Rahul Gandhi, Priyanka

ಸಂಸದ ಸ್ಥಾನದಿಂದ ಅನರ್ಹ: ರಾಹುಲ್ ಗಾಂಧಿ ಕೋಲಾರ ಭೇಟಿ ಮತ್ತೆ ಮುಂದೂಡಿಕೆ
ಕೋಲಾರದಲ್ಲಿ ಏಪ್ರಿಲ್ 10 ರಂದು ನಡೆಯಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದ್ದು, ಇದೀಗ ಏಪ್ರಿಲ್ 16 ರಂದು ಕೋಲಾರಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್...

ಕರ್ನಾಟಕ ವಿಧಾನಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ಸಿಇಸಿ ಸಭೆ, ರಾಹುಲ್ ಗಾಂಧಿ ಹಾಜರು
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಉಳಿದಿರುವ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಸಿದರು.

ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹತೆ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ವಯನಾಡ್ ಭೇಟಿ
ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಯನಾಡ್‌ಗೆ ಭೇಟಿ ನೀಡಲಿದ್ದಾರೆ. ವಯನಾಡ್ ಮಾಜಿ ಸಂಸದರಿಗೆ ಅದ್ಧೂರಿ ಸ್ವಾಗತ ನೀಡಲು ಯುಡಿಎಫ್ ಜಿಲ್ಲಾ ಸಮಿತಿ ನಿರ್ಧರಿಸಿದೆ.

ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸ್ತೀನಿ: ಕಾಂಗ್ರೆಸ್ ನಾಯಕ
ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ನ್ಯಾಯಾಧೀಶರ ನಾಲಿಗೆ ಕತ್ತರಿಸುವುದಾಗಿ ತಮಿಳುನಾಡು ಕಾಂಗ್ರೆಸ್ ಪಕ್ಷದ ನಾಯಕ ಬೆದರಿಕೆ ಹಾಕಿದ್ದು ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆ 45 ಗಂಟೆ, ರಾಜ್ಯಸಭೆ 31 ಗಂಟೆಗಳ ಕಾಲ ಕಾರ್ಯನಿರ್ವಹಣೆ: ಮಾಹಿತಿ
ದೈನಂದಿನ ಪ್ರತಿಭಟನೆಗಳು ಮತ್ತು ಆಗಾಗ್ಗೆ ಕಲಾಪ ಮುಂದೂಡಿಕೆಗಳು ಬಜೆಟ್ ಅಧಿವೇಶನದ ದ್ವಿತೀಯಾರ್ಧವನ್ನು ಅಡ್ಡಿಪಡಿಸುವ ಮೂಲಕ ಯೋಜಿತ ಅವಧಿಗಿಂತ ಕಡಿಮೆ ಅವಧಿಗೆ ಸಂಸತ್ತು ಕಾರ್ಯನಿರ್ವಹಿಸಿದೆ ಎಂದು ಚಿಂತಕರ ಚಾವಡಿ ಸಂಗ್ರಹಿಸಿದ ಮಾಹಿತಿ ತೋರಿಸಿದೆ.

ಅದಾನಿ ವಿಚಾರದಲ್ಲಿ ಪ್ರಧಾನಿ ವಿರುದ್ಧ ಆರೋಪ: ರಾಹುಲ್ ಗಾಂಧಿ 'ಪುನರಾವರ್ತಿತ ಅಪರಾಧಿ' ಎಂದ ನಿರ್ಮಲಾ ಸೀತಾರಾಮನ್
ಅದಾನಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತೀವ್ರವಾಗಿ ಟೀಕಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂತಹ ಆರೋಪಗಳನ್ನು ಹೊರಿಸುವಲ್ಲಿ ರಾಹುಲ್ 'ಪುನರಾವರ್ತಿತ ಅಪರಾಧಿ' ಎಂದು ಗುರುವಾರ ಬಣ್ಣಿಸಿದ್ದಾರೆ.

ರಾಹುಲ್ ಗಾಂಧಿ 'ಆಧುನಿಕ ಭಾರತದ ಮಹಾತ್ಮಾ ಗಾಂಧಿ ಎಂದ ಕಾಂಗ್ರೆಸ್ ಶಾಸಕ!
ಕಾಂಗ್ರೆಸ್ ನಾಯಕ ಆಧುನಿಕ ಭಾರತದ ಮಹಾತ್ಮ ಗಾಂಧಿ ಎಂದು ಛತ್ತೀಸ್ ಗಢದ ಕಾಂಗ್ರೆಸ್ ಶಾಸಕ ಅಮಿತೇಶ್ ಶುಕ್ಲಾ ಕರೆದಿದ್ದಾರೆ. ಅಲ್ಲದೇ, ಮಹಾತ್ಮ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಹಲವಾರು ಸಾಮ್ಯತೆಗಳಿರುವುದಾಗಿ ಅವರು ಹೇಳಿದ್ದಾರೆ.

ಹಿರಿಯ ನಾಯಕರು ಪಕ್ಷ ತೊರೆಯಲು ರಾಹುಲ್ ಮುಖ್ಯ ಕಾರಣ; ಬೆನ್ನುಮೂಳೆಯಿಲ್ಲದವರು ಆ ಪಕ್ಷದಲ್ಲಿರಲು ಸಾಧ್ಯ: ಆಜಾದ್
ಇಂದು ನಾನು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದಿರುವುದಕ್ಕೆ ರಾಹುಲ್ ಗಾಂಧಿಯೇ ಮುಖ್ಯ ಕಾರಣ. ಹಳೆಯ ಪಕ್ಷದಲ್ಲಿ ಉಳಿಯಬೇಕೆಂದರೆ ಬೆನ್ನುಮೂಳೆ ಇರಬಾರದು ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಮಿಂಚಿನ ವೇಗದಲ್ಲಿ ಅನರ್ಹತೆ, ಬಿಜೆಪಿ ಸಂಸದರಿಗೆ ಬೇರೆ ನೀತಿ: ಕೇಂದ್ರದ ದ್ವಿಮುಖ ನೀತಿ ಬಗ್ಗೆ ಖರ್ಗೆ ಕಿಡಿ
ರಾಹುಲ್ ಗಾಂಧಿ ಅವರನ್ನು ಮಿಂಚಿನ ವೇಗದಲ್ಲಿ ಅನರ್ಹಗೊಳಿಸಿದರೆ, ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗುಜರಾತ್ ಸಂಸದರಿಗೆ ಮಾತ್ರ ಅದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಕೇಂದ್ರದ ದ್ವಿಮುಖ ನೀತಿ ಬಗ್ಗೆ ಕಿಡಿಕಾರಿದರು.

