ಮನರಂಜನೆ
ಆಟೋ ರಾಜ
ಆಟೋರಾಜ ಚಿತ್ರವು ಶಂಕರ್ ನಾಗ್ ಅವರನ್ನು ಖ್ಯಾತಿಯ ಉತ್ತಂಗೇರಿಸಿತ್ತು ಎಂದರೆ ತಪ್ಪಾಗಲಾರದು. 1980ರಲ್ಲಿ ತೆರೆಕಂಡ ಈ ಚಿತ್ರವನ್ನು ವಿಜಯ್ ಅವರು ನಿರ್ದೇಶಿಸಿದ್ದರು. ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಂಕರ್ ನಾಗ್ ಅವರು ಕರ್ನಾಟಕದ ಎಲ್ಲ ಆಟೋ ಚಾಲಕರ ಹೃದಯಗೆದ್ದಿದ್ದರು. ಇಂದಿಗೂ ಬಹುತೇಕ ಎಲ್ಲ ಆಟೋಗಳ ಮೇಲೆ ಶಂಕರ್ ನಾಗ್ ಅವರ ಭಾವಚಿತ್ರವನ್ನು ಕಾಣುತ್ತೇವೆ. ಇದು ಈ ಚಿತ್ರದ ಖ್ಯಾತಿಗೆ ಹಿಡಿದ ಕನ್ನಡಿಯಾಗಿದೆ.
