ದೇಶದಲ್ಲಿ ಕೊರೋನಾ ರೌದ್ರನರ್ತನ: ಕೇವಲ 6 ದಿನಗಳಲ್ಲಿ ಸೋಂಕಿತರ ಸಂಖ್ಯೆ 4 ರಿಂದ 5 ಲಕ್ಷಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕೇವಲ 6 ದಿನಗಳಲ್ಲಿ ಸೋಂಕಿತರ ಸಂಖ್ಯೆ 4ರಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕೇವಲ 6 ದಿನಗಳಲ್ಲಿ ಸೋಂಕಿತರ ಸಂಖ್ಯೆ 4ರಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. 

ಜ.30ರಂದು ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಸೋಂಕು ಇದೀಗ, 5 ಲಕ್ಷದ ಗಡಿ ದಾಟಿದೆ. ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳ ಕೊರೋನಾ ಸೋಂಕಿನ ಆಗುಹೋಗುಗಳ ಮಾಹಿತಿ ನೀಡುವ ವರ್ಲ್ಡೋಮೀಟರ್ ಅನ್ವಯ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 509,446 ಲಕ್ಷಕ್ಕೆ ತಲುಪಿದೆ. 

ಈ ಪೈಕಿ ಜೂನ್.1 ರಿಂದ ಜೂ.26ರವರೆಗೆ 3 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಅಂದರೆ ಒಟ್ಟು ಪ್ರಕರಣದಲ್ಲಿ ಶೇ.60ರಷ್ಟು ಪಾಲು ಜೂನ್ ತಿಂಗಳೊಂದರಲ್ಲಿಯೇ ದಾಖಲಾಗಿದೆ. ಇದೀಗ ಸಾಗುತ್ತಿರುವ ವೇಗದಲ್ಲಿ ಸಾಗಿದರೆ ಹಾಲಿ ವಿಶ್ವದಲ್ಲಿ 4ನೇ ಸ್ಥಾನದಲ್ಲಿರುವ ಭಾರತ, ಇನ್ನು 10 ದಿನಗಳಲ್ಲಿ ರಷ್ಯಾವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರುವ ಸಾಧ್ಯತೆಗಳಿವೆ. ಪ್ರಸಕ್ತ ಅಮೆರಿಕಾ 25 ಲಕ್ಷ ಸೋಂಕಿತರೊಂದಿಗೆ ನಂ.1 ಸ್ಥಾತನದಲ್ಲಿದ್ದರೆ, ಬ್ರೆಜಿಲ್ 12.33 ಲಕ್ಷ ಸೋಂಕಿತರೊಂದಿಗೆ 2ನೇ ಸ್ಥಾನ ಹಾಗೂ 6.13 ಲಕ್ಷ ಸೋಂಕಿತರೊಂದಿಗೆ 3ನೇ ಸ್ಥಾನದಲ್ಲಿ ರಷ್ಯಾ ರಾಷ್ಟ್ರವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com