Police, locals

ಲೈಂಗಿಕ ಕಿರುಕುಳ ಪ್ರಕರಣ: ತನಿಖಾಧಿಕಾರಿ ಮುಂದೆ ಲೇಖಕ ಸಿವಿಕ್ ಚಂದ್ರನ್ ಹಾಜರು
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಸಿವಿಕ್ ಚಂದ್ರನ್ ಮಂಗಳವಾರ ಬೆಳಗ್ಗೆ ವಡಗರ ಡಿವೈಎಸ್ ಎದುರು ಶರಣಾಗಿದ್ದಾರೆ.

ಮುಂಬೈ: ಪಟಾಕಿ ಹೊಡಿಬೇಡಿ ಅಂದಿದ್ದಕ್ಕೆ ಯುವಕನ ಹತ್ಯೆ,ಇಬ್ಬರು ಬಾಲಾಪರಾಧಿಗಳ ಬಂಧನ!
ಬೆಳಕಿನ ಹಬ್ಬ ದೀಪಾವಳಿಯ ಸಡಗರ, ಸಂಭ್ರಮ ದೇಶಾದ್ಯಂತ ಮನೆ ಮಾಡಿದ್ದು, ಪಟಾಕಿಗಳ ಆರ್ಭಟ ಮುಗಿಲು ಮುಟ್ಟಿದೆ. ಈ ನಡುವೆ ವಾಣಿಜ್ಯ ನಗರಿ ಮುಂಬೈಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ಜಾರ್ಖಂಡ್: ಟೆಕ್ಕಿ ಗ್ಯಾಂಗ್ ರೇಪ್, ಇಬ್ಬರು ಅಪ್ರಾಪ್ತರು ಸೇರಿದಂತೆ ಏಳು ಮಂದಿ ಬಂಧನ
26 ವರ್ಷದ ಸಾಪ್ಟ್ ವೇರ್ ಎಂಜಿನಿಯರ್ ಗ್ಯಾಂಗ್ ರೇಪ್ ಮಾಡಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಏಳು ಮಂದಿಯನ್ನು ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್ ಭುಮ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಹೈದರಾಬಾದ್: 4 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ; ಶಾಲೆಯ ಮಾನ್ಯತೆ ರದ್ದುಪಡಿಸಿದ ಸರ್ಕಾರ
4 ವರ್ಷದ ಬಾಲಕಿಯ ಮೇಲೆ ಎರಡು ತಿಂಗಳ ಕಾಲ ಅತ್ಯಾಚಾರವೆಸಗಿದ ಆರೋಪದ ಮೇಲೆ ಖಾಸಗಿ ಶಾಲೆಗೆ ನೀಡಿರುವ ಸರ್ಕಾರಿ ಮಾನ್ಯತೆಯನ್ನು ಕೂಡಲೇ ರದ್ದುಪಡಿಸಿ, ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುವಂತೆ ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಆದೇಶಿಸಿದ್ದಾರೆ.

ಪುಣೆ ಸೆಪ್ಟಿಕ್ ಟ್ಯಾಂಕ್ ದುರಂತ: ಇಬ್ಬರು ಕಾರ್ಮಿಕರ ಮೃತದೇಹ ಪತ್ತೆ, ಮತ್ತೊಬ್ಬರಿಗಾಗಿ ಮುಂದುವರೆದ ಶೋಧ!
ಪುಣೆಯ ವಾಘೋಲಿಯಲ್ಲಿ ಮುಂಜಾನೆ ಭಾರಿ ದುರಂತ ಸಂಭವಿಸಿದೆ. ಇಲ್ಲಿ ಖಾಸಗಿ ಸೊಸೈಟಿಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಬಂದಿದ್ದ ಮೂವರು ನೈರ್ಮಲ್ಯ ಕಾರ್ಮಿಕರು ಮೃತಪಟ್ಟಿದ್ದಾರೆ.

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದ ಪೊಲೀಸ್ ಪೇದೆಗೆ ಜೀವಾವಧಿ ಶಿಕ್ಷೆ!
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್) ಪೊಲೀಸ್ ಪೇದೆಯೊಬ್ಬರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ದೆಹಲಿ: ಪ್ರತ್ಯೇಕ ಘಟನೆಗಳಲ್ಲಿ ತಲೆ ನುಜ್ಜುಗುಜ್ಜಾದ 2 ಮೃತದೇಹಗಳು ಪತ್ತೆ
ದೆಹಲಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ತಲೆ ನುಜ್ಜುಗುಜ್ಜಾಗಿರುವ ಮತ್ತು ಹಲವು ಗಾಯಗಳಾಗಿರುವ ಎರಡು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಹಾಸನ: ಸರಣಿ ಅಪಘಾತ, ನಾಲ್ವರು ಮಕ್ಕಳು ಸೇರಿದಂತೆ 9 ಜನರ ದುರ್ಮರಣ
ಸರ್ಕಾರಿ ಬಸ್, ಟೆಂಪೋ ಟ್ರಾವೆಲರ್, ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಮಕ್ಕಳು ಸೇರಿದಂತೆ 9 ಜನರು ದುರ್ಮರಣ ಹೊಂದಿರುವ ಘಟನೆ ಅರಸೀಕೆರೆ ತಾಲೂಕಿನ ಗಾಂಧಿನಗರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಕೈ ಪಂಪ್ನಲ್ಲಿ ಬರ್ತಿದೆ ಮದ್ಯ, ದಂಗಾದ ಪೊಲೀಸರು!
ಸಾಮಾನ್ಯವಾಗಿ ಕೈ ಪಂಪ್ಗಳನ್ನು ಭೂಮಿ ಆಳದಿಂದ ನೀರನ್ನು ಮೇಲಕ್ಕೆತ್ತಲು ಬಳಸಲಾಗುತ್ತದೆ. ಆದರೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಭಾನ್ಪುರ ಗ್ರಾಮದಲ್ಲಿ ಕೈ ಪಂಪ್ ನಲ್ಲಿ ಮದ್ಯ ಬರುತ್ತಿತ್ತು. ಇದನ್ನು ಕಂಡು ಪೊಲೀಸರೇ ದಂಗಾಗಿದ್ದರು.

