ರಾಜಕೀಯಉಭಯ ಸದನಗಳಲ್ಲಿ ವಾಲ್ಮೀಕಿ ಹಗರಣದ ಜಟಾಪಟಿ: 187 ಕೋಟಿ ಅಲ್ಲ 89 ಕೋಟಿ ರೂ. ಅಕ್ರಮ ಎಂದ ಸಿಎಂ
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ವಾಲ್ಮೀಕಿ ಹಗರಣದಲ್ಲಿ ನೂರಾರು ಕೋಟಿ ಲೂಟಿಯಾಗಿದೆ. ಚರ್ಚೆಗೆ ಅವಕಾಶ ಮಾಡಕೊಡಬೇಕು ಎಂದು ಒತ್ತಾಯಿಸಿದರು.