Madhya Pradesh

ದುರಂತದ ನಂತರ ಎಚ್ಚೆತ್ತ ಸರ್ಕಾರ: ಮದ್ಯದಂಗಡಿಗಳ ಬಳಿ ವೈದ್ಯಕೀಯ ತಂಡ ನಿಯೋಜನೆ; ಕುಡುಕರ ತಪಾಸಣೆ, ವ್ಯಸನಿಗಳ ಮನವೊಲಿಸಲು ಸಮಾಲೋಚನೆ
ವೈದ್ಯಕೀಯ ತಂಡಗಳು ಕಾರ್ಯನಿರತ ಮದ್ಯದ ಅಂಗಡಿಗಳ ಹೊರಗೆ ಗ್ರಾಹಕರನ್ನು ಪರೀಕ್ಷಿಸುತ್ತಿವೆ ಮತ್ತು ಕುಡಿಯುವ ಅಭ್ಯಾಸ ಇರುವವರ ಮನೆಗಳಿಗೆ ಭೇಟಿ ನೀಡುತ್ತಿವೆ. ಅಬಕಾರಿ ಇಲಾಖೆಯು ಭಾರೀ ಗ್ರಾಹಕರೆಂದು ಪರಿಗಣಿಸಲಾದ ಜನರ ಪಟ್ಟಿಗಳನ್ನು ಸಹ ಸಿದ್ಧಪಡಿಸಿದೆ,

'ಪ್ರಾಜೆಕ್ಟ್ ಚೀತಾ' ಮತ್ತೊಂದು ಮೈಲಿಗಲ್ಲು: ಕುನೋ ಕಾಡಿನಲ್ಲಿ 4 ಮರಿಗಳಿಗೆ ಜನ್ಮ ನೀಡಿದ Botswana ಚೀತಾ..! Video
“ಪ್ರಾಜೆಕ್ಟ್ ಚೀತಾ' ಯೋಜನೆಯಲ್ಲಿನ ಮಹತ್ವದ ಮೈಲಿಗಲ್ಲು. ಭಾರತದಲ್ಲಿ ಚಿರತೆಗಳ ಸಂತತಿಯನ್ನು ಪುನಃ ಸ್ಥಾಪಿಸುವ ಪ್ರಯತ್ನದಲ್ಲಿ ಹೆಮ್ಮೆಯ ಸಾಧನೆಯಾಗಿದೆ.
ಟಿವಿ, ಫ್ಯಾನ್ ಬಿಡಿ ಗುಡಿಸಲಲ್ಲಿ ಕರೆಂಟೇ ಇಲ್ಲ, ಆದರೂ ₹1.39 ಲಕ್ಷ ಬಿಲ್! ಹಣ ಕಟ್ಟದಿದ್ದರೆ ಜೈಲು ಶಿಕ್ಷೆಯ ಬೆದರಿಕೆ; ನಲುಗಿದ ಆದಿವಾಸಿ ವೃದ್ಧ!
ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೆಹೆರಿಯಾ ಸಾನಿ ಗ್ರಾಮದ 75 ವರ್ಷದ ಬುಡಕಟ್ಟು ವೃದ್ಧ ದುಲಿಚಂದ್ ಅವರ ಗುಡಿಸಲಿಗೆ ವಿದ್ಯುತ್ ಕಂಪನಿಯು ₹1,39,232 ಮೊತ್ತದ ಬಾಕಿ ವಿದ್ಯುತ್ ಬಿಲ್ ಮತ್ತು ವಸೂಲಿ ನೋಟಿಸ್ ಜಾರಿಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಉತ್ತರಪ್ರದೇಶದ ರಾಜ್ಯಸಭಾ ಸ್ಥಾನಕ್ಕೆ ಕೇಂದ್ರ ಸಚಿವ ಹರ್ದೀಪ್ ಪುರಿ ರಾಜೀನಾಮೆ
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶದಿಂದ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಿಹಿ ರಸಗುಲ್ಲಾ ಎಂದು ನಂಬಿ ಬಾಯಿಗಿಟ್ಟ ಯುವಕ; ಕ್ಷಣಾರ್ಧದಲ್ಲೇ ಹಂದಿ ಕೊಲ್ಲುವ ಬಾಂಬ್ ಸ್ಫೋಟ; 35 ವರ್ಷದ ವ್ಯಕ್ತಿ ಸಾವು!
ಕಾಡುಹಂದಿ ಬೇಟೆಗಾಗಿ ತಯಾರಿಸಲಾಗಿದ್ದ ನಾಡಬಾಂಬ್ ಅನ್ನು 'ರಸಗುಲ್ಲಾ' ಎಂದು ನಂಬಿಸಿ ನೀಡಿದ್ದರಿಂದ, ಅದನ್ನು ತಿಂದ 35 ವರ್ಷದ ವ್ಯಕ್ತಿಯೊಬ್ಬರು ಬಾಯಲ್ಲೇ ಸಿಡಿಮದ್ದು ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ದೀಪಾವಳಿ ರಾತ್ರಿಯೇ ಕಣ್ಣೀರಿನ ಕಡಲು: ಮಧ್ಯಪ್ರದೇಶದ ಎರಡು ಪ್ರತ್ಯೇಕ ಅಗ್ನಿ ಅವಘಡದಲ್ಲಿ 12 ಮಂದಿ ದುರ್ಮರಣ
ದೀಪಾವಳಿ ಹಬ್ಬದ ರಾತ್ರಿ ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಗ್ನಿ ಅವಘಡಗಳು ಸಂಭವಿಸಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಶ್ರೀಕೃಷ್ಣ ವಕ್ರವಾಗಿದ್ದಾನೆ, ಶ್ರೀರಾಮನಿಗೆ ಹೋಲಿಸಿದರೆ ನಿಲ್ಲುವ ಭಂಗಿಯೇ ಸರಿಯಿಲ್ಲ' ಎಂದಿದ್ದ ಧೀರೇಂದ್ರ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲು
ತಾನು ಶ್ರೀಕೃಷ್ಣನ ತಾಯಿಯ ಕಡೆಯ ವಂಶಸ್ಥನೆಂದು ಹೇಳಿಕೊಂಡ ಸಿಂಗ್, ಆ ಹೇಳಿಕೆಗಳು ಶ್ರೀಕೃಷ್ಣನ ವಂಶಸ್ಥರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿವೆ ಮತ್ತು ಅವರ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂದು ಆರೋಪಿಸಿದರು.

