Team India

ಒಬ್ಬ ಬೌಲರ್ಗಾಗಿ ರೋಹಿತ್ ಅಥವಾ ಅಜಿಂಕ್ಯರನ್ನು ಕೈಬಿಡ್ತಾರಾ ನಾಯಕ ಕೊಹ್ಲಿ!
ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಆರಂಭಗೊಳ್ಳಲಿದ್ದು 11ರ ಬಳಗದಲ್ಲಿ ಯಾರನ್ನು ಆಡಿಸಬೇಕು ಎಂಬುದೇ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ಚಿಂತೆಯಾಗಿದೆ. ಇನ್ನು ಒಬ್ಬ ಹೆಚ್ಚುವರಿ...

ಎಂಎಸ್ ಧೋನಿ ದಾಖಲೆ ಧೂಳಿಪಟ ಮಾಡುವ ಸನಿಹದಲ್ಲಿ ವಿರಾಟ್ ಕೊಹ್ಲಿ!
ಕ್ರಿಕೆಟ್ ಇತಿಹಾಸದಲ್ಲಿನ ಹಲವು ದಾಖಲೆಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುರಿದು ನೂತನ ದಾಖಲೆಗಳನ್ನು ನಿರ್ಮಿಸುತ್ತಿದ್ದು ಇದೀಗ ಮಾಜಿ ನಾಯಕ ಎಂಎಸ್ ಧೋನಿ ದಾಖಲೆ ಸರಿಗಟ್ಟುವ ಸನಿಹದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಪರ್ಧೆ ಹೆಚ್ಚಿದೆ: ಕೊಹ್ಲಿ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಸಕ್ತ ವರ್ಷದ ಟೆಸ್ಟ್ ಪಂದ್ಯಗಳನ್ನು ಸ್ಪರ್ಧಾತ್ಮಕವಾಗಿಸಿದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ಮೇಲಿದ್ದ ಆಜೀವ ನಿಷೇಧ ಬಿಸಿಸಿಐನಿಂದ ತೆರವು!
ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಗೆ ಬಿಸಿಸಿಐ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದು ಸ್ಪಾಟ್ ಫಿಕ್ಸಿಂಗ್ ಸಂಬಂಧ ವಿಧಿಸಿದ್ದ ಆಜೀವ ನಿಷೇಧವನ್ನು ತೆರವುಗೊಳಿಸಿದೆ.

ದೇವರ ಕೃಪೆ ನನ್ನ ಮೇಲಿದೆ: ಕ್ರಿಕೆಟ್ ನಲ್ಲಿ 11 ವರ್ಷ ಪೂರೈಸಿದ ಕೊಹ್ಲಿ ಭಾವನಾತ್ಮಕ ಪತ್ರ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ 11ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರು ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.

ಟೀಂ ಇಂಡಿಯಾ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿ ಮರು ಆಯ್ಕೆ ಬೆನ್ನಲ್ಲೇ ವೇತನ ಇನ್ನಷ್ಟು ಜಾಸ್ತಿ?
ಶುಕ್ರವಾರವಷ್ಟೇ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಎರಡನೇ ಅವಧಿಗೆ ನೇಮಕಗೊಂಡಿರುವ ರವಿಶಾಸ್ತ್ರಿ ಅವರ ವೇತನ ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಹೊಸ ಪರಂಪರೆ ನಿರ್ಮಿಸಲು ಪ್ರಯೋಗಗಳನ್ನು ಮುಂದುವರಿಸುತ್ತೇವೆ: ರವಿಶಾಸ್ತ್ರಿ
2021ರ ಟಿ20 ವಿಶ್ವಕಪ್ ವರೆಗೂ ಟೀಂ ಇಂಡಿಯಾದ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿಯೇ ಮುಂದುವರೆಯಲಿದ್ದು ಈ ಕುರಿತು ಮಾತನಾಡಿರುವ ರವಿಶಾಸ್ತ್ರಿ ಹೊಸ ಪರಂಪರೆಯನ್ನು ನಿರ್ಮಿಸಲು ಪ್ರಯೋಗಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ರವಿಶಾಸ್ತ್ರಿ ಆಯ್ಕೆ ನಿಮಿತ್ತ ಕ್ಯಾಪ್ಟನ್ ಕೊಹ್ಲಿಯನ್ನು ಸಂಪರ್ಕಿಸಿಯೇ ಇಲ್ಲ: ಸಿಎಸಿ ಮುಖ್ಯಸ್ಥ ಕಪಿಲ್ ದೇವ್ ಅಚ್ಚರಿ ಹೇಳಿಕೆ
ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ಸಂಬಂಧ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ನಾವು ಸಂಪರ್ಕಿಸಿಯೇ ಇಲ್ಲ ಎಂದು ಹೇಳುವ ಮೂಲಕ ಭಾರತೀಯ ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಅಚ್ಚರಿ ಮೂಡಿಸಿದ್ದಾರೆ.

ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿಕೆ: ಎರಡು ವರ್ಷ ಗುತ್ತಿಗೆ ವಿಸ್ತರಣೆ
ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಪುನರ್ ಆಯ್ಕೆಯಾಗಿದ್ದಾರೆ. ಮಾಜಿ ಆಟಗಾರ ಕಪೀಲ್ ದೇವ್, ಅಂಶುಮನ್ ಗಾಯಕ್ ವಾಡ್ ಮತ್ತು ಶಾಂತ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಇಂದು ಅವರ ಗುತ್ತಿಗೆ ಅವಧಿಯನ್ನು 2021ರವರೆಗೂ ವಿಸ್ತರಿಸಿದೆ.

