ಹೊಸ ಪ್ರವಾಸಿ ತಾಣಕ್ಕೆ ಹೋಗುತ್ತಿದ್ದೀರಾ? ಮೋಸಕ್ಕೊಳಗಾಗದಿರಿ.. ಈ ಮುಖ್ಯ ಸಲಹೆಗಳನ್ನು ಪಾಲಿಸಿ...

"ಟೂರಿಸ್ಟ್ ಟ್ರ್ಯಾಪ್" (Tourist Trap) ಎಂದರೆ ಪ್ರವಾಸಿಗರನ್ನು ಆಕರ್ಷಿಸಿ, ಅವರಿಂದ ಅತಿಯಾದ ಹಣ ವಸೂಲಿ ಮಾಡುವುದಾಗಿದೆ. ಪ್ರವಾಸಿ ಸ್ಥಳಗಳ ಬಳಿ ಕೆಲವು ಜನರು ಪ್ರವಾಸಿಗರನ್ನು ಹಣದ ಮೂಲಕ ಮೋಸಗೊಳಿಸಲು ಪ್ರಯತ್ನಿಸುತ್ತಾರೆ.
FIle Photp
ಸಂಗ್ರಹ ಚಿತ್ರ

ಹೊಸ ದೇಶ ಅಥವಾ ನಗರಕ್ಕೆ ಪ್ರವಾಸ ಹೋಗಲು ಪ್ರತೀಯೊಬ್ಬರೂ ಇಷ್ಟ ಪಡುತ್ತಾರೆ. ಆದರೆ ಪ್ರವಾಸದ ವೇಳೆ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಅದು ಟೂರಿಸ್ಟ್ ಟ್ರ್ಯಾಪ್‌ಗಳು (Tourist Traps)...

1. ಏನಿದು ಟೂರಿಸ್ಟ್ ಟ್ರ್ಯಾಪ್‌ಗಳು ಅಂತೀರಾ... ಇಲ್ಲಿದೆ ಮಾಹಿತಿ...

File photo
ಸಂಗ್ರಹ ಚಿತ್ರ

"ಟೂರಿಸ್ಟ್ ಟ್ರ್ಯಾಪ್" (Tourist Trap) ಎಂದರೆ ಪ್ರವಾಸಿಗರನ್ನು ಆಕರ್ಷಿಸಿ, ಅವರಿಂದ ಅತಿಯಾದ ಹಣ ವಸೂಲಿ ಮಾಡುವುದಾಗಿದೆ. ಪ್ರವಾಸಿ ಸ್ಥಳಗಳ ಬಳಿ ಕೆಲವು ಜನರು ಪ್ರವಾಸಿಗರನ್ನು ಹಣದ ಮೂಲಕ ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ದುಬಾರಿ ಮಾರ್ಗದರ್ಶನ ಸೇವೆಗಳು, ನಕಲಿ ಟಿಕೆಟ್‌ಗಳು, ಅತಿಯಾದ ಬೆಲೆಯ ಸ್ಮರಣಿಕೆ ವಸ್ತುಗಳನ್ನು ನೀಡಿ ಮೋಸ ಮಾಡುತ್ತಾರೆ. ಇದು ನಿಮ್ಮ ಪ್ರವಾಸದ ಖುಷಿಯನ್ನು ಕಡಿಮೆ ಮಾಡಬಹುದು.

ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ...

2. ಸ್ಥಳೀಯರೊಂದಿಗೆ ಸ್ನೇಹಪರವಾಗಿರಿ, ಆದರೆ ಎಚ್ಚರಿಕೆಯಿಂದಿರಿ

File photo
ಸಂಗ್ರಹ ಚಿತ್ರ

ಸ್ಥಳೀಯರೊಂದಿಗೆ ಸ್ನೇಹ ಬೆಳೆಸುವುದು ಹೊಸ ಸ್ಥಳವನ್ನು ಚೆನ್ನಾಗಿ ತಿಳಿದುಕೊಳ್ಳಲು ಸಹಾಯಕ. ಆದರೆ ಕೆಲವರು ಪ್ರವಾಸಿಗರಿಂದ ಹಣ ಪಡೆಯಲು ಪ್ರಯತ್ನಿಸಬಹುದು.

ಪ್ರವಾಸಕ್ಕೆ ಮುನ್ನ ಸ್ವಲ್ಪ ಮಾಹಿತಿ ಸಂಗ್ರಹಿಸಿ ಮತ್ತು ಸ್ಥಳೀಯ ಭಾಷೆಯ ಕೆಲವು ಮೂಲಭೂತ ಪದಗಳನ್ನು ಕಲಿಯಿರಿ. ಇದರಿಂದ ಮೋಸ ಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ.

3. ಪೀಕ್ ಸೀಸನ್ ಪ್ರವಾಸ ತಪ್ಪಿಸಿ

File photo
ಸಂಗ್ರಹ ಚಿತ್ರ

ಪ್ರಸಿದ್ಧ ಪ್ರವಾಸಿ ಸ್ಥಳಗಳು ವರ್ಷಪೂರ್ತಿ ಇರುತ್ತವೆ, ಆದರೆ ಹಬ್ಬಗಳು ಅಥವಾ ರಜಾದಿನಗಳಲ್ಲಿ ಬೆಲೆಗಳು ಹಾಗೂ ಜನಸಂಖ್ಯೆಯೂ ಹೆಚ್ಚಾಗಿರುತ್ತದೆ.

