Newdelhi

ಚೆನ್ನೈ-ಮೈಸೂರು ಸೇರಿದಂತೆ 10 ಟ್ರಿಲಿಯನ್ ವೆಚ್ಚದಲ್ಲಿ ಏಳು ನೂತನ ಬುಲೆಟ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಚಿಂತನೆ
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಬೈ- ಅಹಮದಾಬಾದ್ ನಡುವಣ ಯೋಜನೆ ವಿಳಂಬವಾಗಿದ್ದರೂ ಏಳು ನೂತನ ಬುಲೆಟ್ ರೈಲು ಯೋಜನೆಗಾಗಿ 10 ಟ್ರಿಲಿಯನ್ ವೆಚ್ಚ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಜಿಎಸ್ ಟಿ ಪರಿಹಾರ ಕೊರತೆ ನೀಗಿಸಲು ಕೇಂದ್ರಕ್ಕೆ ಸಾಲ ಪಡೆಯುವ ಆಯ್ಕೆಯನ್ನು ಸಲ್ಲಿಸಿದ 13 ಬಿಜೆಪಿ ಆಡಳಿತದ ರಾಜ್ಯಗಳು
ಜಿಎಸ್ ಟಿ ಪರಿಹಾರ ಕೊರತೆಯನ್ನು ನೀಗಿಸಲು ಸಾಲ ಪಡೆಯುವ ಆಯ್ಕೆಯನ್ನು 13 ಬಿಜೆಪಿ ಆಡಳಿತವಿರುವ ರಾಜ್ಯಗಳು ಕೇಂದ್ರಕ್ಕೆ ಸಲ್ಲಿಸಿವೆ. ಈ 13 ರಾಜ್ಯಗಳಲ್ಲಿ ಬಿಹಾರ, ಒಡಿಶಾ, ಆಂಧ್ರ ಪ್ರದೇಶ, ಗುಜರಾತ್, ಉತ್ತರ್ ಖಂಡ್ ಮತ್ತು ಮೇಘಾಲಯ ರಾಜ್ಯಗಳು ಸೇರಿವೆ.

ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ- ತರೂರ್
ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಹೇಳಿದ್ದಾರೆ.

ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ನಿಷೇಧ ಶಿಕ್ಷೆ ಅವಧಿ ಮುಕ್ತಾಯ
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಭಾರತ ತಂಡದ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ಏಳು ವರ್ಷಗಳ ನಿಷೇಧ ಶಿಕ್ಷೆ ಅವಧಿ ಭಾನುವಾರ ಕೊನೆಗೊಂಡಿದೆ.

ನಾಳೆಯಿಂದ ಸಂಸತ್ ಅಧಿವೇಶನ: ಕಲಾಪದಲ್ಲಿ ಪಾಲ್ಗೊಳ್ಳುವ ಎಲ್ಲಾ ಸದಸ್ಯರಿಗೂ ಕೋವಿಡ್ ನೆಗೆಟಿವ್ ಪರೀಕ್ಷೆ ಕಡ್ಡಾಯ
ನಾಳೆಯಿಂದ ಆರಂಭವಾಗಲಿರುವ ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಸ್ವಯಂ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದಾರೆ.

ಕೋವಿಡ್-19ನಿಂದ ಗುಣಮುಖರಾದ ಕೇಂದ್ರ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ ಗುಣಮುಖರಾಗಿರುವ ಕೇಂದ್ರ ಆಯುಷ್ ಮತ್ತು ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ತಿಂಗಳು ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದರಿಂದ ಯೆಸ್ಸೂ ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದರು.

ತೈಲ ತುಂಬಿದ್ದ ಹಡಗಿನಲ್ಲಿ ಬೆಂಕಿ: ಭಾರತೀಯ ನೌಕಪಡೆಯ ಎಂಟು ಹಡಗು, ಕರಾವಳಿ ರಕ್ಷಣಾ ಪಡೆಯಿಂದ ತಪ್ಪಿದ ಭಾರೀ ಅನಾಹುತ
ಸಂಪೂರ್ಣ ತೈಲ ತುಂಬಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶ್ರೀಲಂಕಾ ನೌಕಪಡೆ ಸಹಯೋಗದೊಂದಿಗೆ ಭಾರತೀಯ ನೌಕಪಡೆಯ ಎಂಟು ಹಡಗುಗಳು ಮತ್ತು ಕರಾವಳಿ ರಕ್ಷಣಾ ಪಡೆ ಹರಸಾಹಸ ನಡೆಸುವ ಮೂಲಕ ತೈಲ ಸೋರಿಕೆಯಾಗದಂತೆ ತಡೆಗಟ್ಟಿದ್ದು, ಆಗಬಹುದಾದ ಭಾರೀ ಅನಾಹುತವೊಂದು ತಪ್ಪಿದೆ.

ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸವಿದೆ- ಕೆವಿನ್ ಪೀಟರ್ಸನ್
ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸ ಹೊಂದಿರುವುದಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ದೋಹಾ: ಅಂತರ-ಆಫ್ಘನ್ ಶಾಂತಿ ಮಾತುಕತೆಯಲ್ಲಿ ಭಾರತ ಭಾಗಿ: ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಿಸುವಂತೆ ಕರೆ
ಕತಾರ್ ರಾಜಧಾನಿ ದೋಹಾದಲ್ಲಿ ಶನಿವಾರ ಆರಂಭವಾಗಿರುವ ಐತಿಹಾಸಿಕ ಅಂತರ-ಆಫ್ಘನ್ ಶಾಂತಿ ಮಾತುಕತೆಗಳಲ್ಲಿ ಭಾರತ ಕೂಡ ಭಾಗಿಯಾಗಿದ್ದು, ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಂತೆ ಕರೆ ನೀಡಿದೆ.

