ಸಾರ್ವಭೌಮ ಸಂಪತ್ತು ನಿಧಿ ಹರಿವು: ಚೀನಾಗಿಂತ ಮೂರು ಪಟ್ಟು ಹೆಚ್ಚು ಭಾರತದಲ್ಲಿ ಹೂಡಿಕೆ!

ನವದೆಹಲಿ: ಖಾಸಗಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾರ್ವಭೌಮ ಸಂಪತ್ತು ನಿಧಿ ಹರಿವು ಚೀನಾಗಿಂತಲೂ ಭಾರತದಲ್ಲಿ ಹೆಚ್ಚಾಗಿದ್ದು, ಚೀನಾಗಿಂತ ಮೂರು ಪಟ್ಟು ಹೆಚ್ಚು ಭಾರತದಲ್ಲಿ ಹೂಡಿಕೆ ಮಾಡಲಾಗಿದೆ.
ಇದು ಭಾರತದೆಡೆಗೆ ಹೂಡಿಕೆದಾರರ ಆಕರ್ಷಣೆ ಹೆಚ್ಚಾಗಿದೆ ಎಂಬುದು ಈ ಮೂಲಕ ಸಾಬೀತಾಗಿದೆ.
ಅಂದಾಜು 400 ವಿದೇಶಿ ಸಾರ್ವಭೌಮ ಸಂಪತ್ತು ನಿಧಿಗಳಿಗೆ ಸಂಬಂಧಿಸಿದ ಡಾಟವನ್ನು ಹೊಂದಿರುವ ನ್ಯೂಯಾರ್ಕ್-ಮೂಲದ ಗ್ಲೋಬಲ್ ಎಸ್ ಡಬ್ಲ್ಯೂಎಫ್ ನ ಅಂಕಿಂಶಗಳ ಪ್ರಕಾರ 2020 ರಲ್ಲಿ ಭಾರತದಲ್ಲಿ ದಾಖಲೆ ಪ್ರಮಾಣದ 14.8 ಬಿಲಿಯನ್ ಡಾಲರ್ ನಷ್ಟು ನಿಧಿ ಹೂಡಿಕೆಯಾಗಿದ್ದು ಇದು ಚೀನಾದಲ್ಲಿ ಹೂಡಿಕೆಯಾಗಿರುವ (4.5 ಬಿಲಿಯನ್ ಡಾಲರ್) ಗಿಂತಲೂ ಮೂರು ಪಟ್ಟು ಹೆಚ್ಚಿನದ್ದಾಗಿದೆ.
ಈ ವರ್ಷವಷ್ಟೇ ವ್ಯತ್ಯಾಸ ಹೆಚ್ಚಾಗಿದೆ. ಆದರೆ 2019 ರಲ್ಲೇ ಇದಕ್ಕೆ ಸಂಬಂಧಿಸಿದ ಲಕ್ಷಣಗಳು ಸ್ಪಷ್ಟವಾಗಿದ್ದವು. 2019 ರಲ್ಲಿ ಭಾರತದಲ್ಲಿ 10.1 ಬಿಲಿಯನ್ ಡಾಲರ್ ಮೊತ್ತದ ವೆಲ್ತ್ ಫಂಡ್ಸ್ ಹೂಡಿಕೆಯಾಗಿದ್ದರೆ ಚೀನಾದಲ್ಲಿ 6.4 ಬಿಲಿಯನ್ ಡಾಲರ್ ಮೊತ್ತದ ವೆಲ್ತ್ ಫಂಡ್ಸ್ ಹೂಡಿಕೆಯಾಗಿತ್ತು.
2015-18 ರ ಅವಧಿಯಲ್ಲಿ ಚೀನಾದಲ್ಲಿ 46 ಬಿಲಿಯನ್ ಡಾಲರ್ ನಷ್ಟು ವಿದೇಶಿ ವೆಲ್ತ್ ಫಂಡ್ಸ್ ಹೂಡಿಕೆಯಾಗಿದ್ದರೆ ಅದೇ ಅವಧಿಯಲ್ಲಿ ಭಾರತದಲ್ಲಿ 24.6 ಬಿಲಿಯನ್ ಡಾಲರ್ ನಷ್ಟು ಹೂಡಿಕೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


