Madhya Pradesh

ಅಪಹರಣಕ್ಕೊಳಗಾಗಿ, ಮಾರಾಟವಾಗಿದ್ದ 16 ವರ್ಷದ ಬಾಲಕಿಯನ್ನು ಮಧ್ಯ ಪ್ರದೇಶದಲ್ಲಿ ರಕ್ಷಿಸಿದ ದೆಹಲಿ ಪೊಲೀಸರು
16 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಮದುವೆಗಾಗಿ ಮತ್ತೊಬ್ಬ ವ್ಯಕ್ತಿಗೆ 50,000 ರೂ.ಗೆ ಮಾರಾಟವಾಗಿದ್ದ ಬಾಲಕಿಯನ್ನು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ

ಮಧ್ಯ ಪ್ರದೇಶ: ಮಣ್ಣು ಕುಸಿದು ಬಾವಿಗೆ ಬಿದ್ದ 40ಕ್ಕೂ ಹೆಚ್ಚು ಮಂದಿ; 19 ಜನರ ರಕ್ಷಣೆ, ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಬಾವಿಗೆ ಬಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಲು ಹೋಗಿ ಧಾರಾಕಾರ ಮಳೆಗೆ ಮಣ್ಣು ಕುಸಿದು ಬಿದ್ದು ಸುಮಾರು 40 ಮಂದಿ ಬಾವಿಗೆ ಬಿದ್ದಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ, 19 ಮಂದಿಯನ್ನು ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.

ಮಧ್ಯಪ್ರದೇಶ: ಇಂದೋರ್ ಪೊಲೀಸ್ ವೆಬ್ಸೈಟ್ ಹ್ಯಾಕ್, ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್
ಇಂದೋರ್ ಪೊಲೀಸ್ ವೆಬ್ಸೈಟ್ ಹ್ಯಾಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದೆ. ಅಲ್ಲದೆ 'ಮುಕ್ತ ಕಾಶ್ಮೀರ' ಎಂಬ ಘೋಷಣೆಗಳೊಂದಿಗೆ ಪಾಕಿಸ್ತಾನವನ್ನು ಪ್ರಶಂಸಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಆರು ಮಂದಿ ಸಾವು
ಮಧ್ಯ ಪ್ರದೇಶದ ಚಾತರ್ ಪುರ ಜಿಲ್ಲೆಯ ಬಿಜಾವರ್ ಪ್ರದೇಶದ ಮಹುವಾಜಾಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಆರು ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ನಲ್ಲಿ ಚಾಟಿಂಗ್: ಇಬ್ಬರು ಬುಡಕಟ್ಟು ಮಹಿಳೆಯರಿಗೆ ಥಳಿತ; 7 ಮಂದಿ ಬಂಧನ
ಪುರುಷರೊಂದಿಗೆ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಿದ್ದ ಕಾರಣಕ್ಕಾಗಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶ: ಬರ್ತ್ ಡೇ ಕೇಕ್ ಎಸೆದು ಚಿರತೆಯಿಂದ ಪಾರಾದ ಸಹೋದರರು!
ಮೋಟಾರು ಬೈಕ್ ನಲ್ಲಿ ಹೋಗುತ್ತಿದ್ದವರನ್ನು ಹಿಂಬಾಲಿಸುತ್ತಿದ್ದ ಚಿರತೆಯೊಂದರ ಮೇಲೆ ಬರ್ತ್ ಡೇ ಕೇಕ್ ಎಸೆದು ಸಹೋದರಿರಬ್ಬರು ಪಾರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

13 ವರ್ಷದ ಬಾಲಕನಿಗೂ ಕೋವಿಡ್ ಲಸಿಕೆ ಪ್ರಮಾಣಪತ್ರ; ಲಸಿಕೆ ನೀಡಿಕೆಯಲ್ಲಿ ದಾಖಲೆ ಬರೆಯುತ್ತಿರುವ ಮಧ್ಯ ಪ್ರದೇಶದಲ್ಲಿ ಗೋಲ್ ಮಾಲ್!
ಲಸಿಕೆ ನೀಡಿಕೆಯಲ್ಲಿ ದಾಖಲೆ ಬರೆಯುತ್ತಿರುವ ಮಧ್ಯ ಪ್ರದೇಶದಲ್ಲಿ ಮಹಾ ಎಡವಟ್ಟುಗಳ ಸರಣಿ ಆರಂಭವಾಗಿದ್ದು, ಲಸಿಕೆ ನೀಡದವರಿಗೂ ಲಸಿಕಾ ಪ್ರಮಾಣ ಪತ್ರಗಳು ದೊರೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಲಸಿಕೆ ಆತಂಕ ದೂರ ಮಾಡಿದ ಪ್ರಧಾನಿ: ಮೋದಿ ಜೊತೆ ಚರ್ಚೆ ಬಳಿಕ ಕೋವಿಡ್ ವ್ಯಾಕ್ಸಿನ್ ಪಡೆದ ಮಧ್ಯ ಪ್ರದೇಶ ಗ್ರಾಮಸ್ಥ!
ಲಸಿಕೆ ಕುರಿತಂತೆ ಆತಂಕದಲ್ಲಿದ್ದ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಪ್ರಧಾನಿ ಮೋದಿ ಲಸಿಕೆ ತೆಗೆದುಕೊಳ್ಳುವಂತೆ ಗ್ರಾಮಸ್ಥ ಮನವೊಲಿಸಿರುವ ಘಟನೆ ನಡೆದಿದೆ.

ಡೆಲ್ಟಾ ಪ್ಲಸ್ ರೂಪಾಂತರಿಗೆ ಮತ್ತೊಂದು ಬಲಿ: ಮದ್ಯ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ, 2 ಸಾವು
ದೇಶದಲ್ಲಿ ವ್ಯಾಪಕ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಮತ್ತೊಂದು ಬಲಿಯಾಗಿದ್ದು, ಮಧ್ಯ ಪ್ರದೇಶದಲ್ಲಿ ರೂಪಾಂತರಿ ಸೋಂಕಿಗೆ ಬಲಿಯಾದವರ ಸಂಖ್ಯೆ 2ಕ್ಕೇರಿಕೆಯಾಗಿದೆ.

