coronavirus

ದೇಶದಲ್ಲಿ ಕೊರೋನಾ ರೌದ್ರನರ್ತನ: ಕೇವಲ 6 ದಿನಗಳಲ್ಲಿ ಸೋಂಕಿತರ ಸಂಖ್ಯೆ 4 ರಿಂದ 5 ಲಕ್ಷಕ್ಕೆ ಏರಿಕೆ
ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕೇವಲ 6 ದಿನಗಳಲ್ಲಿ ಸೋಂಕಿತರ ಸಂಖ್ಯೆ 4ರಿಂದ 5 ಲಕ್ಷಕ್ಕೆ ಏರಿಕೆಯಾಗಿದೆ.

ಕೊರೋನಾ ಸಂಕಷ್ಟದ ನಡುವೆಯೇ ರಾಜ್ಯಕ್ಕೆ ಎದುರಾದ ಪ್ರವಾಹ ಭೀತಿ!
ಕೊರೋನಾ ವೈರಸ್ ನಿಂದಾಗಿ ನಲುಗಿ ಹೋಗುತ್ತಿರುವ ರಾಜ್ಯಕ್ಕೆ ಮತ್ತೊಂದು ಸಂಕಷ್ಟ ಕೂಡ ಎದುರಾಗಲಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದೀಗ ಪ್ರವಾಹ ಭೀತಿ ಎದುರಾಗಿದೆ.

ಎಸ್ಎಸ್ಎಲ್'ಸಿ ಪರೀಕ್ಷೆಗಾಗಿ ಕೈಜೋಡಿಸಿದ ಕೇರಳ-ಕರ್ನಾಟಕ: ನಿರಾತಂಕದಿಂದ ಪರೀಕ್ಷೆ ಬರೆದ ಗಡಿ ಗ್ರಾಮಗಳ 367 ವಿದ್ಯಾರ್ಥಿಗಳು
ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ನಡುವಲ್ಲೇ ರಾಜ್ಯದಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಯುತ್ತಿದ್ದು. ಪರೀಕ್ಷೆಗಾಗಿ ಕೇರಳ ಹಾಗೂ ಕರ್ನಾಟಕ ರಾಜ್ಯಗಳು ಕೈಜೋಡಿಸಿ ಕೆಲಸ ಮಾಡುತ್ತಿವೆ. ಉಭಯ ರಾಜ್ಯಗಳ ಸೂಕ್ತ ವ್ಯವಸ್ಥೆಗಳು ಹಾಗೂ ಭದ್ರತಾ ವ್ಯವಸ್ಥೆಗಳಿಂದಾಗಿ ಆತಂಕ ಬಿಟ್ಟು ಗಡಿ ಗ್ರಾಮಗಳ 367 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

8 ಮಂದಿಯಲ್ಲಿ ವೈರಸ್ ಪತ್ತೆ: ಆತಂಕದಲ್ಲಿ ಬಾಷ್ ಕಂಪನಿಯ ನೌಕರರು
ತಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿದ್ದ 8 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬಿಡದಿಯಲ್ಲಿರುವ ಬಾಷ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳಿದ ನೌಕರರು ಆತಂಕಕ್ಕೊಳಗಾಗಿದ್ದಾರೆ.

ಕೋವಿಡ್-19 ಲಸಿಕೆ ಬರುವವರೆಗೂ ನಾವು ಪರಸ್ಪರ ಎರಡು ಗಜಗಳಷ್ಟು ದೂರವಿರಬೇಕು, ಮಾಸ್ಕ್ ಧರಿಸಲೇಬೇಕು: ಪ್ರಧಾನಿ ಮೋದಿ
ಕೊರೋನಾ ವೈರಸ್'ಗೆ ಲಸಿಕೆಗಳು ಬರುವವರೆಗೂ ನಾವೆಲ್ಲರೂ ಎರಡು ಗಜಗಳಷ್ಟು ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸಲೇಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.

ದೇಶಾದ್ಯಂತ 24 ಗಂಟೆಗಳಲ್ಲಿ 17,296 ಕೊರೋನಾ ಪ್ರಕರಣ; ಸೋಂಕಿತರ ಸಂಖ್ಯೆ 4.90 ಲಕ್ಷಕ್ಕೆ ಏರಿಕೆ, 15,301 ಮಂದಿ ಸಾವು
ಶುಕ್ರವಾರ ದೇಶದಲ್ಲಿ ಕೊರೋನಾ ತನ್ನ ವ್ಯಾಪಕತೆಯನ್ನು ತೋರಿದ್ದು, ಒಂದೇ ದಿನ 407 ಜನರನ್ನು ಬಲಿಪಡೆದುಕೊಂಡಿದೆ. ಇದರೊಂದಿಗೆ ಈ ವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 15,301ಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸಾವು ದಾಖಲಾದ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ.

24 ಗಂಟೆಗಳಲ್ಲಿ ದೇಶಾದ್ಯಂತ 2,15,446 ಕೋವಿಡ್ ಪರೀಕ್ಷೆ, ಜೂನ್ 25ರವರೆಗೆ ಒಟ್ಟಾರೆ 77,76,228 ಸ್ಯಾಂಪಲ್ ಪರೀಕ್ಷೆ: ಐಸಿಎಂಆರ್
ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 2,15,446 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಕರ್ನಾಟಕಕ್ಕೆ ಮತ್ತೆ ಕೊರೋನಾಘಾತ: ಇಂದು ಹೊಸದಾಗಿ 442 ಸೋಂಕು ದೃಢ, 6 ಬಲಿ!
ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ 442 ಮಂದಿಗೆ ಕೊರೋನಾಗೆ ತುತ್ತಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 10,560ಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ವಲಯದ ಸುಲಿಗೆಗೆ ಅವಕಾಶಬೇಡ: ಡಿಕೆ ಶಿವಕುಮಾರ್
ರಾಜ್ಯದಲ್ಲಿ ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿಪಡಿಸಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೋವಿಡ್ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್, ಆಯುಷ್ಮಾನ್ ಕರ್ನಾಟಕ ಆರೋಗ್ಯ ಯೋಜನೆ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

