀಸರು ಬಲಿಯಾಗಿದ್ದಾರೆ.

ನಾಳೆಯಿಂದ ನೈಟ್ ಕರ್ಫ್ಯೂ, ಮತ್ತೆ ಭಾನುವಾರ ಲಾಕ್ ಡೌನ್, ಸರ್ಕಾರಿ ನೌಕರರಿಗೆ 5 ದಿನ ಕೆಲಸ!
ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಮತ್ತು ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಕೊರೋನಾ ಸೋಂಕಿತನ ಮನೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮೊತ್ತದ ಚಿನ್ನಾಭರಣ ದೋಚಿದ ಕಳ್ಳರು!
ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಕುಟುಂಬದ ಮನೆಯಲ್ಲಿ ಕಳ್ಳತನ ಆಗಿರುವ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ಆರ್ ಅಶೋಕ್ ಗೆ ಬೆಂಗಳೂರು ಉಸ್ತುವಾರಿ ನೀಡಿದ್ದು ನನಗೆ ಬೇಸರ ತರಿಸಿಲ್ಲ: ಶ್ರೀರಾಮುಲು
ಕೊರೋನಾ ಸೋಂಕು ನಿವಾರಣೆ ವಿಚಾರದಲ್ಲಿ ತಾವು ಹಾಗೂ ತಮ್ಮ ಸಚಿವ ಸಹೋದ್ಯೋಗಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 9.90 ದಶಲಕ್ಷಕ್ಕೆ ಏರಿಕೆ, 4.80 ಲಕ್ಷ ಮಂದಿ ಸಾವು
ವಿಶ್ವದೆಲ್ಲೆಡೆ ಕೊರೋನಾ ಸ್ಫೋಟಗೊಂಡಿದ್ದು, 9.90 ದಶಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಾಮಾರಿ ವೈರಸ್'ಗೆ 4.80 ಲಕ್ಷ ಮಂದಿ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ನಾಡಹಬ್ಬ 'ದಸರಾ' ಆಚರಣೆ ಮೇಲೂ ಕೊರೋನಾ ಕರಿ ನೆರಳು!
ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮೇಲೂ ಕೊರೋನಾ ವೈರಸ್ ಕರಿ ಛಾಯೆ ಬಿದ್ದಿದ್ದು, ಈ ಬಾರಿ ಮೈಸೂರು ದಸರಾ ಒಡಿಶಾದಲ್ಲಿ ನಡೆದ ಪೂರಿ ಜಗನ್ನಾಥ ರಥಯಾತ್ರೆಯಂತೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದು ರೋಗಿಗಳಿಗೆ ಭರವಸೆಯ ಆಶಾಕಿರಣವಾದ 99ರ ವೃದ್ಧೆ!
ಕೊರೋನಾ ಸೋಂಕಿಗೆ ವಯಸ್ಕರು, ಮಧ್ಯ ವಯಸ್ಕರು ಮತ್ತು ಯುವ ಸಮೂಹ ಬಲಿಯಾಗುತ್ತಿರುವಾಗಲೇ, ಅಚ್ಚರಿಯ ರೀತಿಯಲ್ಲಿ 99 ವರ್ಷದ ಮಹಿಳಾ ಸೋಂಕಿರೊಬ್ಬರು ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಭಾರತದಲ್ಲಿ ಒಂದೇ ದಿನ 18,552 ಮಂದಿಗೆ ಕೊರೋನಾ; 5.08 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 15,685 ಮಂದಿ ಸಾವು
ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ ದಾಖಲೆಯ 18,552 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

