Government

ಜನರ ಜೀವನ, ಜೀವ ಉಳಿಸುವುದಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ: ಕೋವಿಡ್-19 ಪರಿಸ್ಥಿತಿ ಕುರಿತು ನಿರ್ಮಲಾ ಸೀತಾರಾಮನ್
ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯಾ ಐಎನ್ ಸಿಯ ಆತಂಕಗಳ ಬಗ್ಗೆ ವಿವಿಧ ಇಂಡಸ್ಟ್ರಿ ಚೇಂಬರ್ ಗಳೊಂದಿಗೆ ಮಾತನಾಡುತ್ತಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸರ್ಕಾರ- ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇಲ್ಲ: ಡಿಕೆ ಸುರೇಶ್
ಸರ್ಕಾರದಲ್ಲಾಗಲಿ, ಅಧಿಕಾರಿಗಳಲ್ಲಾಗಲೀ ಯಾವುದೇ ಸಮನ್ವಯತೆ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ.

ಕೊರೋನಾ ಹೆಚ್ಚಳ: ಹಾಸಿಗೆ, ಔಷಧಿಗಳ ಲಭ್ಯತೆ ಕುರಿತು ಮಾಹಿತಿ ನೀಡುವಂತೆ ರಾಜ್ಯಕ್ಕೆ 'ಹೈ' ಸೂಚನೆ
ರಾಜ್ಯದಲ್ಲಿ ಕೊರೋನಾ 2ನೇ ಅಲೆ ವೇಗವಾಗಿ ಹರಡುತ್ತಿದ್ದು, ಈ ಬೆಳವಣಿಗೆಗೆ ಹೈಕೋರ್ಟ್ ಶುಕ್ರವಾರ ಆತಂಕ ವ್ಯಕ್ತಪಡಿಸಿದೆ.

ಈ ವರ್ಷ ಸಾಮಾನ್ಯ ಮುಂಗಾರು: ಹವಾಮಾನ ಇಲಾಖೆ ಮುನ್ಸೂಚನೆ
ಈ ವರ್ಷ ನೈರುತ್ಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಪರಿಣಾಮ ದೇಶಾದ್ಯಂತ ಶೇ 98 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್ ತಿಳಿಸಿದ್ದಾರೆ.

ಕೊರೋನಾ ಆತಂಕ, ಕಚೇರಿಗಳಿಗೆ ಹಾಜರಾಗುವುದಕ್ಕೆ ನೌಕರರಿಗೆ ವಿನಾಯ್ತಿ, ಕೆಲಸದ ಅವಧಿಯಲ್ಲಿ ಬದಲಾವಣೆ
ದೇಶದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರಗಡೆ ಜನರು ಓಡಾಡುವುದಕ್ಕೆ ಹಲವು ಸರ್ಕಾರಿ ಕಚೇರಿ ನೌಕರರಿಗೆ ವಿನಾಯ್ತಿ ನೀಡುತ್ತಿವೆ.

ಸರ್ಕಾರದ ಬೆದರಿಕೆ ತಂತ್ರಗಳಿಗೆ ಹೆದರುವುದಿಲ್ಲ, ಮುಷ್ಕರ ಮುಂದುವರಿಕೆ: ಕೋಡಿಹಳ್ಳಿ ಚಂದ್ರಶೇಖರ್
ಸಾರಿಗೆ ನೌಕರರ ಮುಷ್ಕರ ಮೂರನೇ ದಿನ ಮುಂದುವರಿಯುತ್ತಿದ್ದು ಇಲಾಖೆ ನೌಕರರ ಭವಿಷ್ಯ, ಜೀವನದ ಅನೇಕ ಪ್ರಶ್ನೆಗಳನ್ನು ಸರ್ಕಾರದ ಮುಂದಿಡಲಾಗಿದೆ. ನೌಕರರ ಜೀವನ ಸುಧಾರಣೆಗೆ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸಬಾರದು ಎಂದು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಹೋಮಿಯೋಪತಿಯಲ್ಲೂ ಕೊರೋನಾ ಔಷಧಿ ತಯಾರಿಸಿ: ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸಲಹೆ
ಕೊರೊನಾ ನಿವಾರಣೆಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ಸರ್ಕಾರ ಮತ್ತು ರೈತರ ಮಧ್ಯೆ 6ನೇ ಸುತ್ತಿನ ಮಾತುಕತೆ: ಕೊನೆಯಾಗಲಿದೆಯೇ ಇಂದು ರೈತರ ಪ್ರತಿಭಟನೆ?
ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಬುಧವಾರ 6ನೇ ಸುತ್ತಿನ ಮಾತುಕತೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಇಂದು ಮಾತುಕತೆಯನ್ನು ಮುಕ್ತ ಮನಸ್ಸಿನಿಂದ ನಡೆಸಲಾಗುತ್ತದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವ ಸೊಮ್ ಪ್ರಕಾಶ್ ಹೇಳಿದ್ದಾರೆ.

ರೈತರು ಅನ್ನದಾತರು, ಸರ್ಕಾರ ಅವರಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ: ರಾಜನಾಥ್ ಸಿಂಗ್
ರೈತರು ನಮ್ಮ ಅನ್ನದಾತರು, ಈ ದೇಶದ ಆರ್ಥಿಕತೆಯ ಬೆನ್ನೆಲುಬು ಹೀಗಿರುವಾಗ ಯಾರೂ ಕೂಡ ಪ್ರತಿಭಟನಾ ನಿರತರ ರೈತರನ್ನು ನಕ್ಸಲೀಯರು ಅಥವಾ ಖಲಿಸ್ತಾನಿಯರು ಎಂದು ಕೆಟ್ಟದಾಗಿ ಉಲ್ಲೇಖಿಸಬಾರದು, ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

