Russia, China

ಆತ್ಮ ಗೌರವಕ್ಕೆ ಧಕ್ಕೆಯಾದರೆ ಭಾರತ ಎಂದಿಗೂ ಸಹಿಸುವುದಿಲ್ಲ, ನಮ್ಮ ಭೂಮಿ ಬೇರೆಯವರ ಪಾಲಾಗಲು ಬಿಡುವುದಿಲ್ಲ: ರಾಜನಾಥ್ ಸಿಂಗ್
ಭಾರತ ಮತ್ತು ಚೀನಾ ಮಧ್ಯೆ ಮಾತುಕತೆ ಮುಂದುವರಿದಿದ್ದು ಯಶಸ್ಸು ಇದುವರೆಗೆ ಕಂಡಿಲ್ಲ. ಮುಂದಿನ ಹಂತದ ಮಿಲಿಟರಿ ಮಟ್ಟದ ಮಾತುಕತೆ ಯಾವ ಸಮಯದಲ್ಲಾದರೂ ನಡೆಯಬಹುದು. ಇದುವರೆಗೆ ಯಾವುದೇ ಮಾತುಕತೆ, ಸಂಧಾನ ಫಲಪ್ರದವಾಗಿಲ್ಲ.

ಚೀನಾದಿಂದ 50 ಸಶಸ್ತ್ರ ಡ್ರೋನ್ ಗಳನ್ನು ಖರೀದಿಸಿದ ಪಾಕಿಸ್ತಾನ: ವರದಿ
ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ 50 ಸಶಸ್ತ್ರ ವಿಂಗ್ ಲೂಂಗ್ ಡ್ರೋನ್ ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಭಾರತದ ಮತ್ತೊಂದು ಶತ್ರುದೇಶದೊಂದಿಗಿನ ತನ್ನ ಮಿಲಿಟರಿ ಚಟುವಟಿಕೆಯನ್ನು ವಿಸ್ತರಿಸಿದೆ.

ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತ-ರಷ್ಯಾ ಶೃಂಗಸಭೆ ರದ್ದು, ಸುಳ್ಳಿನ ಮೂಲಕ ದಿಕ್ಕು ತಪ್ಪಿಸಬೇಡಿ: ಅನುರಾಗ್ ಶ್ರೀವಾಸ್ತವ
ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ-ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ.

ಲಡಾಖ್ ನಲ್ಲಿ ವಿವಾದದ ನಡುವೆ ನೂತನ ಮಿಲಿಟರಿ ಕಮಾಂಡರ್ ನೇಮಿಸಿದ ಚೀನಾ-ವರದಿ
ಪೂರ್ವ ಲಡಾಖ್ ನಲ್ಲಿ ವಿವಾದದ ನಡುವೆಯೂ ಚೀನಾ-ಭಾರತ ಗಡಿಯನ್ನು ನೋಡಿಕೊಳ್ಳುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ನ ಕಮಾಂಡರ್ ಆಗಿ ನೂತನ ಜನರಲ್ ನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನೇಮಕ ಮಾಡಿದ್ದಾರೆ.

ನಾಲ್ಕು ಯುದ್ಧಗಳಲ್ಲಿ ಸೋತರೂ ಪಾಕಿಸ್ತಾನ ಭಾರತದ ವಿರುದ್ಧ ತೆರೆಮರೆಯ ಸಮರ ಮಾಡುತ್ತಲೇ ಬಂದಿದೆ: ರಾಜನಾಥ್ ಸಿಂಗ್
ಭಾರತದ ವಿರುದ್ಧ ರಹಸ್ಯವಾಗಿ ತೆರೆಮರೆಯಲ್ಲಿ ಯುದ್ಧ ಸಾರಲು ಭಯೋತ್ಪಾದನೆ ಮಾರ್ಗವನ್ನು ನೆರೆಯ ದೇಶಗಳು ಅನುಸರಿಸುತ್ತಿವೆ ಎಂದು ಮತ್ತೊಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಮತ್ತು ಚೀನಾ ದೇಶಗಳ ಮೇಲೆ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

ಸಾರ್ವಭೌಮ ಸಂಪತ್ತು ನಿಧಿ ಹರಿವು: ಚೀನಾಗಿಂತ ಮೂರು ಪಟ್ಟು ಹೆಚ್ಚು ಭಾರತದಲ್ಲಿ ಹೂಡಿಕೆ!
ಖಾಸಗಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾರ್ವಭೌಮ ಸಂಪತ್ತು ನಿಧಿ ಹರಿವು ಚೀನಾಗಿಂತಲೂ ಭಾರತದಲ್ಲಿ ಹೆಚ್ಚಾಗಿದ್ದು, ಚೀನಾಗಿಂತ ಮೂರು ಪಟ್ಟು ಹೆಚ್ಚು ಭಾರತದಲ್ಲಿ ಹೂಡಿಕೆ ಮಾಡಲಾಗಿದೆ.

ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಭಾರತದ ಸಿದ್ಧಾರ್ಥ್ ಚಟರ್ಜಿ ನೇಮಕ
ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಭಾರತದ ಸಿದ್ಧಾರ್ಥ್ ಚಟರ್ಜಿ ಅವರನ್ನು ನೇಮಕ ಮಾಡಲಾಗಿದೆ.

ಲಡಾಕ್ ನಲ್ಲಿ ಅಪ್ರಚೋದಿತ ದಾಳಿ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸಿಕೊಡುತ್ತಿದೆ: ರಾಜನಾಥ್ ಸಿಂಗ್
ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಸೇನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ನಮ್ಮ ಸೇನೆಗೆ ಈಗ ಪರೀಕ್ಷೆಯ ಕಾಲ, ಗಡಿಯಲ್ಲಿ ನಿಂತು ಹೋರಾಟ ಮಾಡುವಾಗ ನಮ್ಮ ಸೈನ್ಯ ಅತ್ಯಂತ ಹೆಚ್ಚಿನ ಅನುಕರಣೀಯ ಧೈರ್ಯ, ಸಾಹಸವನ್ನು ತೋರಿಸಿದ್ದಾರೆ.

ಭಾರತ- ಚೀನಾ ಗಡಿ ವಿವಾದ: ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇವೆ- ಜೈಶಂಕರ್
ಪೂರ್ವ ಲಡಾಖ್ ನಲ್ಲಿ ಚೀನಾದೊಂದಿಗಿನ ಏಳು ತಿಂಗಳ ಗಡಿ ವಿವಾದದಲ್ಲಿ ಭಾರತವನ್ನು ಪರೀಕ್ಷಿಸಲಾಗುತ್ತಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಭಾರತ ಮೆಟ್ಟಿ ನಿಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

