Indian Army

ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಯ ಪ್ರತ್ಯುತ್ತರಕ್ಕೆ ಓರ್ವ ಪಾಕ್ ಯೋಧ ಹತ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಲು ಕೇಂದ್ರ ಆದೇಶ
ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಗುರುವಾರ ಭಾರತೀಯ ಸೇನೆ ತಿಳಿಸಿದೆ.

ಶತ್ರುಗಳ ಎದೆಯಲ್ಲಿ ಢವಢವ, ಭಾರತೀಯ ಸೇನಾ ಬತ್ತಳಿಕೆ ಸೇರಿದ ಧ್ರುವಾಸ್ತ್ರ, ಯಶಸ್ವಿ ಪರೀಕ್ಷೆ ವಿಡಿಯೋ!
ಭಾರತದ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಕಿತಾಪತಿ ಮಾಡುತ್ತಿದ್ದು ಇದರ ಬೆನ್ನಲ್ಲೇ ಭಾರತೀಯ ಸೇನೆಯ ಬತ್ತಳಿಕೆಗೆ ಹೊಸದೊಂದು ಅಸ್ತ್ರ ಸೇರ್ಪಡೆಗೊಂಡಿದೆ.

ಭಾರತೀಯ ಸೇನೆಗೆ 'ಭಾರತ್' ಬಲ: ಚೀನಾ ಗಡಿಯಲ್ಲಿ ನಿಖರ ಕಣ್ಗಾವಲಿಗೆ ಸ್ವದೇಶಿ ಡ್ರೋನ್
ಪೂರ್ವ ಲಡಾಖ್ ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡಲು ಭಾರತೀಯ ಸೇನೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಧೆ(ಡಿಆರ್ಡಿಒ) ನಿರ್ಮಾಣದ ಭಾರತ್ ಡ್ರೋನ್ ಗಳನ್ನು ಬಳಸಿಕೊಳ್ಳುತ್ತಿದೆ.

ಲಡಾಖ್ ಗಡಿಯಲ್ಲಿ ಚೀನಾ ಕ್ಯಾತೆ ನಡುವೆಯೇ ಜುಲೈ 27ಕ್ಕೆ ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ
ಇತ್ತ ಎಲ್ಒಸಿಯಲ್ಲಿ ಪಾಕಿಸ್ತಾನ, ಅತ್ತ ಎಲ್ಎಸಿಯಲ್ಲಿ ಚೀನಾ ತಂಟೆಗಳೆರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಆನೆ ಬಲ ದೊರೆತಿದ್ದು, ಇದೇ ಜುಲೈ 27ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದೆ.

ಕುಲ್ಗಾಂನಲ್ಲಿ ಎನ್'ಕೌಂಟರ್: 3 ಜೆಇಎಂ ಉಗ್ರರ ಸದೆಬಡಿದ ಸೇನೆ, 3 ಯೋಧರಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭಾರತೀಯ ಸೇನಾಪಡೆ ಎನ್'ಕೌಂಟರ್ ನಡೆಸಿದ್ದು, ಮೂವರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಶುಕ್ರವಾರ ತಿಳಿದುಬಂದಿದೆ.

ಲಡಾಖ್ ಸಂಘರ್ಷ: ಚೀನಾ ಹಿಂದೆ ಸರಿಯುವ ಕುರಿತು 'ನಿರಂತರ ಪರಿಶೀಲನೆ'ಯ ಅಗತ್ಯವಿದೆ - ಭಾರತೀಯ ಸೇನೆ
ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ(ಎಲ್ ಎಸಿ) ರೇಖೆಯಿಂದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಪಡೆದುಕೊಳ್ಳುವುದಕ್ಕೆ ಭಾರತ ಮತ್ತು ಚೀನಾ ಸೇನೆ ಒಪ್ಪಿಕೊಂಡಿವೆ.

ಮೋದಿ ಅಧಿಕಾರಾವಧಿಯಲ್ಲಿ ಚೀನಾ ಕಸಿದುಕೊಂಡಿದ್ದ ಮಾತೃ ಭಾರತದ ಪವಿತ್ರ ಭೂಮಿ ಕತೆಯೇನಾಯಿತು?: ರಾಹುಲ್ ಪ್ರಶ್ನೆ
ಲಡಾಖ್ ಗಡಿಯಲ್ಲಿ ಚೀನಾ, ಭಾರತ ಸೇನಾಪಡೆಗಳ ನಡುವೆ ನಡೆದ ಸಂಘರ್ಷ ಕುರಿತಂತೆ ಮತ್ತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಾಗ್ದಾಳಿ ಮುಂದುವರೆಸಿದ್ದಾರೆ.

ಲಡಾಕ್ ನ ಪಾಂಗೊಂಗ್ ತ್ಸೋ ಪ್ರದೇಶದಿಂದ ಮತ್ತಷ್ಟು ಸೇನಾಪಡೆಯನ್ನು ಹಿಂತೆಗೆದುಕೊಂಡ ಚೀನಾ:ಮೂಲಗಳು
ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯ ಗಡಿ ವಾಸ್ತವ ರೇಖೆಯ ಪಾಂಗೊಂಗ್ ತ್ಸೋ ಬಳಿಯಿಂದ ತನ್ನ ಸೇನೆಯನ್ನು ಚೀನಾ ಮತ್ತಷ್ಟು ಹಿಂತೆಗೆದುಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ.

