Rahul Gandhi, Priyanka

ರಾಹುಲ್ ಗಾಂಧಿ ಮಾತಿಂದ ರಾಷ್ಟ್ರದ ಗೌರವ ಮಣ್ಣುಪಾಲು: 'ಅತ್ಯಾಚಾರದ ರಾಜಧಾನಿ' ಹೇಳಿಕೆಗೆ ಡಿಸಿಎಂ ಸವದಿ ಆಕ್ರೋಶ
ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹೇಳಿರುವುದು ತೀರಾ ಖಂಡನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಭಾರತ ವಿಶ್ವದ ರೇಪ್ ರಾಜಧಾನಿ: ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ
ಹೈದರಾಬಾದ್ ನಲ್ಲಿ ಅತ್ಯಾಚಾರಿಗಳಿಗೆ ಗುಂಡಿಕ್ಕಿ ಪೊಲೀಸರು ಎನ್ ಕೌಂಟರ್ ಮಾಡಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತ ವಿಶ್ವದ ರೇಪ್ ರಾಜಧಾನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಹುಲ್ ಭಾಷಣವನ್ನು ಮಲಯಾಳಂ ಗೆ ತರ್ಜುಮೆ: ವಿದ್ಯಾರ್ಥಿನಿಗೆ ಪ್ರಶಂಸೆಗಳ ಸುರಿಮಳೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಇಂಗ್ಲೀಷ್ ನಿಂದ ಮಲಯಾಳಂಗೆ ಅನುವಾದ ಮಾಡಿದ ವಿದ್ಯಾರ್ಥಿನಿಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.

ನೀವು ವಿತ್ತ ಸಚಿವೆ, ಈರುಳ್ಳಿ ತಿನ್ನುತ್ತೀರಾ ಎಂದಾರೂ ನಿಮ್ಮನ್ನು ಕೇಳಲ್ಲ: ಕೇಂದ್ರ ಸಚಿವೆಯ ವಿರುದ್ಧ ರಾಹುಲ್ ವಾಗ್ದಾಳಿ
ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮದೇ ಆದ ಕಲ್ಪನೆಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ಹೊರ ಪ್ರಪಂಚದ ಯಾವುದೇ ಅರಿವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಗುರುವಾರ ಕೇಂದ್ರ ಆರ್ಥಿಕ ನೀತಿಗಳ ಕುರಿತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಪ್ರಧಾನಿ, ಗೃಹ ಸಚಿವರು, ವಿತ್ತ ಸಚಿವೆಯ ಕಾರ್ಯವೈಖ

ಹೈದರಾಬಾದ್, ಉ.ಪ್ರದೇಶ ಅತ್ಯಾಚಾರ, ಕೊಲೆ ಸಾಕಷ್ಟು ಬೇಸರ ತಂದಿದೆ: ಪ್ರಿಯಾಂಕಾ
ಹೈದರಾಬಾದ್ ಹಾಗೂ ಉತ್ತರಪ್ರದೇಶ ಅತ್ಯಾಚಾರ, ಕೊಲೆ ಪ್ರಕರಣಗಳು ಸಾಕಷ್ಟು ಬೇಸರವನ್ನು ತಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಹೇಳಿದ್ದಾರೆ.

ಏನು ಬೇಕಾದರೂ ಮಾಡ್ಕೊಳಿ, ಪ್ರಗ್ಯಾ ಠಾಕೂರ್ ಭಯೋತ್ಪಾದಕಿ ಹೇಳಿಕೆಗೆ ನಾನು ಬದ್ಧ: ರಾಹುಲ್ ಗಾಂಧಿ!
ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಭಯೋತ್ಪಾದಕಿ ಎಂಬ ಹೇಳಿಕೆಗೆ ನಾನು ಬದ್ಧ, ಈ ಸಂಬಂಧ ಯಾವುದೇ ಕ್ರಮ ಎದುರಿಸುವುದಕ್ಕೂ ಸಿದ್ಧ ಎಂದು ಐಸಿಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ತಿಹಾರ್ ಜೈಲಿನಲ್ಲಿ ಚಿದಂಬರಂ ಭೇಟಿಯಾದ ರಾಹುಲ್, ಪ್ರಿಯಾಂಕಾ
ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂದಿಸಿದಂತೆ ಬಂಧನಕ್ಕೊಳಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಭೇಟಿಯಾಗಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ: ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
ಮಹಾರಾಷ್ಟ್ರದಲ್ಲಿ ಬಿಜೆಪಿ ತರಾತುರಿಯಲ್ಲಿ ಸರ್ಕಾರ ರಚನೆ ಮಾಡಿದ ವಿಚಾರ ಲೋಕಸಭೆಯಲ್ಲಿ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು.

ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ಶನಿವಾರ ವಜಾಗೊಳಿಸಿದೆ.

