ಒಲವ ನೆನಪಿನ ಕಾಣಿಕೆ...ಬಗೆ ಬಗೆ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರೇಮಿಗಳ ದಿನಕ್ಕಾಗಿ ವಿಭಿನ್ನ ವಿನ್ಯಾಸಗಳ ಉಡುಗೊರೆಗಳು ತಯಾರಾಗಿವೆ. ಕೆಂಪು ಗುಲಾಬಿ...
ವ್ಯಾಲೆಂಟೈನ್ಸ್ ಡೇ ಗಿಫ್ಟ್...
ವ್ಯಾಲೆಂಟೈನ್ಸ್ ಡೇ ಗಿಫ್ಟ್...
Updated on: 

ವ್ಯಾಲೆಂಟೈನ್ಸ್ ಬಂದೇ ಬಿಡ್ತು ನನ್ನವಳಿಗೆ, ನನ್ನವನಿಗೆ ಏನ್ ಉಡುಗೊರೆ ಕೊಡೋದ್, ತುಂಬಾ ವಿಭಿನ್ನವಾಗಿರ್ಬೇಕು ಅಂಥ ಯೋಚಿಸಿತ್ತಾ ಇರ್ತಾರೆ. ವ್ಯಾಲೆಂಟೈನ್ಸ್ ಡೇ ಬಂತು ಅಂದ್ರೆ ಸಾಕು, ಕೆಲವರಿಗೆ ಪ್ರಪೋಸ್ ಮಾಡೋ ಯೋಚನೆ ಆದ್ರೆ, ಇನ್ನೂ ಕೆಲವರಿಗೆ ನನ್ನೋರ್ ಮುಂದೆ ಸಕತ್ತಾಗಿ ಕಾಣ್ಸ್ ಬೇಕು ಎಂಬ ಚಿಂತೆ. ಇದರ ಜೊತೆ ಜೊತೆಗೆ ಇನ್ನೇನು ಒಂದೇ ದಿನ ಬಾಕಿ ಪ್ರೇಮಿಗಳ ದಿನಕ್ಕೆ ಅಂದ್ರೆ ಸಾಕು, ಅಯ್ಯೋ ಇನ್ನೂ ಗಿಫ್ಟ್ ತಗೊಂಡಿಲ್ಲ, ಯಾವ್ದು ಸೆಲೆಕ್ಟ್ ಮಾಡೋದು, ಡಿಫರೆಂಟಾಗಿರ್ಬೇಕು , ನೋಡಿದ ತಕ್ಷಣ ಫುಲ್ ಖುಷ್ ಆಗ್ಬೇಕು ಅಂತ ಅಂದ್ಕೊಂಡು ಗಿಫ್ಟ್ ತಡಕಾಟದಲ್ಲಿ ಇರೋ ಪ್ರೇಮಿಗಳಿಗೆ ಮಾರುಕಟ್ಟೆಗಳಲ್ಲಿ ಸಜ್ಜಾಗಿವೆ ವಿಭಿನ್ನ ಮಾದರಿಯ ವ್ಯಾಲೆಂಟೈನ್ಸ್ ಡೇ ಸ್ಫೆಷಲ್ ಗಿಫ್ಟ್.



ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರೇಮಿಗಳ ದಿನಕ್ಕಾಗಿ ವಿಭಿನ್ನ ವಿನ್ಯಾಸಗಳ ಉಡುಗೊರೆಗಳು ತಯಾರಾಗಿವೆ. ಕೆಂಪು ಗುಲಾಬಿ ಪ್ರೀತಿಯ ಸಂಕೇತ, ಆದ್ರೆ ಆ ಕೆಂಪು ಗುಲಾಬಿಯಲ್ಲಿ ರಿಂಗ್ ನೀಡಿ ಪ್ರಪೋಸ್ ಮಾಡ್ಬೇಕು ಅಂತ ಐಡಿಯಾ ಯಾರಿಗೂ ಬಂದಿರೋದಿಲ್ಲ.



ಅದೇ ರೀತಿ ನಿಜವಾದ ಕೆಂಪು ಗುಲಾಬಿ ಮಾದರಿಯಲ್ಲಿ ರಿಂಗ್ ಇಡುವಂತಹ ಉಡುಗೊರೆಯನ್ನು ತಯಾರು ಮಾಡಲಾಗಿದ್ದು, ಇದರಲ್ಲಿ ರಿಂಗ್ ಇಟ್ಟು ವಿಶೇಷವಾಗಿ ತಮ್ಮ ಪ್ರಿಯರನ್ನು ಪ್ರಪೋಸ್ ಮಾಡಬಹುದಾಗಿದೆ.



 ಇನ್ನು ಹೃದಯದೊಳಗಡೆ ಎರಡು ಟೆಡ್ಡಿ ಪ್ರೇಮಿಗಳು ಅವುಗಳ ಕೈಯಲ್ಲಿ ಮತ್ತೆ ಎರಡು ಹೃದಯಗಳ ಸಂಕೇತ, ಹೃದಯದ ಸಂಕೇತ ರಿಂಗ್, ಕತ್ತಿನ ಚೈನ್, ಕೀಚೈನ್, ಸೈರಿದಂತೆ ಇತರೆ ವಿಭಿನ ಉಡುಗೊರೆಗಳು ಸಜ್ಜಾಗಿವೆ. ಇನ್ನು ಬೆಂಗಳೂರಿನ ಎಂ.ಜಿ ರೋಡ್, ಕಮರ್ಷಿಯಲ್ ಸ್ಟ್ರೀಟ್, ಜಯನಗರ, ಗಾಂಧಿಬಜಾರ್, ಮಲ್ಲೇಶ್ವರ, ವಿಜಯನಗರ, ಸೇರಿದಂತೆ ಇತರೆ ಪ್ರದೇಶಗಳಲ್ಲಿ ನಿರೀಕ್ಷೆಗಿಂತ ವಿಭಿನ್ನ ಮಾದರಿಯ ಗಿಫ್ಟ್ ಗಳನ್ನು ಕಾಣಬಹುದು.

-ಮೈನಾಶ್ರೀ.ಸಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com