karnataka police

ರಾಜ್ಯದ ವಿವಿಧೆಡೆ ಕೃಷಿ ವಿಚಕ್ಷಣಾ ದಳದ ಮಿಂಚಿನ ಕಾರ್ಯಾಚರಣೆ: ಅಕ್ರಮ ಮೆಕ್ಕೆಜೋಳ ದಾಸ್ತಾನು ವಶ
ಕೃಷಿ ವಿಚಕ್ಷಣಾ ದಳ ಹಾಗೂ ಜಿಲ್ಲಾಕೃಷಿ ನಿರ್ದೇಶಕರ ತಂಡ ರಾಜ್ಯದ ವಿವಿಧೆಡೆ ಇಂದು ಮಿಂಚಿನ ಜಂಟಿ ಕಾರ್ಯಾಚರಣೆ ನಡೆಸಿದ್ದು ಹಲವೆಡೆ ಅಕ್ರಮ ಮೆಕ್ಕೆಜೋಳ ದಾಸ್ತಾನು ವಶಪಡಿಸಿಕೊಂಡಿದೆ.

ಪೊಲೀಸರು, ಪತ್ರಕರ್ತರಿಗೆ ಕೊರೋನಾ ಪರೀಕ್ಷೆ: ಸಚಿವ ಕೆ ಸುಧಾಕರ್
ಕೊರೋನಾ ಭೀತಿಯ ಸಂದರ್ಭದಲ್ಲಿ ಬಾಹ್ಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಕೊರೋನಾ ವೈರಾಣು ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಮಂಗಳೂರು: ಕಳ್ಳ ಭಟ್ಟಿ ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸರ ದಾಳಿ; 400 ಲೀಟರ್ ಹುಳಿ ರಸ ವಶ
ನದಿ ತೀರದಲ್ಲಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ ವಲಯದ ಅಬಕಾರಿ ಅಧಿಕಾರಿಗಳು 400 ಲೀಟರ್ ಹುಳಿ ರಸವನ್ನು ವಶಪಡಿಸಿಕೊಂಡಿದ್ದಾರೆ.

ಖಾಕಿಗೂ ಕೊರೋನಾ ಕಾಟ: ಹುಬ್ಬಳ್ಳಿಯಲ್ಲಿ ಐವರು ಪೊಲೀಸರಿಗೆ ಹೋಂ ಕ್ವಾರಂಟೈನ್!
ದೇಶಾದ್ಯಂತ ಮಾರಕವಾಗಿ ಪ್ರಸರಿಸುತ್ತಿರುವ ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತಿರುವ ಕರ್ನಾಟಕ ಖಾಕಿ ಪಡೆಗೂ ಮಹಾಮಾರಿಯ ಕಾಟ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ಸೋಂಕಿತನ ಸಂಪರ್ಕಕ್ಕೆ ಬಂದ ಕಾರಣ ಐವರು ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಹುಬ್ಬಳ್ಳಿ ಬಳಿಕ ವಿಜಯಪುರದಲ್ಲೂ ಇಬ್ಬರು ಪೊಲೀಸರಿಗೆ ಹೋಂ ಕ್ವಾರಂಟೈನ್!
ಹುಬ್ಬಳ್ಳಿ ಬೆನ್ನಲ್ಲೇ ವಿಜಯಪುರದಲ್ಲೂ ಸೋಂಕಿತರ ಮನೆಗೆ ತೆರಳಿ ಮಾಹಿತಿ ಕಲೆಹಾಕಿದ್ದ ಇಬ್ಬರು ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು: ಮಹಿಳೆಯ ಕೊಲೆಗೆ ಯತ್ನ; ಆರೋಪಿ ಬಂಧನ
ಮಹಿಳೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ಎಲ್ಲ ಧರ್ಮಗಳಿಗೂ ಅನ್ವಯ, ಕಾನೂನಿಗೆ ಮೊದಲು ಗೌರವ ಕೊಡಿ: ಹುಬ್ಬಳ್ಳಿ ಪೊಲೀಸ್ ಆಯುಕ್ತ ಆರ್ ದಿಲೀಪ್ ಮನವಿ
ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಜನ ಜಮಾಣೆಗೊಳ್ಳದಂತೆ ಸೂಚಿಸಲಾಗಿದೆ. ಲಾಕ್ ಡೌನ್ ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ. ದಯಮಾಡಿ ಕಾನೂನಿಗೆ ಗೌರವ ಕೊಡಿ ಎಂದು ಹುಬ್ಬಳ್ಳಿ ಮತ್ತು ಧಾರವಾಡದ ಪೊಲೀಸ್ ಆಯುಕ್ತ ಆರ್ ದಿಲೀಪ್ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಯುವಕರಿಂದ ಪೊಲೀಸರತ್ತ ಕಲ್ಲುತೂರಾಟ
ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಜನ ಜಮಾಣೆಗೊಳ್ಳದಂತೆ ಸೂಚಿಸಿರುವುದನ್ನು ಲೆಕ್ಕಿಸಿದ ಯುವಕರು ಪೊಲೀಸರತ್ತ ಕಲ್ಲು ತೂರಾಟ ಮಾಡಿರುವ ಘಟನೆ ವರದಿಯಾಗಿದೆ.

ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ.

