ರವಿ ಹಂಜ್

'ಬಸವ ಮಂಟಪ' ಕೃತಿ ವಿವಾದ: ರವಿ ಹಂಜ್‌ಗೆ ಮತ್ತಷ್ಟು ಸಂಕಷ್ಟ; ಬಂಧನ ಸುಳಿವು ನೀಡಿದ ಪೊಲೀಸರು, ಹತ್ಯೆಗೆ ಬಹುಮಾನ ಘೋಷಣೆ ಮಾಡಿದವನಿಗೂ ಸಂಕಷ್ಟ..!
ರಾಜ್ಯ

'ಬಸವ ಮಂಟಪ' ಕೃತಿ ವಿವಾದ: ರವಿ ಹಂಜ್‌ಗೆ ಮತ್ತಷ್ಟು ಸಂಕಷ್ಟ; ಬಂಧನ ಸುಳಿವು ನೀಡಿದ ಪೊಲೀಸರು, ಹತ್ಯೆಗೆ ಬಹುಮಾನ ಘೋಷಣೆ ಮಾಡಿದವನಿಗೂ ಸಂಕಷ್ಟ..!

ಎರಡು ದಿನಗಳ ಹಿಂದೆ ದುಬೈಗೆ ತೆರಳಲು ಯತ್ನಿಸುತ್ತಿದ್ದ ವೇಳೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದ ರವಿ ಹಂಜ್ ಅವರಿಗೆ, ತಮ್ಮ ವಿರುದ್ಧ ಬೆಳಗಾವಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನವೆಂಬರ್ 26ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

'ಬಸವ ಮಂಟಪ' ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್
ರಾಜ್ಯ

'ಬಸವ ಮಂಟಪ' ಕೃತಿ ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಹಂಜ್

ವಿವಾದಾತ್ಮಕ 'ಬಸವ ಮಂಟಪ' ಪುಸ್ತಕಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರವಿ ಹಂಜಿಗಿಮಠ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಬಸವಣ್ಣನವರ ಬಗ್ಗೆ ಅವಹೇಳನಕಾರಿ ಬರಹ: ಲೇಖಕ ರವಿ ಹಂಜ್ ರನ್ನು ಗಡಿಪಾರು ಮಾಡಬೇಕು- ಶಾಸಕ ವಿನಯ್ ಕುಲಕರ್ಣಿ; Video
ರಾಜ್ಯ

ಬಸವಣ್ಣನವರ ಬಗ್ಗೆ ಅವಹೇಳನಕಾರಿ ಬರಹ: ಲೇಖಕ ರವಿ ಹಂಜ್ ರನ್ನು ಗಡಿಪಾರು ಮಾಡಬೇಕು- ಶಾಸಕ ವಿನಯ್ ಕುಲಕರ್ಣಿ; Video

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಕರ್ಣಿ, ರವಿ ಹಂಜ್ ಅವರು ಅನಿವಾಸಿ ಭಾರತೀಯರಾಗಿದ್ದು (NRI), ಅವರಿಗೆ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರಿಗೂ ದೇಶದಲ್ಲಿ ನೆಲೆಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಅಮೆರಿಕದಲ್ಲಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ್ದ ರವಿ ಹಂಜ್; ನೋಟಿಸ್ ಜಾರಿ, ರಾಯಭಾರ ಕಚೇರಿಗೂ ಮಾಹಿತಿ: ಖರ್ಗೆ
ರಾಜ್ಯ

ಅಮೆರಿಕದಲ್ಲಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ್ದ ರವಿ ಹಂಜ್; ನೋಟಿಸ್ ಜಾರಿ, ರಾಯಭಾರ ಕಚೇರಿಗೂ ಮಾಹಿತಿ: ಖರ್ಗೆ

ಆರಂಭದಲ್ಲಿ, ತಾವು ಭಾರತವನ್ನು ತೊರೆದು ಅಮೆರಿಕಕ್ಕೆ ಹೋಗಿರುವುದಾಗಿ ಬಿಂಬಿಸಲು ರವಿ ಹಂಜ್ ಪ್ರಯತ್ನಿಸಿದ್ದರು. ಆದರೆ, ಗೃಹ ಇಲಾಖೆಯು ಪರಿಶೀಲನೆ ನಡೆಸಿದಾಗ, ಅವರು ನೆರೆಯ ರಾಜ್ಯವೊಂದರಲ್ಲಿರುವುದು ದೃಢಪಟ್ಟಿತು ಎಂದು ಗೃಹ ಸಚಿವರು ತಿಳಿಸಿದ್ದಾರೆ.

'ಬಸವ ಮಂಟಪ' ಕೃತಿ ವಿವಾದ: 'ಲಿಂಗಹತ' ಎಂದು ಬರೆದ ರವಿ ಹಂಜ್ ಹತ್ಯೆಗೆ 5 ಲಕ್ಷ ರೂ ಬಹುಮಾನ ಘೋಷಣೆ!
ರಾಜ್ಯ

'ಬಸವ ಮಂಟಪ' ಕೃತಿ ವಿವಾದ: 'ಲಿಂಗಹತ' ಎಂದು ಬರೆದ ರವಿ ಹಂಜ್ ಹತ್ಯೆಗೆ 5 ಲಕ್ಷ ರೂ ಬಹುಮಾನ ಘೋಷಣೆ!

ಇಂದು ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿ ಹಂಜ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಲಿಂಗಾಯತ ಮುಖಂಡ ಪ್ರಕಾಶ್ ಮಹಾಜನ್ ಅವರು ಮಾತನಾಡುವ ವೇಳೆ ಈ ವಿವಾದಾತ್ಮಕ ಘೋಷಣೆ ಮಾಡಿದ್ದಾರೆ.

'ಬಸವ ಮಂಟಪ' ಕೃತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ- ಲೇಖಕ ರವಿ ಹಂಜ್ ಸ್ಪಷ್ಟನೆ
ರಾಜ್ಯ

'ಬಸವ ಮಂಟಪ' ಕೃತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ- ಲೇಖಕ ರವಿ ಹಂಜ್ ಸ್ಪಷ್ಟನೆ

ಧರ್ಮ ವಿರೋಧಿಗಳು ನನ್ನ ವಾದ ಒಪ್ಪೋದಿಲ್ಲ. ಬಸವಣ್ಣನ ವಚನಗಳ ಬಗ್ಗೆ ಆರೋಪ ಮಾಡಿದ್ದವರೂ ಓದಿಕೊಂಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಯಾವುದೇ ದೂರು ನೀಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ರವಿ ಹಂಜ್ ಹೇಳಿದ್ದಾರೆ.