ಹೀಗಾಗಿ ಆಫ್-ಸೀಸನ್‌ನಲ್ಲಿ ಪ್ರಯಾಣ ಮಾಡಿದರೆ ಹೋಟೆಲ್, ಆಹಾರ ಮತ್ತು ಪ್ರವೇಶ ಟಿಕೆಟ್‌ಗಳ ಬೆಲೆ ಕಡಿಮೆ ಇರುತ್ತದೆ ಮತ್ತು ಜನಸಂದಣಿ ಕೂಡ ಕಡಿಮೆ ಇರುತ್ತದೆ.

4. ಟಿಕೆಟ್‌ಗಳನ್ನು ಅಧಿಕೃತ ಮೂಲಗಳಿಂದ ಮಾತ್ರ ಖರೀದಿಸಿ

File photo
ಸಂಗ್ರಹ ಚಿತ್ರ

ಪ್ರವಾಸಿ ಸ್ಥಳಗಳ ಹೊರಗೆ ಟಿಕೆಟ್ ಮಾರುವವರು ಹೆಚ್ಚುವರಿ ಬೆಲೆ ಕೇಳಬಹುದು ಅಥವಾ ನಕಲಿ ಟಿಕೆಟ್ ನೀಡಬಹುದು. ಹೀಗಾಗಿ ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ. ಇದರಿಂದ ಕ್ಯೂನಲ್ಲಿ ನಿಲ್ಲುವ ಅವಶ್ಯಕತೆಯೂ ತಪ್ಪುತ್ತದೆ.

5. ಆಡಿಯೋ ಗೈಡ್ ಆ್ಯಪ್‌ಗಳ ಬಳಸಿ

File photo
ಸಂಗ್ರಹ ಚಿತ್ರ

ಹೆಚ್ಚಿನ ಪ್ರವಾಸಿ ಸ್ಥಳಗಳಲ್ಲಿ ಆಡಿಯೋ ಗೈಡ್ ಆ್ಯಪ್‌ಗಳು ಲಭ್ಯವಿದ್ದು, ಇವು ಹಲವು ಭಾಷೆಗಳಲ್ಲಿ ಮಾಹಿತಿ ನೀಡುತ್ತವೆ ಮತ್ತು ಸಾಮಾನ್ಯವಾಗಿ ಕಡಿಮೆ ವೆಚ್ಚ ಅಥವಾ ಉಚಿತವಾಗಿರುತ್ತವೆ. ಸ್ಥಳೀಯ ಮಾರ್ಗದರ್ಶಕರಿಗಿಂತ ಅಧಿಕೃತ ಆಡಿಯೋ ಗೈಡ್‌ಗಳು ಹೆಚ್ಚು ನಿಖರವಾದ ಮಾಹಿತಿಯನ್ನು ನೀಡುತ್ತವೆ.

6. ವೇಷಭೂಷಣ ಧರಿಸಿ ಫೋಟೋ ತೆಗೆದುಕೊಳ್ಳುವಾಗ ಜಾಗ್ರತೆ

File photo
ಸಂಗ್ರಹ ಚಿತ್ರ

ಪ್ರಸಿದ್ಧ ಸ್ಥಳಗಳ ಬಳಿ ಇತಿಹಾಸ ಪ್ರಸಿದ್ಧ ಪಾತ್ರಗಳು ಅಥವಾ ಸಿನಿಮಾ ಪಾತ್ರಗಳ ವೇಷದಲ್ಲಿ ಇರುವವರು ಕಾಣಿಸುತ್ತಾರೆ. ಅವರು ಫೋಟೋಗೆ ದೊಡ್ಡ ಮೊತ್ತದ ಟಿಪ್ ಕೇಳಬಹುದು. ಮೊದಲು ದರ ಕೇಳಿ. ನಂತರ ನಿರ್ಧಾರ ಕೈಗೊಳ್ಳಿ.

7. ದುಬಾರಿ ಬೆಲೆಯ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ

File photo
ಸಂಗ್ರಹ ಚಿತ್ರ

ಸಾಮಾನ್ಯ ಅಂಗಡಿಗಳಲ್ಲಿ ಸಿಗುವ ಕೆಲ ವಸ್ತುಗಳು ನಿಮ್ಮನ್ನು ಆಕರ್ಷಿಸಬಹುದು. ಅಂಗಡಿಯವರು ಇದಕ್ಕೆ ಹೆಚ್ಚಿನ ಬೆಲೆ ಹೇಳುವುದುಂಟು. ಯಂತ್ರದಲ್ಲಿ ತಯಾರಿಸಿದ ನಕಲಿ ವಸ್ತುಗಳೂ ಆಗಿರಬಹುದು. ಹೀಗಾಗಿ ಸ್ಥಳೀಯ ಕಲಾವಿದರು ಅಥವಾ ಕೈಗಾರಿಕರಿಂದ ನೇರವಾಗಿ ಖರೀದಿಸಿದರೆ ಉತ್ತಮ. ಇದರಿಂದ ಗುಣಮಟ್ಟದ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com