ದೇಶ1,600 NEET ಅಭ್ಯರ್ಥಿಗಳ ಫಲಿತಾಂಶ ಮರುಪರಿಶೀಲಿಸಲು ಸಮಿತಿ ರಚನೆ; ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ: NTA ಸ್ಪಷ್ಟನೆ
NEET-UG ಫಲಿತಾಂಶಗಳಲ್ಲಿನ ಅಕ್ರಮಗಳ ಕುರಿತಾದ ವಿವಾದವು ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್ಟಿಎ) ಶನಿವಾರ ಆರು ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿ ಗ್ರೇಸ್ ಅಂಕಗಳನ್ನು ಪಡೆದವರ 1,600 ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದೆ.