Rahul Gandhi, Priyanka

ವಿದೇಶಕ್ಕೆ ರಾಹುಲ್ ಪ್ರಯಾಣ: ಕೈ ನಾಯಕರ ಕಂಗಾಲು!
ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿಯಿರುವಾಗಲೇ ಕಾಂಗ್ರೆಸ್ನ ಮಾಜಿ ಅಧ್ಯಕ್ಷ, ಯುವ ನಾಯಕ ರಾಹುಲ್ ಗಾಂಧಿ ಬ್ಯಾಂಕಾಕ್ಗೆ ಪ್ರವಾಸ ಹೊರಟಿರುವುದು ಕೈ ನಾಯಕರನ್ನು ಕಂಗಾಲಾಗುವಂತೆ ಮಾಡಿದೆ.!

150ನೇ ಗಾಂಧಿ ಜಯಂತಿ; ಕಾಂಗ್ರೆಸ್ ನಿಂದ ಪಾದಯಾತ್ರೆ
ದೇಶಾದ್ಯಂತ ಮಹಾತ್ಮಾ ಗಾಂಧಿಯವರ 150ನೇ ಜಯಂತಿಯನ್ನು ಪಾದಯಾತ್ರೆ ಆಯೋಜಿಸುವ ಮೂಲಕ ಅವಿಸ್ಮರಣೀಯವಾಗಿ ಆಚರಿಸಲು ಕಾಂಗ್ರೆಸ್ ಯೋಜಿಸಿದ್ದು ದೆಹಲಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ಟ್ರಂಪ್ ಸರ್ಕಾರ್ ಹೇಳಿಕೆ: ಪ್ರಧಾನಿ ಮೋದಿ ಅಸಮರ್ಥತೆ ಮರೆಮಾಚಿದ್ದಕ್ಕೆ ಧನ್ಯವಾದಗಳು- ಜೈಶಂಕರ್'ಗೆ ರಾಹುಲ್
ಅಮೆರಿಕಾದ ಹ್ಯೂಸ್ಟನ್'ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ಭಾಷಣದ ವೇಳೆ 'ಅಬ್ ಬಾರ್ ಟ್ರಂಪ್ ಸರ್ಕಾರ' ಹೇಳಿಕೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಬಂಡೀಪುರ ರಾತ್ರಿ ಸಂಚಾರ ನಿಷೇಧರಿಂದ ಕೇರಳ, ಕರ್ನಾಟಕ ಜನರಿಗೆ ಸಂಕಷ್ಟ: ರಾಹುಲ್ ಗಾಂಧಿ
ಬಂಡೀಪುರ ಮೀಸಲು ಅರಣ್ಯ ವ್ಯಾಪ್ತಿಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಬತ್ತು ಗಂಟೆಗಳ ಸಂಚಾರ ನಿಷೇಧವು ಕೇರಳ ಮತ್ತು ಕರ್ನಾಟಕದ ಲಕ್ಷಾಂತರ ಜನರಿಗೆ ತೊಂದರೆ ಉಂಟುಮಾಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಕೇಂದ್ರದಿಂದ ರಾಜಕೀಯ ಅವಕಾಶ: ರಾಹುಲ್ ಗಾಂಧಿ ಟೀಕೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಕೇಂದ್ರ ಸರ್ಕಾರ ರಾಜಕೀಯ ಜಾಗವನ್ನು ಸೃಷ್ಟಿಸಿಕೊಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಭಾರತದ ಹಲವು ಭಾಷೆಗಳು ಅದರ ದೌರ್ಬಲ್ಯವಲ್ಲ: ರಾಹುಲ್ ಗಾಂಧಿ
ಹಿಂದಿ ದೇಶಾದ್ಯಂತ ಏಕಭಾಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ, ಭಾರತದ ಹಲವು ಭಾಷೆಗಳು ಅದರ ದೌರ್ಬಲ್ಯವಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಭಾರತದ ಅನೇಕ ಭಾಷೆಗಳು ಅವಳ ದೌರ್ಬಲ್ಯ ಅಲ್ಲ: ರಾಹುಲ್ ಗಾಂಧಿ ಟ್ವೀಟ್ ವೈರಲ್
ಒಂದು ದೇಶ, ಒಂದು ಭಾಷೆ. ಕೇಂದ್ರ ಸಚಿವ ಅಮಿತ್ ಶಾ ದೇಶದಲ್ಲಿ ಹಿಂದಿ ಭಾಷೆಯ ಹೇರಿಕೆ ಕುರಿತಂತೆ ಬಾರಿ ಚರ್ಚೆಯಾಗುತ್ತಿದ್ದು ಇದರ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಒಂದು ಈಗ ವೈರಲ್ ಆಗಿದೆ.

ನಮಗೆ 'ಮೂರ್ಖ' ಸಿದ್ಧಾಂತಗಳ ಅಗತ್ಯವಿಲ್ಲ: ನಿರ್ಮಲಾ ಸೀತಾರಾಮನ್ ಗೆ ರಾಹುಲ್ ತಿರುಗೇಟು
ದೇಶದಲ್ಲಿ ಆರ್ಥಿಕತೆ ಕುಸಿತ ಕಂಡುಬಂದಿರುವ ಈ ಸಂದರ್ಭದಲ್ಲಿ ಪ್ರಚಾರ, ಇನ್ನೊಬ್ಬರನ್ನು ಪ್ರಚೋದಿಸುವಂತಹ ಸುದ್ದಿಗಳು, ಮೂರ್ಖ ಸಿದ್ಧಾಂತಗಳು ನಮಗೆ ಬೇಕಾಗಿಲ್ಲ, ಆರ್ಥಿಕತೆಯನ್ನು ಸರಿಪಡಿಸುವ ವಾಸ್ತವ ಯೋಜನೆಯ ಅಗತ್ಯವಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ರಾಹುಲ್, ಒಮರ್ ಹೇಳಿಕೆ ಪ್ರಸ್ತಾಪಿಸಿದ ಪಾಕ್
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಗೆ ಸಲ್ಲಿಸಿದ ದೂರಿನ ಪ್ರತಿ ಸೋರಿಕೆಯಾಗಿದ್ದು, ದೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನೀಡಿದ ಹೇಳಿಕೆಗಳು ಪ್ರಸ್ತಾಪಿಸಲಾಗಿದೆ.

