Indian Railways

ಬೆಂಗಳೂರು: ಡಿಸೆಂಬರ್ 7 ರಿಂದ 17ರವರೆಗೆ ಸಬ್ ಅರ್ಬನ್ ರೈಲು ಓಡಾಟ
ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭವಾಗುತ್ತಿದೆ.

ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ; ಭಾರತೀಯ ರೈಲ್ವೇ ಇಲಾಖೆಗೆ 561 ಕೋಟಿ ಹಣ ಸಂಗ್ರಹ, 4 ವರ್ಷಗಳಲ್ಲಿ ಆದಾಯ ಶೇ.38ರಷ್ಟು ಏರಿಕೆ
2019-20ರಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರಿಗೆ ವಿಧಿಸಿದ ದಂಡದಿಂದಲೇ ಭಾರತೀಯ ರೈಲ್ವೆ ಇಲಾಖೆ ಬರೊಬ್ಬರಿ 561 ಕೋಟಿ ರೂ ಆದಾಯ ಗಳಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯ ಆದಾಯ ಶೇ 38.57ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಚೀನಾಗೆ ಮತ್ತೊಂದು ಹೊಡೆತ ನೀಡಿದ ಭಾರತ; ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನೀ ಕಂಪನಿಗಳು ಹೊರಕ್ಕೆ
ಲಡಾಖ್ ಸಂಘರ್ಷದ ಬಳಿಕ ಒಂದರ ಬಳಿಕ ಒಂದರಂತೆ ಚೀನಾಗೆ ಹೊಡೆತ ನೀಡುತ್ತಿರುವ ಭಾರತ ಇದೀಗ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನಾ ಮೂಲದ ಕಂಪನಿಗಳು ಬಿಡ್ಡಿಂಗ್ ಮಾಡುವುದರಿಂದ ಹೊರಗಿಟ್ಟಿದೆ.

ಮಗುವಿಗೆ ಹಾಲಿನ ಪ್ಯಾಕೆಟ್ ನೀಡಲು ರೈಲಿನ ಹಿಂದೆ ಮಿಂಚಿನಂತೆ ಓಡಿದ ಆರ್ ಪಿಎಫ್ ಸಿಬ್ಬಂದಿಗೆ ನಗದು ಬಹುಮಾನ!
ಚಲಿಸುತ್ತಿದ್ದ ರೈಲಿನೊಂದಿಗೆ ಮಿಂಚಿನಂತೆ ಓಡಿ ಹಸಿದ ಮಗುವಿಗೆ ಅಗತ್ಯವಿದ್ದ ಹಾಲು ತಲುಪಿಸಿದ ಆರ್ ಪಿಎಫ್ ಸಿಬ್ಬಂದಿ ಸಾಹಕ್ಕೆ ರೈಲ್ವೇ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದ್ದು, ಸಿಬ್ಬಂದಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.

ಶ್ರಮಿಕ್ ರೈಲುಗಳಲ್ಲಿ 80 ವಲಸೆ ಕಾರ್ಮಿಕರ ಸಾವು: ರೈಲ್ವೇ ಇಲಾಖೆ
ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಅತಂತ್ರರಾಗಿದ್ದ ವಲಸೆ ಕಾರ್ಮಿಕರನ್ನು ಅವರವರ ತವರಿಗೆ ತಲುಪಿಸಲು ಕೇಂದ್ರ ಸರ್ಕಾರ ಬಿಟ್ಟಿದ್ದ ಶ್ರಮಿಕ್ ರೈಲಿನಲ್ಲಿ ಈ ವರೆಗೂ 80 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ! ಜೂನ್ 1 ರಿಂದ ದಿನಕ್ಕೆ 200 ನಾನ್ ಎಸಿ ರೈಲುಗಳ ಸಂಚಾರ ಪ್ರಾರಂಭ
ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ! ಜೂನ್ 1 ರಿಂದ ದಿನಕ್ಕೆ 200 ನಾನ್ ಎಸಿ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭವಾಗಲಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ:

ಕೊರೋನಾ ಎಫೆಕ್ಟ್: ಪ್ರಯಾಣಿಕರಿಲ್ಲದೆ 167 ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಭಾರತೀಯ ರೈಲ್ವೆ
ಭಾರತೀಯ ರೈಲ್ವೆ ಗುರುವಾರ 167 ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಒಂದೂವರೆ ಶತಮಾನದಷ್ಟು ಇತಿಹಾಸವಿರುವ ರೈಲ್ವೆ ಮೊದಲ ಬಾರಿಗೆ ತನ್ನ ಸೇವಾ ಪ್ರಾರಂಭೋತ್ಸವ ದಿನವನ್ನು ಯಾವೊಬ್ಬ ಪ್ರಯಾಣಿಕ ರೈಲು ಸಂಚಾರವಿಲ್ಲದೆ ಆಚರಿಸಿಕೊಂಡಿದೆ. ದೇಶಾದ್ಯಂತ ಲಾಕ್ಡೌನ್ ಇರುವ ಕಾರಣ ಭಾರತದಲ್ಲಿ ಗೂಡ್ಸ್ ರೈಲುಗಳು ಮಾತ್ರವೇ ಸಂಚಾರ ನಡೆಸಿದೆ.

ಲಾಕ್ ಡೌನ್ ವಿಸ್ತರಣೆ: 39 ಲಕ್ಷ ಟಿಕೆಟ್ ರದ್ದುಪಡಿಸಿದ ರೈಲ್ವೆ ಇಲಾಖೆ
ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದಿನ ತಿಂಗಳ 3 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸಿದ್ದು ಏಪ್ರಿಲ್ 15 ರಿಂದ ಮೇ 3 ರವರೆಗೆ ಕಾಯ್ದಿರಿಸಿದ್ದ 39 ಲಕ್ಷ ಟಿಕೆಟ್ ಗಳನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ.

ಮೇ 03 ರವರೆಗೆ ರೈಲು ಸೇವೆಗಳಿಲ್ಲ: ಮುಂದಿನ ಆದೇಶದವರೆಗೆ ಟಿಕೆಟ್ ಬುಕಿಂಗ್ ಬಂದ್!
ಪ್ರಧಾನಿ ನರೇಂದ್ರ ಮೋದಿ ಮೇ 03 ವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಅವಧಿಯ ವರೆಗೆ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿರುವುದಷ್ಟೇ ಅಲ್ಲದೇ ಟಿಕೆಟ್ ಬುಕಿಂಗ್ ನ್ನೂ ಬಂದ್ ಮಾಡಿದೆ.

