Russia, China

ಇಡ್ಲಿಬ್ ನಲ್ಲಿ ಉಗ್ರರ ದಾಳಿ: 40 ಯೋಧರು ಸಾವು
ಇಡ್ಲಿಬ್ ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಸಿರಿಯಾ ಸರ್ಕಾರಿ ಪಡೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಸಿರಿಯಾದಲ್ಲಿನ ರಷ್ಯಾದ ಮರುಸಂಧಾನದ ಕೇಂದ್ರ ತಿಳಿಸಿದೆ.

ಕೊರೋನಾ ವೈರಸ್ ಎಂದರೆ ಏನು? ಇಷ್ಟೊಂದು ಆತಂಕ ಏಕೆ? ಇಲ್ಲಿದೆ ಮಾಹಿತಿ...
ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಗೆ ಹೆಸರಾಗಿರುವ ಚೀನಾ ದೇಶ ಕೊರೋನಾ ವೈರಸ್ ನಿಂದ ಆತಂಕಗೊಂಡಿದೆ.ಈ ಸೋಂಕಿನಿಂದಾಗಿ 9 ಮಂದಿ ಮೃತಪಟ್ಟಿದ್ದು, 400 ಕ್ಕೂ ಹೆಚ್ಚು ಜನರಿಗೆ ಹರಡಿರುವ ಸಾಧ್ಯತೆ ಕಂಡುಬಂದಿದೆ.

ಗುಣಮಟ್ಟ ಕೊರತೆ: ಚೀನಾದ ಆಟಿಕೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ
ಚೀನಾದ ಆಟಿಕೆಗಳಿಂದ ದೇಶೀಯ ಆಟಿಕೆ ಮಾರುಕಟ್ಟೆಗಳಿಗೆ ಹೊಡೆತವಾಗುತ್ತಿದೆ ಅಲ್ಲದೆ ಚೀನಾದ ಆಟಿಕೆಗಳ ಗುಣಮಟ್ಟ ಕಳಪೆಯಾಗಿವೆ ಎಂಬ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೇಡ್ ಇನ್ ಚೀನಾ ಆಟಿಕೆಗಳಿಗೆ ಅಧಿಕ ತೆರಿಗೆ ವಿಧಿಸಲು ಚಿಂತಿಸುತ್ತಿದೆ.

ಏಷ್ಯಾ ರಾಷ್ಟ್ರಗಳಿಗೂ ಹಬ್ಬುತ್ತಿರುವ ಕೊರೋನಾ ವೈರಸ್, ಸಾವಿನ ಸಂಖ್ಯೆ 9ಕ್ಕೆ ಏರಿಕೆ
ಸಾರ್ಸ್ ಮಾದರಿಯ ಕೊರೋನಾ ವೈರಸ್ ಈಗ ಏಷ್ಯಾದ ರಾಷ್ಟ್ರಗಳಿಗೂ ಹಬ್ಬುತ್ತಿರುವುದು ತೀವ್ರ ಆತಂಕ್ಕೆ ಕಾರಣವಾಗಿದೆ.

ವುಹಾನ್ ವೈರಸ್: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
ಹಾಂಗ್ ಕಾಂಗ್ ಸೇರಿದಂತೆ ಚೀನಾದಿಂದ ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿನ್ ಮೂಲಕ ಭಾರತಕ್ಕೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಆರಂಭಿಸಲಾಗಿದೆ. ವಿಶೇಷವಾಗಿ ದೇಹದ ಉಷ್ಣಾಂಶವನ್ನು ಪರಿಶೀಲಿಸಿ ವುಹಾನ್ ವೈರಸ್ನ ಸೋಂಕು ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ.

29 ವರ್ಷಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದ ಚೀನಾದ ಆರ್ಥಿಕತೆ
ಕಳೆದ ವರ್ಷ ಚೀನಾದ ಆರ್ಥಿಕತೆ ಶೇ.6. 1 ರಷ್ಟು ಏರಿಕೆಯಾಗಿದ್ದು, ಇದು 29 ವರ್ಷಗಳಲ್ಲಿ ಅತಿ ಕಡಿಮೆ ವಾರ್ಷಿಕ ಬೆಳವಣಿಗೆಯ ದರವಾಗಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಇಂದು ಹೇಳಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸ್ಥಾನ ಭಾರತ ಪ್ರಯತ್ನಕ್ಕೆ ಚೀನಾ ಅಡ್ಡಗಾಲು: ಪಾಕ್ ಮಿತ್ರ ರಾಷ್ಟ್ರ ಅಪಸ್ವರ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಭಾರತಕ್ಕೆ ಚೀನಾ ಅಡ್ಡಗಾಲು ಹಾಕಲು ನೋಡುತ್ತಿದೆ.

ಮಹತ್ವದ ಬದಲಾವಣೆ: ಮಿಖಾಯಿಲ್ ಮಿಶುಸ್ಟಿನ್ ರಷ್ಯಾದ ನೂತನ ಪ್ರಧಾನಿ
ಫೆಡರಲ್ ತೆರಿಗೆ ಸೇವೆಯ ಮಾಜಿ ಮುಖ್ಯಸ್ಥ ಮಿಖಾಯಿಲ್ ಮಿಶುಸ್ಟಿನ್ ಅವರನ್ನು ರಷ್ಯಾದ ನೂತನ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ ಎಂದು ಕ್ರೆಮ್ಲಿನ್ ಗುರುವಾರ ತಿಳಿಸಿದೆ.

ಗಗನಯಾನ 2022: ಆಯ್ಕೆಯಾಗಿರುವ 4 ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ
ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ 2022ರಲ್ಲಿ ನಡೆಯಲಿದ್ದು, ಗಗಯಾನಕ್ಕೆ ಆಯ್ಕೆಗೊಂಡಿರುವ ನಾಲ್ವರು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

