karnataka police

ತುಮಕೂರು: ಗೋಕಟ್ಟೆಗೆ ಬಿದ್ದು ತಾಯಿ ಮಕ್ಕಳು ಸಾವು
ಇಬ್ಬರು ಮಕ್ಕಳೊಂದಿಗೆ ಗೋಕಟ್ಟೆಗೆ ಬಿದ್ದು ತಾಯಿಯೂ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲೂರು ಹಟ್ಟಿ ಬಳಿ ನಡೆದಿದೆ.

ದೆಹಲಿ ನಿಜಾಮುದ್ದೀನ್ ಸಭೆಗೆ ಮಂಡ್ಯದಿಂದ ಹೋಗಿದ್ದು ಒಬ್ಬರೇ: ಮಂಡ್ಯ ಎಸ್ಪಿ
ಇಡೀ ದೇಶದ 18 ರಾಜ್ಯಗಳಿಗೆ ಕೊರೋನಾ ವೈರಸ್ ಹರಡಿರುವ ಶಂಕೆ ವ್ಯಕ್ತವಾಗಿರುವ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನಾಗಮಂಗಲ ತಾಲ್ಲೂಕಿನ ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ತಿಳಿಸಿದ್ದಾರೆ.

ದೆಹಲಿ ನಿಜಾಮುದ್ದೀನ್ ಮರ್ಕಜ್ ಮಸೀದಿಗೆ ತೆರಳಿದ್ದ ಬೆಳಗಾವಿಯ 10, ಕೋಲಾರದ 18 ಮಂದಿ ಕ್ವಾರಂಟೈನ್ ಗೆ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ 10 ಮಂದಿ ಮತ್ತು ಕೋಲಾರದ 18 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೊರೋನಾ ವೈರಸ್: ಲಾಕ್ ಡೌನ್ ಹಿನ್ನಲೆ, ವಲಸೆ ಕಾರ್ಮಿಕರನ್ನು ಮದುವೆ ಹಾಲ್ ಗಳಿಗೆ ರವಾನಿಸಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಕೊರೋನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತವರು ಜಿಲ್ಲೆಗಳಿಗೆ ತೆರಳಲು ಹವಣಿಸುತ್ತಿರುವ ಎಲ್ಲ ವಲಸೆ ಕಾರ್ಮಿಕರನ್ನು ಮದುವೆ ಮಂಟಪಗಳಿಗೆ ರವಾನೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಚಿಕ್ಕೋಡಿ: ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ: ಪೊಲೀಸರ ವಿರುದ್ಧ ಕ್ರಮಕ್ಕೆ ಆರೋಗ್ಯ ಸಹಾಯಕರ ಆಗ್ರಹ
ಬೆಳಗಾವಿಯಲ್ಲಿ ಆರೋಗ್ಯ ಸಿಬ್ಬಂದಿ ಮೇಲೆ ಪೊಲೀಸ್ ಪೇದೆ ಹಿಗ್ಗಾಮುಗ್ಗಾ ಥಳಿಸಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೇ ತಪ್ಪಿತಸ್ಥ ಪೊಲೀಸ್‍ರ ಮೇಲೆ ಕ್ರಮ ಕೈಗೊಳ್ಳದೇ ಹೋದರೇ ಏಪ್ರಿಲ್ 1 ರಿಂದ ಕೊರೋನಾ ಕಾರ್ಯ ಸ್ಥಗಿತಗೊಳಿಸಿ ಆರೋಗ್ಯ ಸಹಾಯಕರು ಇಡೀ ರಾಜ್ಯಾಧ್ಯಂತ ಮುಷ್ಕರ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಹಾಗೂ

ಬಾಗಲಕೋಟೆ: ಸುಳ್ಳು 'ವೈರಸ್ ಸುದ್ದಿ' ವೈರಲ್ ಮಾಡಿದ ಭೂಪನಿಗೆ ಪೊಲೀಸ್ ಆತಿಥ್ಯ!
ಕೊರೋನಾ ವೈರಸ್ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಭೂಪನನ್ನು ಪೊಲೀಸರು ವಶಕ್ಕೆ ಪಡೆದು ಆತಿಥ್ಯ ನೀಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಲಾಕ್ ಡೌನ್ ವೇಳೆ ಬೈಕ್ ತಡೆದಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದಾತನ ಕಾಲಿಗೆ ಗುಂಡೇಟು
ದೇಶಾದ್ಯಂತ ಲಾಕ್‌ಡೌನ್ ಸಂದರ್ಭದಲ್ಲಿ ಬುಧವಾರ ಪೊಲೀಸ್ ಪೇದೆಗೆ ಹಲ್ಲೆ ನಡೆಸಿ ಪೊಲೀಸ್ ವಶದಲ್ಲಿರುವ ಆರೋಪಿ ತಾಜುದ್ದೀನ್ ಎಂಬಾತನ ಕಾಲಿಗೆ ಪೊಲೀಸರು ಗುರುವಾರ ಬೆಳಗ್ಗೆ ಗುಂಡು ಹೊಡೆದಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಚಾರ ಪಾಸ್ ವಿತರಣೆ: ಯಾರಿಗೆಲ್ಲಾ ಪಾಸ್ ಲಭ್ಯ ಗೊತ್ತಾ?
ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಈ ಅವಧಿಯಲ್ಲಿ ಅತ್ಯಗತ್ಯ ಸೇವೆಗಳಿಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಸಂಚಾರ ಪಾಸ್ ನೀಡಲು ಕರ್ನಾಟಕ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಕ್ವಾರಂಟೈನ್ ನಲ್ಲಿದ್ದರೂ ಬೀದಿ ಸುತ್ತಲು ಬಂದವನಿಗೆ ಗ್ರಹಚಾರ ಬಿಡಿಸಿದ ಬೆಂಗಳೂರು ಪೊಲೀಸರು, ಕೇಸ್ ದಾಖಲು!
ಇಡೀ ದೇಶವೇ ಕೊರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಆಗಿದ್ದು, ಇದರ ನಡುವೆಯೇ ವಿದೇಶದಿಂದ ಬಂದು ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಬೀದಿ ಸುತ್ತುತ್ತಿರುವುದನ್ನು ಗಮನಿಸಿದ ಬೆಂಗಳೂರು ಪೊಲೀಸರು ಅವನ ಗ್ರಹಚಾರ ಬಿಡಿಸಿದ್ದಾರೆ.

