Police, locals

ರಾಯಚೂರು: ಪ್ರಿಯಕರನಿಗಾಗಿ ಚಿನ್ನ ಕದ್ದ ಯುವತಿ; ಮರ್ಯಾದೆಗೆ ಅಂಜಿ ರೈಲಿಗೆ ತಲೆಕೊಟ್ಟ ಪೋಷಕರು ದುರ್ಮರಣ
ಪ್ರಿಯಕರನಿಗಾಗಿ ಯುವತಿ ಚಿನ್ನ ಕದ್ದಿದ್ದು ಈ ವಿಷಯ ತಿಳಿದ ಪೋಷಕರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.

ಸ್ವಾತಂತ್ರ್ಯ ದಿನದಂದು ಪಾಕಿಸ್ತಾನಕ್ಕೆ ಶುಭಾಶಯ ಕೋರುವುದರಲ್ಲಿ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪೊಲೀಸರಿಗೆ ಜ್ಞಾನೋದಯ ಮಾಡಿಸುವ ಮತ್ತು ಶಿಕ್ಷಣ ನೀಡುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಕಲಾವಿದ ಬಿಡಿಸಿರುವ ರೇಖಾ ಚಿತ್ರ ಅನಧಿಕೃತ; ಪೊಲೀಸರು
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್ ನ ಸಿಸಿಟಿವಿ ಫೋಟೋವನ್ನ ಆಧಾರವಾಗಿಟ್ಟುಕೊಂಡು ಕಲಾವಿದರೊಬ್ಬರು ಬಿಡಿಸಿರುವ ರೇಖಾಚಿತ್ರವ ಅನಧಿಕೃತ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಕೆಫೆ ಸ್ಫೋಟ ಪ್ರಕರಣ ಭೇದಿಸುತ್ತಾರೆ: ಗೃಹ ಸಚಿವ ಪರಮೇಶ್ವರ್
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಈಗ ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಪ್ರಕರಣವನ್ನು ಭೇದಿಸುತ್ತಿದ್ದಾರೆ.

ಪಾಕ್ ಪರ ಘೋಷಣೆ: ಬಂಧಿತ ಆರೋಪಿಗಳನ್ನು ಕರೆತಂದು ಪೊಲೀಸರಿಂದ ವಿಧಾನಸೌಧದಲ್ಲಿ ಇಂದು ಸ್ಥಳ ಮಹಜರು
ಪೊಲೀಸರು ಆರೋಪಿಗಳಾದ ಇಲ್ತಾಜ್, ಮುನಾವರ್, ಮೊಹಮ್ಮದ್ ನಾಶಿಪುಡಿ ಅವರನ್ನು ಕೋರಮಂಗಲದಲ್ಲಿರುವ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ಜಡ್ಜ್ ಮುಂದೆ ಹಾಜರುಪಡಿಸಿದ್ದರು.

ಮಂಗಳೂರು: ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆ ಧ್ವಂಸ; ಮೂವರ ಬಂಧನ
ಉಳ್ಳಾಲದ ಕೋಟೆಕಾರು ಶ್ರೀ ಕ್ಷೇತ್ರ ಕೊಂಡಣ್ಣ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಭಂಡಾರ ಮನೆ ಎಂದರೆ ದೇವಾರಾಧನೆಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವ ಮನೆಯಾಗಿದೆ.

ಬೆಂಗಳೂರು: ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ಮಗಳ ರಕ್ಷಣೆಗೆ ಮುಂದಾದ ದಂಪತಿ ಸೇರಿ ಮೂವರ ದುರ್ಮರಣ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ: ಪೊಲೀಸ್ ಮೂಲಗಳು
ನಾಲ್ವರನ್ನು ಧಾರವಾಡ, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ವಶಕ್ಕೆ ಪಡೆದು ದೀರ್ಘ ವಿಚಾರಣೆ

ರಾಮೇಶ್ವರಂ ಕೆಫೆ: ಸ್ಫೋಟಕ್ಕೆ ಮುನ್ನ ಬೀಪ್.. ಬೀಪ್.. ಶಬ್ದ ಕೇಳಿಸಿತು; ಪ್ರತ್ಯಕ್ಷದರ್ಶಿ ಹೇಳಿಕೆ
ಟೈಮರ್ ಸಾಧನದೊಂದಿಗೆ IEDಯನ್ನು ಬಳಸಲಾಗಿತ್ತು ಎಂದ ಪೊಲೀಸ್ ಮೂಲಗಳು