ಕೊನೆಯ ಕ್ಷಣದಲ್ಲಿ ಎರಡು ನಾಮಪತ್ರ ತಿರಸ್ಕೃತ: ರಾಜ್ಯಸಭೆಗೆ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ!
ಮಧ್ಯಪ್ರದೇಶದಿಂದ ನಡೆದ ರಾಜ್ಯಸಭೆ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ಹರ್ದೀಪ್ ಸಿಂಗ್ ಪುರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಇತರ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಪುರಿ ಏಕಾಂಗಿಯಾಗಿ ಕಣದಲ್ಲಿದ್ದರು.

ಗುಂಡು ಪತ್ತೆ, ಪ್ರಾಚೀನ ಬಂದೂಕು ಬಳಕೆ: ಚೀತಾ ಬೇಟೆಗಾರರು ಸಿಕ್ಕಿ ಬಿದ್ದಿದ್ದೇ ರೋಚಕ; STF ಹೇಳಿದ್ದೇನು?
ಚೀತಾ ಹತ್ಯೆಗೆ ಬಳಸಲಾಗಿದೆ ಎನ್ನಲಾದ ಹಳೆಯ ಕಾಲದ ಎರಡು ನಳಿಕೆಗಳ ಬಂದೂಕನ್ನೂ ವಶಪಡಿಸಿಕೊಂಡಿದೆ. ಬೇಟೆಯ ವೇಳೆ ಚೀತಾ ಕೇವಲ 12ರಿಂದ 15 ಅಡಿ ದೂರದಲ್ಲಿದ್ದಾಗ ಆರೋಪಿಗಳಲ್ಲೊಬ್ಬ ಗುಂಡು ಹಾರಿಸಿದ್ದಾನೆ..

