ಮನರಂಜನೆ
ಮೋದಿಗಾಗಿ ಹಾಡಿನ ವಿಡಿಯೋ ಮಾಡಿದ ಸೆನ್ಸಾರ್ ಮಂಡಲಿ ಅಧ್ಯಕ್ಷ
ಸೆನ್ಸಾರ್ ಮಂಡಲಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿ ಮಾಡಿರುವ ಈ ವಿಡಿಯೋ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮೋದಿ ಅಭಿಮಾನಿಗಳು ಇದನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿದ್ದರೆ, ರಾಜಕೀಯ ಲಾಭ ಪಡೆದ ನಿಹಲಾನಿ ಘನತೆ ಮರೆತು ಮಾಡಿರುವ ಕೆಟ್ಟ ವಿಡಿಯೋ ಎಂದು ಕೆಲವರು ಜರಿದಿದ್ದಾರೆ. ಮೇರಾ ದೇಶ್ ಹೈ ಮಹಾನ್, ಮೇರ ದೇಶ್ ಹೈ ಜವಾನ್ ಎಂಬ ಈ ವಿಡಿಯೋ ಸಲ್ಮಾನ್ ಖಾನ್ ಅವರ ಪ್ರೇಮ್ ರತನ್ ಧನ ಪಾಯೋ ಸಿನೆಮಾದ ಮಧ್ಯಂತರದಲ್ಲಿ ದೇಶದಾದ್ಯಂತ ತೋರಿಸಲಾಗುತ್ತಿದೆ.
