ಭಾರತದ ಅನೇಕ ಭಾಷೆಗಳು ಅವಳ ದೌರ್ಬಲ್ಯ ಅಲ್ಲ: ರಾಹುಲ್ ಗಾಂಧಿ ಟ್ವೀಟ್ ವೈರಲ್

ಒಂದು ದೇಶ, ಒಂದು ಭಾಷೆ. ಕೇಂದ್ರ ಸಚಿವ ಅಮಿತ್ ಶಾ ದೇಶದಲ್ಲಿ ಹಿಂದಿ ಭಾಷೆಯ ಹೇರಿಕೆ ಕುರಿತಂತೆ ಬಾರಿ ಚರ್ಚೆಯಾಗುತ್ತಿದ್ದು ಇದರ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಒಂದು ಈಗ ವೈರಲ್ ಆಗಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಂಗಳೂರು: ಒಂದು ದೇಶ, ಒಂದು ಭಾಷೆ. ಕೇಂದ್ರ ಸಚಿವ ಅಮಿತ್ ಶಾ ದೇಶದಲ್ಲಿ ಹಿಂದಿ ಭಾಷೆಯ ಹೇರಿಕೆ ಕುರಿತಂತೆ ಬಾರಿ ಚರ್ಚೆಯಾಗುತ್ತಿದ್ದು ಇದರ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಒಂದು ಈಗ ವೈರಲ್ ಆಗಿದೆ.

ರಾಹುಲ್ ಗಾಂಧಿ ತಮ್ಮ ಟ್ವೀಟ್ ನಲ್ಲಿ ಕನ್ನಡ ಸೇರಿದಂತೆ 23 ಭಾರತೀಯ ಭಾಷೆಗಳನ್ನು ಉಲ್ಲೇಖಿಸಿ ಕೊನೆಗೆ ಭಾರತದ ಅನೇಕ ಭಾಷೆಗಳ ಆಕೆಯ ದೌರ್ಬಲ್ಯವಲ್ಲ ಎಂಬುದಾಗಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದೆ.

ಹಿಂದಿ ಹೇರಿಕೆ ಮಾಡಲು ಬಂದರೆ ಸಹಿಸುವುದಿಲ್ಲ ಎಂಬುದಾಗಿ ದಕ್ಷಿಣ ಭಾರತ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ರಾಜಕಾರಣಿಗಳ ಗುಡುಗಿದ್ದರು. ಇದೇ ವಿವಾದದ ಮುಂದುವರಿದ ಭಾಗವಾಗಿ ಈಗ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com